ಹಾರಕೂಡ ಹಿರೇಮಠದಲ್ಲಿ “ಬ್ರಹ್ಮಶ್ರೀ ನಾರಾಯಣ ಗುರು” ಕೃತಿ ಸಮರ್ಪಣೆ

ಹಾರಕೂಡ ಹಿರೇಮಠದಲ್ಲಿ “ಬ್ರಹ್ಮಶ್ರೀ ನಾರಾಯಣ ಗುರು” ಕೃತಿ ಸಮರ್ಪಣೆ

ಹಾರಕೂಡ ಹಿರೇಮಠದಲ್ಲಿ “ಬ್ರಹ್ಮಶ್ರೀ ನಾರಾಯಣ ಗುರು” ಕೃತಿ ಸಮರ್ಪಣೆ

ಬಸವಕಲ್ಯಾಣ ತಾಲೂಕು ಹಾರಕೂಡ ಗ್ರಾಮದ ಶ್ರೀ ಚನ್ನಬಸವ ಶಿವಯೋಗಿಗಳವರ ಸುಕ್ಷೇತ್ರ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಡಾ. ಚನ್ನವೀರ ಶಿವಾಚಾರ್ಯರಿಗೆ ಜ. 23ರಂದು ಸುಕ್ಷೇತ್ರದಲ್ಲಿ ಡಾ. ಸದಾನಂದ ಪೆರ್ಲ ಅವರು ರಚಿಸಿದ *“ಬ್ರಹ್ಮಶ್ರೀ ನಾರಾಯಣ ಗುರು”* ಕೃತಿಯನ್ನು ಸಮರ್ಪಣೆ ಮಾಡಿ ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ. ಚನ್ನವೀರ ಶಿವಾಚಾರ್ಯರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಅವರ ಜೀವನ, ತತ್ವಚಿಂತನೆ ಹಾಗೂ ಸಮಾಜ ಸುಧಾರಣೆಯ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಈ ಕೃತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಾ. ಸದಾನಂದ ಪೆರ್ಲ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಹೇಶ್ ಕಡೇಚೂರ್ ಹಾಗೂ ಚಂದಯ್ಯ ಅವರು ಉಪಸ್ಥಿತರಿದ್ದು, ಕೃತಿ ಸಮರ್ಪಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.