ಜಾತಿ ಜನಗಣತಿಗೆ ವೈಜ್ಞಾನಿಕವಾಗಿ ಆಗಲಿ: ನಾಗನಹಳ್ಳಿ ಆಗ್ರಹ

ಜಾತಿ ಜನಗಣತಿಗೆ ವೈಜ್ಞಾನಿಕವಾಗಿ ಆಗಲಿ: ನಾಗನಹಳ್ಳಿ ಆಗ್ರಹ
ರಾಜ್ಯ ಸರಕಾರದ ಜಾತಿ ಗಣತಿಗೆ ಸ್ವಾಗತವಿದ್ದುಘಿ, ಆದರೆ ಅದು ವೈಜ್ಞಾನಿಕವಾಗಿರಲಿ ರಾಜ್ಯದ ಕಟ್ಟ ಕಡೆಯ ಮನೆಗೆ ಹಾಗೂ ಕಟ್ಟ ಕಡೆಯ ವ್ಯಕ್ತಿಯ ಮನೆಗೆ ಸರಕಾರ ತಲುಪುವ ಮುಖಾಂತರ ಜಾತಿ ಜನ ಗಣತಿವಾಗಲಿ ಎಂದು ಕಲಬುರ್ಗಿ ಬಸವ ಜಯಂತಿ ಉತ್ಸವ ಸಮಿತಿ ಮಾಜಿ ಉಪಾಧ್ಯಕ್ಷರು ಹಾಗೂ ಕೋಟನೂರ್ (ಡಿ ) ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಲ್ಲಿನಾಥ ನಾಗನಹಳ್ಳಿ ಅವರು ಪತ್ರಿಕೆ ಹೇಳಿಕೆ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿಕೊಂದಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಾತಿ ಸಮೀಕ್ಷೆ ಜನ ಗಣತಿ ಎಂದರೆ, ರಾಜ್ಯದ ಪ್ರತಿಯೊಬ್ಬನನ್ನೂ ಗಣಿಸುವುದು. ಪ್ರತಿ ವ್ಯಕ್ತಿಯ ಜಾತಿಯನ್ನು ಅವನಿಂದಲೇ ಕೇಳಿ ದಾಖಲಿಸಿಕೊಳ್ಳುವುದು. ಆದರೆ ಕಾಂತರಾಜು ಅವರ ಗಣತಿಯಲ್ಲಿ ಜಾತಿ ಜನಗಣತಿ ಸರಿಯಾದ ರೀತಿಯಲ್ಲಿ ಆಗಿಲ್ಲ. ಇದಕ್ಕೆ ಈಗಾಗಲೇ ರಾಜ್ಯದ ಮಠಾಧೀಶರು ಹಾಗೂ ಹಲವು ಮುಖಂಡರು ಹೇಳಿದ್ದಾರೆ. ರಾಜ್ಯದ ಶೇ.50ಕ್ಕಿಂತ ಹೆಚ್ಚಿನ ಜನರು ನಮ್ಮ ಮನೆಗೆ ಜಾತಿ ಗಣತಿ ಮಾಡುವವರು ಬಂದಿಲ್ಲ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಆದ್ದರಿಂದ ಇದೊಂದು ಅವೈಜ್ಞಾನಿಕ ಸರ್ವೇ ಆಗಿದೆ.
ಸರಕಾರ ಸೌಲಭ್ಯ ಪಡೆಯಲು ಜಾತಿ ಗಣತಿ ಅತ್ಯವಶ್ಯವಾಗಿದೆ. ಅವರ ಅಂಕಿ ಸಂಖ್ಯೆ ಮೇಲೆ ಸರಕಾರ ಸೌಲಭ್ಯ ಪಡೆಯಬಹುದಾಗಿದೆ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಕೂಡ ಜಾತಿ ಗಣತಿ ವಿರೋಶ ಮಾಡುತ್ತಿಲ್ಲ. ಆದರೆ, ಮತ್ತೊಮ್ಮೆ ಜಾತಿ ಗಣತಿ ಆಗಲಿ ಎಂಬುದು ನಮ್ಮ ಬಯಕೆಯಾಗಿದೆ. ಕೂಡಲೇ ಮುಖ್ಯಮಂತ್ರಿಗಳು ಈ ಬಗ್ಗೆ ತಿರ್ಮಾನ ತೆಗೆದುಕೊಂಡು ಮತ್ತೊಮ್ಮೆ ಮನೆ ಮನೆಗೆ ತೆರಳಿ ಜಾತಿ ಗಣತಿ ಮಾಡಿಸಿ ವರದಿ ಪಡೆಯಲಿ ಎಂದು ಮಲ್ಲಿನಾಥ ನಾಗನಹಳ್ಳಿ ಒತ್ತಾಯಿಸಿದ್ದಾರೆ.