ಕ ರ ವೇ. ನಸಲವಾಯಿ ಮತ್ತು ಗೊರಗೇನೂರ್ ಗ್ರಾಮ ಘಟಕ ಉದ್ಘಾಟನೆ.

ಕ ರ ವೇ. ನಸಲವಾಯಿ ಮತ್ತು ಗೊರಗೇನೂರ್ ಗ್ರಾಮ ಘಟಕ ಉದ್ಘಾಟನೆ.

ಕ ರ ವೇ. ನಸಲವಾಯಿ ಮತ್ತು ಗೊರಗೇನೂರ್ ಗ್ರಾಮ ಘಟಕ ಉದ್ಘಾಟನೆ.

ಯಾದಗಿರ/ಗುರುಮಿಠಕಲ್ /

ಇಂದು ದಿನಾಂಕ 24/10/2024 ರಂದು ಕರ್ನಾಟಕದ ಗಡಿ ಭಾಗವಾದ ಗುರುಮಠಕಲ್ ತಾಲೂಕಿನ ನಸಲವಾಯಿ ಮತ್ತು ಗೊರಗೇನೂರ್ ಗ್ರಾಮ ಘಟಕವನ್ನು ಗುರುಮಠಕಲ್ ತಾಲೂಕು ಅಧ್ಯಕ್ಷರಾದ ಶ್ರೀ ಶರಣಬಸ್ಸಪ್ಪ ಎಲ್ಹೇರಿ ಅವರ ನೇತೃತ್ವದಲ್ಲಿ ರಚನೆ ಮಾಡಲಾಯಿತು.

 ಈ ಭಾಗವು ತೆಲಂಗಾಣ ರಾಜ್ಯಕ್ಕೆ ಹತ್ತಿರ ಇರುವದರಿಂದ ತೆಲುಗು ಪ್ರಭಾವಾ ಹೆಚ್ಚಿರುವ ಕಾರಣ ಇಂದು ನಾವುಗಳು ಕನ್ನಡ ಭಾಷೆ ,ನೆಲ ,ಜಲ ವಿಚಾರ ಬಂದಾಗ ಅದರ ಉಳಿವಿಗಾಗಿ ಸಾದಾ ಹೋರಾಟಕ್ಕೆ ಸಿದ್ಧವಾಗಬೇಕು ಮತ್ತು ಅತೀ ಹೆಚ್ಚು ನಮ್ಮ ಕನ್ನಡ ಭಾಷೆಯನ್ನು ಬಳಸಬೇಕು ಶಾಲೆಗಳಲ್ಲಿ ಶಿಕ್ಷಕರು ಕನ್ನಡದಲ್ಲೇ ಮಾತಾಡಬೇಕು ಮತ್ತು ಕನ್ನಡ ರಾಜ್ಯೋತ್ಸವವನ್ನು ಈ ಗಡಿಭಾಗದಲ್ಲಿ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ಆಚರಿಸಬೇಕೆಂದು ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕ ಕಾರ್ಯದರ್ಶಿ ಅಬ್ದುಲ್ ರಿಯಾಜ್ ,ತಾಲೂಕಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇದಾ ,ತಾಲೂಕ ಯುವ ಘಟಕ ಪ್ರಧಾನ ಕಾರ್ಯದರ್ಶಿ ಲಿಂಗಾರೆಡ್ಡಿ ಪಾಟೀಲ್ ವಡವಟ್ , ವಿರೂಪಾಕ್ಷಯ್ಯ , ಶ್ರೀಕಾಂತ್ ವಿಶ್ವಕರ್ಮ ,ಶ್ರೀಕಾಂತ ನಸಲವಾಯಿ ,ರಾಕೇಶ್ ,ಶೇಖರ್ ,ದಾನಪ್ಪ ,ರಾಮಾಂಜನೆಯಲು ,ಅಂಜಪ್ಪ ಇನ್ನು ಹಲವಾರು ಕರವೇ ಸದಸ್ಯರು ಉಪಸ್ಥಿತರಿದ್ದರು.

(ಗುರುಮಠಕಲ್ ತಾಲೂಕ ವರದಿಗಾರರು ಭೀಮರಾಯ ಯಲ್ಹೇರಿ)