ರಾಮ ಮಂದಿರಕ್ಕೆ 2 ವರ್ಷ, ಸಗರದಲ್ಲಿ ರಾಮನಿಗೆ ವಿಶೇಷ ಪೂಜೆ.
ರಾಮ ಮಂದಿರಕ್ಕೆ 2 ವರ್ಷ, ಸಗರದಲ್ಲಿ ರಾಮನಿಗೆ ವಿಶೇಷ ಪೂಜೆ.
ಶಹಾಪುರ : ಅಯೋಧ್ಯೆಯಲ್ಲಿ ನಿರ್ಮಿಸಿದ ರಾಮಮಂದಿರಕ್ಕೆ ಎರಡು ವರ್ಷಗಳ ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಪ್ರಯುಕ್ತ ಸಗರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶ್ರೀ ರಾಮ ಮೂರ್ತಿಗೆ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಪೂಜೆ ನೆರವೇರಿಸಿದ ಬಿಜೆಪಿ ಯುವ ಮುಖಂಡ ತಿರುಪತಿ ಹತ್ತಿಕಟಗಿ ದಂಪತಿಗಳು,ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಪಂಚಾಮೃತದಿಂದ ಅಭಿಷೇಕ ಮಾಡಿಸಿ,ಬಳಿಕ ತುಪ್ಪದ ಜ್ಯೋತಿಯನ್ನು ಬೆಳಗಿದರು ಹಾಗೂ ಸಿಹಿ ತಿಂಡಿಗಳಾದ ಕೇಸರಿ,ಅನ್ನ, ಪಂಚಾಮೃತ ಮುಂತಾದ ವಾದ್ಯಗಳು ರಾಮನಿಗೆ ಪ್ರಿಯವಾದ ನೈವೇದ್ಯವನ್ನು ಅರ್ಪಿಸಿ ಭಕ್ತಿ ಭಾವ ಸಲ್ಲಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವ ಸದ್ಭಕ್ತರು ದರ್ಶನ ಪಡೆದರು,ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು, ಅನಿವಾರ್ಯ ಕಾರಣಗಳಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗದವರು,ಮನೆಯಲ್ಲಿ ಶ್ರೀ ರಾಮ ಜಪವನ್ನು ಪಟಿಸಬೇಕೆಂದು ಕರೆ ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಹಿರೇಮಠದ ಶ್ರೀ ಮರುಳ ಮಹಾಂತ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು,ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಅಪ್ಪು ಪಾಟೀಲ್,ಡಾ. ಚಂದ್ರಶೇಖರ ಸುಬೇದಾರ ಭೀಮರಾಯ ಸೇರಿ,ನಿಂಗಣ್ಣ ಮುದ್ದಾ,ಗಿರೀಶ್ ಶಿದ್ರಾ,ಅಡಿವಪ್ಪ ಜಾಕಾ,ಗುರು ಕಾಮಾ,ರಾಘು ಯಕ್ಷಂತಿ,ಶಿವಣ್ಣಗೌಡ ಗೌಡರ್ ಹಾಗೂ ನೂರಾರು ಕಾರ್ಯಕರ್ತರು ಹಾಗೂ ರಾಮಭಕ್ತರು ಭಾಗವಹಿಸಿದ್ದರು.
