ಜಿಲ್ಲಾ ಸರ್ಕಾರಿ ವಕೀಲರಾಗಿ ಮಹೇಶ್ ಹೊಸೂರ್ಕರ್ ಅಧಿಕಾರ ಸ್ವೀಕರಿಸಿದರು

ಜಿಲ್ಲಾ ಸರ್ಕಾರಿ ವಕೀಲರಾಗಿ ಮಹೇಶ್ ಹೊಸೂರ್ಕರ್ ಅಧಿಕಾರ ಸ್ವೀಕರಿಸಿದರು
ಕಲಬುರಗಿ:ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೂತನವಾಗಿ ನೇಮಕಗೊಂಡ ನ್ಯಾಯವಾದಿ ಮಹೇಶ್ ಹೊಸೂರ್ಕರ್ ಅವರು ಇಂದು ಅಧಿಕೃತವಾಗಿ ಕಾರ್ಯಭಾರ ಸ್ವೀಕರಿಸಿದರು. ಅವರು ಮಾಜಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಉಪಮಹಾಪೌರರಾಗಿಯೂ ಸೇವೆ ಸಲ್ಲಿಸಿದ್ದರು.
ನಿರ್ಗಮಿತ ಸರ್ಕಾರಿ ವಕೀಲರಾದ ಅಮರ ಪಾಟೀಲ ಕೊರಳ್ಳಿ ಅಧಿಕಾರ ಹಸ್ತಾಂತರ ಮಾಡಿ, ತಮ್ಮ ಮೂರು ವರ್ಷಗಳ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಸರ್ಕಾರಿ ಭೂ ವಿವಾದಗಳ ವಿಲೇವಾರಿಯಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಜೊತೆಗೆ ಮಹೇಶ್ ಹೊಸೂರ್ಕರ್ ಇನ್ನೂ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಲಿ ಎಂದು ಹಾರೈಸಿ ಶುಭಾಶಯ ಕೋರಿದರು.
ಮೊದಲಿಗೆ, ಜಿಲ್ಲಾ DGP ಶ್ರೀಮತಿ ಅತಿಯಾ ಸುಲ್ತಾನ, ಜಿಲ್ಲಾ ADGP ಶ್ರೀಮತಿ ಶರಣಮ್ಮ ಪಾಟೀಲ ಹಾಗೂ ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಸಾರ ಹೊಸ ಜಿಲ್ಲಾ ಸರ್ಕಾರಿ ವಕೀಲರಿಗೆ ಶಾಲು ಹೊದಿಸಿ ಶುಭಾಶಯ ಸಲ್ಲಿಸಿದರು.
ನೇಕಾರ ನ್ಯಾಯವಾದಿಗಳ ಸ್ನೇಹಿತರ ಬಳಗದ ವತಿಯಿಂದ ಮಹೇಶ್ ಹೊಸೂರ್ಕರ್ ಅವರಿಗೆ ಸನ್ಮಾನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಪ್ತ ನೇಕಾರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ, ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ, ಸಹ ಕಾರ್ಯದರ್ಶಿಗಳು ಸಂತೋಷ್ ಗುರಮೀಟಕಲ,ಸತೀಶ್ ಜಮಖಂಡಿ,ಜೆನವೇರಿ ವಿನೋದ ಕುಮಾರ,ರಾಜಶೇಖರ್ ಸಬಸಗಿ, ವಕೀಲರಾದ ,ಪ್ರಶಾಂತ್ ಮ್ಯಾಕೇರಿ,ನಾಗೇಶ್ ಕೊರಳ್ಳಿ,ಸಂಜೀವ್ ಕುಮಾರ ಹೊಡೆಲ, ಭೀಮಾಶಂಕರ್ ಗುಂಜೊಟಿ ಹಾಗೂ ಖ್ಯಾತ ಉದ್ಯಮಿ ಅರವಿಂದ ವಿ. ಗುತ್ತೇದಾರ ಉಪಸ್ಥಿತರಿದ್ದರು.