ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷರಾಗಿ ಕಲಬುರಗಿ ಮೂಲದ ಡಾ, ಮಲ್ಲಿಕಾರ್ಜುನ ಎಸ್ ನಾಸಿ ಆಯ್ಕೆ

ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷರಾಗಿ ಕಲಬುರಗಿ ಮೂಲದ ಡಾ, ಮಲ್ಲಿಕಾರ್ಜುನ ಎಸ್ ನಾಸಿ ಆಯ್ಕೆ
ಕಲಬುರಗಿ:ಅಮೂರ್ತ ಜಾನಪದ ಕಲೆಗಳ ಸಂರಕ್ಷಣೆಗಾಗಿ ಯುನೋಸ್ಕೋ ಮಾನ್ಯತೆ ಪಡೆದ,ನಾಡೋಜ ಡಾ. ಎಚ್ ಎಲ್ ನಾಗೇಗೌಡರಿಂದ ಸ್ಥಾಪಿತ ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ನೂತನ ಅಧ್ಯಕ್ಷರಾಗಿ ಕೇರಳದ ಹಿರಿಯ ವೈದ್ಯ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ ಮಲ್ಲಿಕಾರ್ಜುನ ಎಸ್ ನಾಸಿಯವರನ್ನು ಕೇಂದ್ರ ಸಮಿತಿ ಅಧ್ಯಕ್ಷ ಡಾ. ಹಿ ಚಿ ಬೋರಲಿಂಗಯ್ಯ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಮೂಲತಃ ಕಲಬುರಗಿ ನಗರದ ಸಂತೋಷ್ ಕಾಲನಿಯವರಾದ ನಾಸಿಯವರು ಇಲ್ಲಿನ ಎಸ್ ಬಿ ಆರ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಎಂ ಆರ್ ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಪೂರೈಸಿ 2004ರಲ್ಲಿ ಕೇರಳದ ಕೊಚ್ಚಿನ್ ಗೆ ಆಗಮಿಸಿದರು.
2016ರಲ್ಲಿ ಪೋತನಿಕ್ಕಾಡ್ ನಲ್ಲಿ ಸೈನ್ಟ್ ಮೇರಿಸ್ ಎಂಬ ಆಸ್ಪತ್ರೆಯನ್ನು ತೆರೆದು ಇಲ್ಲಿ ಜನಾನುರಾಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಈ ಪ್ರದೇಶದಲ್ಲಿರುವ ಕನ್ನಡ ಭಾಷಿಗರನ್ನುಒಗ್ಗೂಡಿಸಿ ಅವರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಕಲೆಗಳನ್ನು ಬೆಳೆಸಲು ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ, ಕನ್ನಡ ಮತ್ತು ಮಲೆಯಾಲ ಭಾಷಾ ಸೌಹಾರ್ದ ತೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ
ಇವರ ಕನ್ನಡಪರ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕಳೆದ ಜುಲೈ ತಿಂಗಳಲ್ಲಿ ಮುಂಬೈನಲ್ಲಿ ನಡೆದ ಹೊರನಾಡ ಕನ್ನಡ ಸಂಸ್ಕೃತಿ ಸಮ್ಮೇಳನ ದಲ್ಲಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಕೇರಳದ ಅನೇಕ ಸಂಘ ಸಂಸ್ಥೆಗಳು ಇವರ ಜನಪರ ಸೇವೆಯನ್ನು ಗುರುತಿಸಿ ಗೌರವಿಸಿದೆ ಇತ್ತೀಚಿಗೆ ಕೇರಳದ ರಾಜಧಾನಿ ತಿರುವನಂತಪುರದ ಭಾರತ್ ಭವನದಲ್ಲಿ ನಡೆದ ಅನಂತಪುರಿ ಗಡಿನಾಡ ಕನ್ನಡ ಉತ್ಸವದಲ್ಲಿ ಕೇರಳದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಿ ಆರ್ ಅನಿಲ್ ರವರು ಇವರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಜಾನಪದ ಪರಿಷತ್ತಿನ ನೂತನ ಪಧಾಧಿಕಾರಿಗಳು
ಮಂಜುನಾಥ ಆಳ್ವ ಮಡ್ವ, (ಉಪಾಧ್ಯಕ್ಷರು), ರವಿ ನಾಯಿಕಾಪು (ಪ್ರಧಾನ ಕಾರ್ಯದರ್ಶಿ), ಮಹಾಲಿಂಗ ಕೆ (ಕಾರ್ಯದರ್ಶಿ), ಪೃಥ್ವಿರಾಜ್ ಶೆಟ್ಟಿ ಕುಂಬಳೆ, (ಕೋಶಾಧಿಕಾರಿ)
ಗೌರವ ಸಲಹೆಗಾರರಾಗಿ, ಪ್ರೊ ಎ ಶ್ರೀನಾಥ್, ಎ ಆರ್ ಸುಬ್ಬಯಕಟ್ಟೆ
ಸದಸ್ಯರು :ಗಂಗಾಧರ ತೆಕ್ಕೆಮೂಲೆ, ಮಹೇಶ್ ಪುಣಿಯೂರು, ಸಂಧ್ಯಾಗೀತಾ ಬಾಯಾರು,ಪತ್ರಕರ್ತ ಪುರುಷೋತಮ ಪೆರ್ಲ, ಅಖಿಲೇಶ್ ನಗುಮುಗಮ್,
ಝಡ್. ಎ ಕಯ್ಯಾರ್, ಶ್ರೀಕಾಂತ್ ನೆಟ್ಟಣಿಗೆ, ಅಸೀಸ್ ಚೇವಾರ್ ಅವರನ್ನು ನೇಮಕ ಮಾಡಲಾಗಿದೆ.
ನಾಸಿ ಆಯ್ಕೆಗೆ ಡಾ.ಕ ಸದಾನಂದ ಪೆರ್ಲ ಅಭಿನಂದನೆ
ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿದ ಮಲ್ಲಿಕಾರ್ಜುನನಸಿ ಅವರಿಗೆ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿನಂದನೆ ಸಲ್ಲಿಸಿದ್ದಾರೆ.
ಡಾಕ್ಟರ್ ಮಲ್ಲಿಕಾರ್ಜುನ ನಾಸಿ ಅವರು ಕನ್ನಡ ಭಾಷೆ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವಲ್ಲಿ ಕೇರಳದ ಮಣ್ಣಿನಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದು ಅವರನ್ನು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಕಾರ್ಯವಾಗಿದೆ. ಭಾಷಾ ಸಾಮರಸ್ಯದೊಂದಿಗೆ ಕನ್ನಡ ಮತ್ತು ಜಾನಪದವನ್ನು ಕೇರಳದ ಮಣ್ಣಿನಲ್ಲಿ ಕಟ್ಟಿ ಬೆಳೆಸಲು ವಿಸ್ತೃತವಾದ ಯೋಜನೆಗಳನ್ನು ರೂಪಿಸಲಿ ಎಂದು ಡಾ. ಶುಭ ಹಾರೈಸಿದರು