ವಿಧ್ಯಾರ್ಥಿಗಳ ಜೀವನದಲ್ಲಿ ಪ್ರತಿಯೊಂದು ಅಂಕದ ಹಿಂದೆ ಅವರ ಕಥೆ ಹಾಗೂ ವ್ಯಥೆ ಇರುತ್ತದೆ ಅಶೋಕ್ ಶಾಸ್ತ್ರೀ

ವಿಧ್ಯಾರ್ಥಿಗಳ ಜೀವನದಲ್ಲಿ ಪ್ರತಿಯೊಂದು ಅಂಕದ ಹಿಂದೆ ಅವರ  ಕಥೆ ಹಾಗೂ ವ್ಯಥೆ ಇರುತ್ತದೆ ಅಶೋಕ್ ಶಾಸ್ತ್ರೀ

ವಿಧ್ಯಾರ್ಥಿಗಳ ಜೀವನದಲ್ಲಿ ಪ್ರತಿಯೊಂದು ಅಂಕದ ಹಿಂದೆ ಅವರ ಕಥೆ ಹಾಗೂ ವ್ಯಥೆ ಇರುತ್ತದೆ ಅಶೋಕ್ ಶಾಸ್ತ್ರೀ 

ಕಲಬುರ್ಗಿ: ವಿದ್ಯಾರ್ಥಿಗಳ ಪ್ರತಿಯೊಂದು ಅಂಕದ ಹಿಂದೆ ಅವರ ಪರಿಶ್ರಮ, ಸಾಧನೆ, ಸಂತೋಷ, ನೋವು ಎಲ್ಲವನ್ನು ಒಳಗೊಂಡಿರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗದ ಉಪನಿರ್ದೇಶಕರಾದ ಅಶೋಕ್ ಶಾಸ್ತ್ರೀ ಹೇಳಿದರು ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವ್ಹಿ ಜಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2025 ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪ್ರಥಮ ಪರೀಕ್ಷೆಗಳ ಇತಿಹಾಸ ವಿಷಯದ ಮೌಲ್ಯ ಮಾಪನ ಕೇಂದ್ರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು 

ಪ್ರತಿಯೊಬ್ಬ ಮೌಲ್ಯ ಮಾಪಕರು ಅತ್ಯಂತ ನಿಷ್ಠೆಯಿಂದ ಹಾಗೂ ಶೃದ್ಧೆಯಿಂದ ಮೌಲ್ಯ ಮಾಪನ ಮಾಡಿದಾಗ ಮಾತ್ರ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಸಾಧ್ಯವಿದೆ ಎಂದು ಹೇಳಿದರು 

ಯಾವ ಶಿಕ್ಷಕರು ನಿರಂತರ ಅಧ್ಯಯನ ಶೀಲನಾಗಿ ಪಾಠ ಪ್ರವಚನ ಮಾಡುತ್ತಾರೆಯೋ ಅವರು ಯಶಸ್ವಿ ಶಿಕ್ಷಕರಾಗಿ ಹೊರ ಹೊಮ್ಮುತ್ತಾರೆ ಅಂತಹ ಶಿಕ್ಷಕರು ಯಶಸ್ವಿಯಾಗಿ ಯಾವುದೇ ಲೋಪವಿಲ್ಲದೆ ಮೌಲ್ಯಮಾಪನ ಮಾಡುತ್ತಾರೆ ಎಂದು ಹೇಳಿದರು 

ಶಿಕ್ಷಣದಲ್ಲಿ, ಮೌಲ್ಯಮಾಪನ ಎಂಬ ಪದವು ವಿದ್ಯಾರ್ಥಿಗಳ ಶೈಕ್ಷಣಿಕ ಸಿದ್ಧತೆ, ಕಲಿಕೆಯ ಪ್ರಗತಿ, ಕೌಶಲ್ಯ ಸಂಪಾದನೆ ಅಥವಾ ಶೈಕ್ಷಣಿಕ ಅಗತ್ಯಗಳನ್ನು ಮೌಲ್ಯಮಾಪನ ಮಾಡಲು, ಅಳೆಯಲು ಮತ್ತು ದಾಖಲಿಸಲು ಶಿಕ್ಷಕರು ಬಳಸುವ ವಿವಿಧ ವಿಧಾನಗಳು ಅಥವಾ ಸಾಧನಗಳನ್ನು ಸೂಚಿಸುತ್ತದೆ ಎಂದು ಹೇಳಿದರು

*ವ್ಹಿ ಜಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮೌಲ್ಯ ಮಾಪನ ಕೇಂದ್ರ ಇಲ್ಲಿ ಕಾರ್ಯ ನಿರ್ವಹಿಸಿದ ಎಲ್ಲ ಮೌಲ್ಯ ಮಾಪಕರ ಮನ ಗೆದ್ದಿದೆ ಎಂದು ಹೇಳಿದರು. ಸಂಸ್ಥೆಯವರು ಯಾವುದೇ ಉಪನ್ಯಾಸಕರಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯಗಳನ್ನು ಒದಗಿಸಿದ್ದಾರೆ.ಎಂದು ಶಿಬಿರಾಧಿಕಾರಿಗಳಿಗೆ ಅಭಿನಂದನೆಗಳು ತಿಳಿಸಿದರು, ಪ್ರತಿಯೊಬ್ಬ ಮೌಲ್ಯ ಮಾಪಕರಿಗೆ ಯಾವುದೇ ಸಮಸ್ಯೆಯಿಲ್ಲದ ಹಾಗೆ ಕಾರ್ಯ ನಿರ್ವಹಿಸಿದ ಇತಿಹಾಸ ಮೌಲ್ಯಮಾಪನ ಕೇಂದ್ರದ ಕಚೇರಿಯ ಉಪ ಮುಖ್ಯ ಮೌಲ್ಯ ಮಾಪಕರಾದ ಐ ಕೆ ಪಾಟೀಲ್ ಅವರು ಶ್ರಮಜೀವಿಗಳಾಗಿದ್ದು ಅವರ ಹೆಸರಿನಂತೆ ಎಲ್ಲ ಉಪನ್ಯಾಸಕರ ಮನಗೆದ್ದು ಅವರ ಮನಸ್ಸಿನಲ್ಲಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು*

ಇದೆ ಸಂದರ್ಭದಲ್ಲಿ ಇತಿಹಾಸ ವಿಭಾಗದಿಂದ ನಿವೃತ್ತರಾದರು 6 ಜನ ಹಾಗೂ ಪಿ ಎಚ್ ಡಿ ಪಡೆದ ಒಬ್ಬ ಉಪನ್ಯಾಸಕರು ಹಾಗೂ ಪ್ರಾಚಾರ್ಯರನ್ನು ಮೌಲ್ಯ ಮಾಪನ ಕೇಂದ್ರದ ಯಶಸ್ವಿಗೆ ಕಾರಣಿಭೂತರಾದ ಗಣಕ ಯಂತ್ರ ಸಹಾಯಕರನ್ನು ಹಾಗೂ ಡಿ ದರ್ಜೆ ನೌಕರರನ್ನು ಸನ್ಮಾನಿಸಲಾಯಿತು 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರು ಹಾಗೂ ಶಿಬಿರಾಧಿಕಾರಿಗಳಾದ ಡಾ ಮೋಹನರಾಜ ಪತ್ತಾರ ಮಾತನಾಡಿ ಇಲಾಖೆಯ ವಹಿಸಿದ ಜವಾಬ್ದಾರಿಯನ್ನು ನಮ್ಮ ಸಂಸ್ಥೆಯ ಸಹಕಾರದಿಂದ ನಿರಾಂತಕವಾಗಿ ನಡೆಸಿದ್ದೇನೆ ಎಂದು ಹೇಳಿದರು 

ಈ ಸಂದರ್ಭದಲ್ಲಿ ಮೌಲ್ಯ ಮಾಪನ ಕೇಂದ್ರದ ವೀಕ್ಷಣಾ ಧಿಕಾರಿ ಸುಜಾತಾ ಬಿರಾದಾರ, ಮುಖ್ಯಾಧಿಕಾರಿ ಜಯಶ್ರೀ ಪಾಟೀಲ್, ಕಚೇರಿ ಉಪ ಮುಖ್ಯ ಮೌಲ್ಯ ಮಾಪಕರಾದ ವಿಜಯಲಕ್ಷ್ಮಿ ಅಲ್ದಿ, ಮಂಜುಳಾ ಪಾಟೀಲ್, ಐ ಕೆ ಪಾಟೀಲ್, ಕಲಬುರ್ಗಿ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಜೆ ಮಲ್ಲಪ್ಪ, ಬೀದರ್ ಜಿಲ್ಲಾ ಅಧ್ಯಕ್ಷರಾದ ಉಮಾಕಾಂತ ಸೂರ್ಯವಂಶಿ, ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ಪ್ರಭು ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಚಂದ್ರಶೇಖರ ದೊಡಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಭಗವಾನ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.