ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ: ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲು ಮುಖ್ಯ ಗುರುಗಳು ಶ್ರಮಿಸಿ- ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ:ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲು ಮುಖ್ಯ ಗುರುಗಳು ಶ್ರಮಿಸಿ- ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್
ಕಲಬುರಗಿ. ಜ,22.(ಕಲ್ಯಾಣ ಕಹಳೆ ವಾರ್ತೆ)-ಜಿಲ್ಲೆಯ ಪ್ರತಿಯೊಂದು ಶಾಲೆಯೂ ನೂರಕ್ಕೆ ನೂರು ಫಲಿತಾಂಶ ಶೇ. 100 ರಷ್ಟು ಫಲಿತಾಂಶ ಪಡೆಯುವ ಗುರಿಯನ್ನು ಹೊಂದಿರಬೇಕು. ಕೇವಲ ತೇರ್ಗಡೆ ಮುಖ್ಯವಲ್ಲ, ವಿದ್ಯಾರ್ಥಿಗಳು ಪಡೆಯುವ ಅಂಕಗಳ ಗುಣಮಟ್ಟವೂ ಸುಧಾರಿಸಬೇಕು ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಹೇಳಿದರು.
ಶುಕ್ರವಾರ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಹಾಗು ಜಿಲ್ಲಾ ಪಂಚಾಯತ್ ಕಲಬುರಗಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗ, ಕಲಬುರಗಿ, ಕಲಬುರಗಿ ಜಿಲ್ಲೆಯ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲಾ ಮುಖ್ಯ ಗುರುಗಳು 2025-26 ನೇ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
2025-26 ನೇ ಸಾಲಿನ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ-1 ರ ಫಲಿತಾಂಶ ವಿಶ್ಲೇಷಣಿ ತಾಲೂಕುವಾರು ಮತ್ತು ಶಾಲವಾರು ಮಾಹಿತಿ ಪಡೆದುಕೊಂಡರು ಎಸ್.ಎಸ.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆ- 2 ಮತ್ತು 3 ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಮಕ್ಕಳು ಚನ್ನಾಗಿ ಬರೆಯಲು ಶಿಕ್ಷಕರು ಪ್ರಯತ್ನಿಸಬೇಕು ಎಂದರು.
ಫಲಿತಾಂಶ ಸುಧಾರಣೆ ಡಿಡಿಪಿಐ, ಡಯೆಟ್, ಬಿಇಓ, ಮಾಡಬೇಕಾಗಿರೋ ಕೆಲಸ ಅಲ್ಲ, ಎಲ್ಲ ಶಿಕ್ಷಕರು ಮಾಡಬೇಕಾಗಿರುವ ಕೆಲಸ ಎಂದು ಖಾರವಾಗಿ ಹೇಳಿದರು
ಸರ್ಕಾರಿ ಅನುದಾನಿತ ಮತ್ತು ಅನುದಾನಿತ ರಹಿತ ಶಾಲೆಯಿಂದ ಹಾಜರಾಗದ ಮುಖ್ಯ ಶಿಕ್ಷಕರಿಗೆ ನೋಟಿಸ ಜಾರಿ ಮಾಡವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ ಅವರಿಗೆ ಸೂಚಿಸಿದರು.
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅಂತಹ ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆದು ಅವರಿಗೆ ವಿಶೇಷ ತರಬೇತಿ ನೀಡಬೇಕು. ಕಳೆದ 1 ವರ್ಷದಿಂದ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆ ಕಡಿಮೆ ಸ್ಥಾನ ಪಡೆದಿದ್ದು, ಅದನ್ನು ಸುಧಾರಿಸಲು, ಮಕ್ಕಳು ಉತ್ತೀರ್ಣರಾಗಲು ಕ್ರಮವಹಿಸಿ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಮಾತನಾಡಿ, ಪರೀಕ್ಷೆಗೆ ಇನ್ನೂ 54 ದಿನಗಳು ಮಾತ್ರ ಉಳಿದಿವೆ ಇದರಲ್ಲಿ ನಿಮ್ಮ ಶ್ರಮ ಅಗತ್ಯವಿದೆ ಹಾಗಾಗಿ ನಿಮ್ಮ ಸಲಹೆ ಸೂಚನೆಗಳೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳ ಪ್ರಗತಿಯ ಬಗ್ಗೆ ಚರ್ಚಿಸಲು ನಿಯಮಿತವಾಗಿ ಪೋಷಕರ ಸಭೆ ಕರೆದು, ಮನೆಯಲ್ಲಿ ವಿದ್ಯಾರ್ಥಿಗಳ ಓದಿಗೆ ಪೂರಕ ವಾತಾವರಣ ಇರುವಂತೆ ನೋಡಿಕೊಳ್ಳಲು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ಶಿಕ್ಷಣವು ಸಮಾಜದ ಬೆನ್ನೆಲುಬು. ಎಸ್‌ಎಸ್‌ಎಲ್‌ಸಿ ಫಲಿತಾಂಶವು ವಿದ್ಯಾರ್ಥಿಗಳ ಭವಿಷ್ಯದ ದಾರಿಯನ್ನು ನಿರ್ಧರಿಸುತ್ತದೆ. ಹೀಗಾಗಿ ಜಿಲ್ಲೆಯ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಮುಖ್ಯಗುರುಗಳ ಕಾರ್ಯ ನಿರ್ವಹಿಸಬೇಕು ಎಂದರು.
ಮೈಕ್ರೋ ಪ್ಲಾನ್ ಮಾಡಿಕೊಳ್ಳಿ, ಸರ್ಕಾರದ ಸುತ್ತೋಲೆಯ ಅಂಶಗಳನ್ನು ಪ್ರಾಕ್ಟಿಸ್ ಮಾಡಿಸಿ, ಸರ್ಕಾರದ ಕಾರ್ಯಕ್ರಮಗಳಾದ 29 ಅಂಶಗಳು, 40+ ಮಿಷನ್ ಅನುಸರಿಸಿ ಹಾಗೂ ನೀಲನಕ್ಷೆ ಪ್ರಕಾರ ಅಭ್ಯಾಸ ಮಾಡಿಸಿ,
ಸಾಧ್ಯ ಆದಲ್ಲಿ ನಾವು ವಾಟ್ಸ್ ಆ್ಯಪ್ ಗ್ರೂಪ್ ಮಾಡಿ ಪರೀಕ್ಷೆಗೆ ವಿವಿಧ ಸಹಾಯಕಾರಿ ಬೋಧನಾ ಅಂಶಗಳನ್ನು ಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.
ಕಾರ್ಯಾಗಾರದಲ್ಲಿ ಕಲಬುರಗಿ ಜಿಲ್ಲೆಯ, ಕಲಬುರಗಿ ವಿಭಾಗದ ತಾಲ್ಲೂಕುಗಳ ಶಾಲೆಗಳ ಮಾಹಿತಿ, ಫಲಿತಾಂಶಗಳು, ವಿದ್ಯಾರ್ಥಿಗಳ ಉತ್ತೀರ್ಣ, ಅನುತ್ತೀರ್ಣ, ಮುಂತಾದ ಅಂಶಗಳನ್ನು ಪಿ.ಪಿ.ಟಿ. ಮೂಲಕ ವಿವರಿಸಿದರು.
ಅಫಜಲಪುರ ತಾಲೂಕಿನ ಕೋಗನೂರು ಶಾಲೆಯ ಮುಖ್ಯಗುರುಗಳು ಮಾತನಾಡಿ, ವಿದ್ಯಾರ್ಥಿಗಳನ್ನು ಶಾಲೆಯ ಪ್ರಾರಂಭದಲ್ಲೇ 4 ನಾಲ್ಕು ಮಕ್ಕಳನ್ನು ಒಂದು ಶಿಕ್ಷಕರಿಗೆ ದತ್ತು ತೆಗೆದುಕೊಂಡು ವಿದ್ಯಾರ್ಥಿಗಳ ಗುಂಪು ಮಾಡಿ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಕನ್ನಡ, ಇಂಗ್ಲಿಷ್, ಹಿಂದಿ ಎಲ್ಲಾ ವಿಷಯಗಳ ಪರಿಹಾರ ಬೋಧನೆಯಂತೆ ಹಾಗೂ ಪರೀಕ್ಷಾ ಪೂರ್ವದಲ್ಲಿ ತರಬೇತಿಯನ್ನು ಸುಮಾರು 3 ತಿಂಗಳು ಮುಂಚೆ ಓದುವ, ಬರೆಯುವ, ಪಾಸಿಂಗ್ ಪ್ಯಾಕೇಜ್ ಮಾಡಿಸುವ ಕಾರ್ಯ ಕೈಗೊಳ್ಳುತ್ತೇವೆ ಎಂದರು.
ಡಾಯಿಟ್ ಕಾಲೇಜಿನ ಪ್ರಚಾರ್ಯರು ಬಸವರಾಜ ಶೆಟ್ಟಿ ಮತದಾರರ ಪ್ರತಿಜ್ಞೆ ವಿಧಿ ಬೋಧಿಸಿ,
ಕಾರ್ಯಾಗಾರದಲ್ಲಿ ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕ ನಾಗೂರು, ಕ್ಷೇತ್ರ, ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
