ಈಡಿಗ ನಿಗಮದ ನೂತನ ಅಧ್ಯಕ್ಷರಿಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಬೆಂಬಲ ಅಭಿನಂದನೆ

ಈಡಿಗ ನಿಗಮದ ನೂತನ ಅಧ್ಯಕ್ಷರಿಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಬೆಂಬಲ ಅಭಿನಂದನೆ

ಈಡಿಗ ನಿಗಮದ ನೂತನ ಅಧ್ಯಕ್ಷರಿಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಬೆಂಬಲ ಅಭಿನಂದನೆ

ಕಲಬುರಗಿ : ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮದ ನೂತನ ಅಧ್ಯಕ್ಷರಾಗಿ ನೇಮಕ ಹೊಂದಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ಬೆಂಬಲ ಹಾಗೂ ಅಭಿನಂದನೆ ವ್ಯಕ್ತಪಡಿಸಿದೆ. 

    ಮಂಜುನಾಥ ಪೂಜಾರಿಯವರು ಈಡಿಗ ಸೇರಿದಂತೆ 26 ಪಂಗಡಗಳ ಶ್ರೀ ಅಭಿವೃದ್ಧಿಗಾಗಿ ದುಡಿದವರಾಗಿದ್ದು ಪೂಜ್ಯ ಡಾ. ಪ್ರಣವಾನಂದ ಶ್ರೀಗಳು ಮಂಗಳೂರಿನಿಂದ ಬೆಂಗಳೂರಿನವರೆಗೆ ನಿಗಮ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ನಡೆಸಿದ ಪಾದಯಾತ್ರೆ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ನಾಯಕರೊಂದಿಗೆ ಕೈಜೋಡಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇವರ ಆಯ್ಕೆಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂತಸವಾಗಿದ್ದು ಈಡಿಗ ಸೇರಿದಂತೆ 26 ಪಂಗಡಗಳ ಕಲ್ಯಾಣಕ್ಕಾಗಿ ನಿಗಮದಿಂದ ಉತ್ತಮ ಕೆಲಸಗಳನ್ನು ಮಾಡಿ ಯಶಸ್ವಿಯಾಗಲಿ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಅಭಿನಂದನೆ ಸಲ್ಲಿಸಿದ್ದಾರೆ. 

   ಸ್ವಾತಂತ್ರ್ಯ ಹೊಂದಿ 78 ವರ್ಷಗಳ ನಂತರ ಈಡಿಗ ಸೇರಿದಂತೆ 26 ಪಂಗಡಗಳಿಗೆ ನಿಗಮ ಘೋಷಣೆ ಹಾಗೂ ಈಗ ಅಧ್ಯಕ್ಷರ ಘೋಷಣೆ ಮಾಡಿದ ಕ್ರಮವನ್ನು ಸ್ವಾಗತಿಸುತ್ತೇವೆ ಮತ್ತು ಸರಕಾರ ಕೂಡಲೇ ನಿಗಮಕ್ಕೆ 500 ಕೋಟಿ ಆರ್ಥಿಕ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನೂತನ ಅಧ್ಯಕ್ಷರನ್ನು ನೇಮಕ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಸಮಾಜದ ನಾಯಕರಾದ ಬಿ.ಕೆ ಹರಿಪ್ರಸಾದ್, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಪ್ರಣವಾನಂದ ಶ್ರೀಗಳಿಂದ ಶುಭ ಹಾರೈಕೆ

ನೂತನ ಅಧ್ಯಕ್ಷರಾಗಿ ನೇಮಕ ಹೊಂದಿದ ಮಂಜುನಾಥ ಪೂಜಾರಿಯವರಿಗೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀಗಳು ಶುಭ ಹಾರೈಸಿದ್ದಾರೆ. 

    ನೂತನ ಅಧ್ಯಕ್ಷರಾಗಿ ನೇಮಕ ಹೊಂದಿದ ಮಂಜುನಾಥ ಪೂಜಾರಿಯವರು ಅಧಿಕಾರ ಸ್ವೀಕರಿಸಿದ ನಂತರ ಕೂಡಲೇ ನಿರ್ದೇಶಕರ ನೇಮಕಾತಿ ಹಾಗೂ ನಿಗಮದ ಕಾರ್ಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಿ ರಾಜ್ಯದ ಈಡಿಗರು ಬಿಲ್ಲವರು ನಾಮಧಾರಿ ನಾಯಕ, ಧೀವರ ಸೇರಿದಂತೆ 26 ಪಂಗಡಗಳಿಗೆ ಅನ್ವಯವಾಗುವಂತೆ ಎಲ್ಲರನ್ನು ಸಮನ್ವಯದಿಂದ ಸರಿ ತೂಗಿಸಿಕೊಂಡು ಸಮಸ್ತ ರ ಕಲ್ಯಾಣಕ್ಕೆ ರೂಪುರೇಷೆಗಳನ್ನು ರೂಪಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ. ಸರಕಾರದಿಂದ ಹೆಚ್ಚಿನ ಆರ್ಥಿಕ ನೆರವನ್ನು ಪಡೆದು ಹಿಂದುಳಿದ ಸಮುದಾಯದಲ್ಲಿ ಗುರುತಿಸಿದ ಪಂಗಡವನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಸೇವೆ ಸಲ್ಲಿಸುವಂತೆ ಆಗಲಿ ಎಂದು ಹೇಳಿದರು

ಅಭಿನಂದನೆ ಸಲ್ಲಿಸಿದ ಸತೀಶ್ ಗುತ್ತೇದಾರ,ವೆಂಕಟೇಶ ಕಡೇಚೂರ್