ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಲ್ಲಿ ಗಾಂಧಿ–ಶಾಸ್ತ್ರಿ ಜಯಂತಿ ಆಚರಣೆಗೈರಾಗಿದ್ದು ಮಾಲಿ ಪಾಟೀಲ ಖಂಡನೆ
ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಲ್ಲಿ ಗಾಂಧಿ–ಶಾಸ್ತ್ರಿ ಜಯಂತಿ ಆಚರಣೆಗೈರಾಗಿದ್ದು ಖಂಡನೆ
ಕಲಬುರಗಿ, ಅ.2:ಅಕ್ಟೋಬರ್ 2ರಂದು ದೇಶದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ದೇಶಾದ್ಯಂತ ಭಾವಪೂರ್ಣವಾಗಿ ಆಚರಿಸಲಾಯಿತು.
ಆದರೆ ಕಲಬುರಗಿಯ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಲ್ಲಿ ಈ ಜಯಂತಿಯನ್ನು ಆಚರಿಸದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸಿ. ಎಸ್. ಮಾಲಿಪಾಟೀಲ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಮಾಲಿಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ— “ರಾಷ್ಟ್ರಪಿತರು ಮತ್ತು ಶಾಸ್ತ್ರೀಜಿಯವರಂತಹ ಮಹಾನ್ ನಾಯಕರ ಜನ್ಮದಿನದಂದು ಪ್ರತಿಯೊಂದು ಸರ್ಕಾರಿ ಕಚೇರಿ, ಶಾಲಾ–ಕಾಲೇಜುಗಳು ಹಾಗೂ ಸಂಸ್ಥೆಗಳು ಭಾವಚಿತ್ರ ಪೂಜೆ, ಉಪನ್ಯಾಸ ಹಾಗೂ ಮಕ್ಕಳಿಗೆ ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಆಯೋಜಿಸುವುದು ನಮ್ಮ ಸಂವಿಧಾನಿಕ ಹಾಗೂ ನೈತಿಕ ಕರ್ತವ್ಯ. ಆದರೆ ಕಲಬುರಗಿಯ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಲ್ಲಿ ಅಧಿಕಾರಿಗಳಾದ **ಶ್ರೀ ಗೋಪಾಲ ನಾಯಕ್, ಶ್ರೀ ಸಿದ್ದಣ್ಣ ಚಿತ್ರದುರ್ಗ ಹಾಗೂ ಶ್ರೀ ಸಂಗಮೇಶ** ಗೈರಾಗಿರುವುದು ಅವಮಾನಕಾರಿ ಕ್ರಮವಾಗಿದೆ” ಎಂದು ಹೇಳಿದ್ದಾರೆ.
ದಸರಾ ಹಬ್ಬದ ಶುಭಾಶಯ ತಿಳಿಸಲು ಕಚೇರಿ ಭೇಟಿ ನೀಡಿದ ವೇಳೆ ಕೇವಲ ಭಾವಚಿತ್ರಗಳು ಮಾತ್ರ ತೂಗು ಹಾಕಿರುವುದು ಕಂಡುಬಂದಿತ್ತೆಂದು ಅವರು ತಿಳಿಸಿದ್ದಾರೆ.
“ಇದು ದೇಶದ ನಾಯಕರಿಗೆ ಮಾಡಿದ ಅವಮಾನವಾಗಿದೆ. ಈ ವಿಷಯವನ್ನು ಮೇಲಾಧಿಕಾರಿಗಳು ತಕ್ಷಣ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಮಾಲಿಪಾಟೀಲ ಹೇಳಿದ್ದಾರೆ.