ಸ್ವಾಮೀಗಳಿಗೆ ಭಕ್ತರೇ ತಂದೆತಾಯಿ ತೇಲ್ಕೂರು
ಸ್ವಾಮೀಗಳಿಗೆ ಭಕ್ತರೇ ತಂದೆತಾಯಿ-ತೇಲ್ಕೂರು
ಸುಂಠಾಣದ ಪುರಾಣ ಕಾರ್ಯಕ್ರಮದಲ್ಲಿ ರುದ್ರಮುನೀಶ್ವರ ಶಿವಯೋಗಿಗಳ ಸೂಗೂರು ಸಿರಿ ಧ್ವನಿ ಸುರುಳಿ ಬಿಡುಗಡೆ
ಸುಂಠಾಣ: ಸ್ವಾಮೀಜಿಗಳಿಗೆ ಭಕ್ತರೇ ಆಸ್ತಿ. ಅವರೇ ನಿಜವಾದ ತಂದೆತಾಯಿ, ನೀವು ನಿಮ್ಮ ಮನೆಯ ಮಕ್ಕಳಿಗೆ ಎಷ್ಟು ಕಾಳಜಿ ಮಾಡುತ್ತೀರೋ ಅಷ್ಟೇ ಕಾಳಜಿ ನೀವು ಸ್ವಾಮೀಜಿಗಳಿಗೆ ಮಾಡಬೇಕೆಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಳ್ಕೂರು ತಿಳಿಸಿದರು.
ಅವರು ತಾಲ್ಲೂಕಿನ ಸುಂಠಾಣ ಗ್ರಾಮದಲ್ಲಿ ಸೂಗೂರಿನ ರುದ್ರಮುನೀಶ್ವರ ಹಿರೇಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರುದ್ರಮುನೀಶ್ವರ ಶಿವಯೋಗಿಗಳ ಸೂಗೂರು ಸಿರಿ ಧ್ವನಿ ಸುರುಳಿ ಬಿಡುಗಡೆ ಮಾಡಿ ಗುರುವಾರ ಮಾತನಾಡಿದರು.
ಸ್ವಾಮೀಜಿ ನೆಪ ಅಷ್ಟೆ ಮಠಗಳು ಸಮಾಜದ ಆಸ್ತಿ. ಹೀಗಾಗಿ ನೀವು ಮಠದಲ್ಲಿ ಭಕ್ತಿಯ ಕೈಂಕರ್ಯಗಳು ನಿರಂತರವಾಗಿ ನಡೆಸಿಕೊಂಡು ಹೋಗಬೇಕೆಂದರು. ಶ್ರೀಮಠದ ಚನ್ನರುದ್ರಮುನಿ ಶಿವಾಚಾರ್ಯರು ದೂರದೃಷ್ಟಿ ಮತ್ತು ಭಕ್ತರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸೂಗೂರು ಮಠ ಅಭಿವೃದ್ಧಿ ಪಡಿಸಿ ಎಂದು ಶ್ಲಾಘಿಸಿದರು. ಅಷ್ಠಗಿ ಕಿಟ್ಟಾದ ಶಾಂತಲಿAಗೇಶ್ವರ ಹಿರೇಮಠದ ನಿಜಲಿಂಗ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು. ಮಳಖೇಡದ ಕೊಟ್ಟೂರುರೇಶ್ವರ ಶಿವಾಚಾರ್ಯರು ಸಮ್ಮುಖವಹಿಸಿದ್ದರೆ, ಚನ್ನರುದ್ರಮುನಿ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಗಡಿಗೌಡಗಾಂವನ ಶಾಂತವೀರ ಶಿವಾಚಾರ್ಯರು ಅಧ್ಯಕ್ಷತೆವಹಿಸಿದ್ದರು. ಚನ್ನಬಸವ ಶಿವಯೋಗಿಗಳ ಮತ್ತು ರುದ್ರಮುನಿ ಶಿವಾಚಾರ್ಯ ಶಿವಯೋಗಿಗಳ ಭಕ್ತಿ ಗೀತೇಗಳ ರಚನೆಕಾರ ಗುರುಭೀಮ ಸುತ ಸಿದ್ಧರಾಮ ಬ್ಯಾಕೋಡ್ ಅವರನ್ನು ಸನ್ಮಾನಿಸಲಾಯಿತು. ಪಸ್ತಪುರ, ಸುಂಠಾಣ, ಹುಲಸಗೂಡ, ಭಕ್ತರು ಕಾರ್ಯಕ್ರಮದಲ್ಲಿದ್ದರು. ರಾಜಕುಮಾರ ಪಂಚಾಳ ಕಾಳಗಿ ಮತ್ತು ಹುಮ್ನಾಬಾದನ ಸರಸ್ವತಿ ವಾರದ ಪರಿವಾರದಿಂದ ಚನ್ನರುದ್ರಮುನಿ ಶಿವಾಚಾರ್ಯರ ನಾಣ್ಯಗಳಲ್ಲಿ ತುಲಾಭಾರ ಸೇವೆ ನಡೆಯಿತು.
