ಮಲ್ಲಿಕಾರ್ಜುನ ಖರ್ಗೆ ಜನ್ಮದಿನಾಚರಣೆಗೆ ರಕ್ತದಾನ ಶಿಬಿರ 83 ರಕ್ತದಾತರಿಂದ ಖರ್ಗೆಗೆ ವಿಶಿಷ್ಟ ಗೌರವ

ಮಲ್ಲಿಕಾರ್ಜುನ ಖರ್ಗೆ ಜನ್ಮದಿನಾಚರಣೆಗೆ ರಕ್ತದಾನ ಶಿಬಿರ
83 ರಕ್ತದಾತರಿಂದ ಖರ್ಗೆಗೆ ವಿಶಿಷ್ಟ ಗೌರವ
ಕಲಬುರಗಿ: ರಾಜ್ಯಸಭಾ ಸದಸ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನ್ಮದಿನಾಚರಣೆಯ ಅಂಗವಾಗಿ, ಜುಲೈ 19 ರಂದು ಮುಂಜಾನೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ NSUI ಜಿಲ್ಲಾ ಘಟಕದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
NSUI ಜಿಲ್ಲಾಧ್ಯಕ್ಷ ಡಾ. ಗೌತಮ ಕರಿಕಲ್ ಅವರ ನೇತೃತ್ವದಲ್ಲಿ, ಇಎಸ್ಐಸಿ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಖರ್ಗೆ ಅವರ ವಯಸ್ಸಿನ ಅನುಪಾತದಲ್ಲಿ 83 ರಕ್ತದಾತರು ಭಾಗವಹಿಸಿ ಅವರ ಹುಟ್ಟುಹಬ್ಬಕ್ಕೆ ರಕ್ತದಾನ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಲಿದ್ದಾರೆ.
ವೈದ್ಯರು ಶಿಬಿರದಲ್ಲಿ ರಕ್ತದಾನದ ಮಹತ್ವ ಮತ್ತು ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಶಿಬಿರದ ಭಾಗವಾಗಿ NSUI ತಾಲ್ಲೂಕು ಘಟಕದ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಮಾಜ ಸೇವಕರು, ಸ್ಥಳೀಯ ಮುಖಂಡರು ಮತ್ತು ಖರ್ಗೆ ಅಭಿಮಾನಿಗಳು ಭಾಗವಹಿಸಲಿದ್ದಾರೆ.
ವಿಶೇಷ ಸೂಚನೆಗಳು:
* ರಕ್ತದಾನದ ಹಿಂದಿನ ದಿನ ಧೂಮಪಾನ, ಮದ್ಯಪಾನ ತಡೆಯಬೇಕು.
* ರಕ್ತದಾನಿಗಳಿಗೆ ಇಎಸ್ಐಸಿ ಮೆಡಿಕಲ್ ಕಾಲೇಜುದಿಂದ ಪ್ರಮಾಣಪತ್ರ ನೀಡಲಾಗುತ್ತದೆ. ಇದರ ಮೂಲಕ ಭವಿಷ್ಯದಲ್ಲಿ ಇಎಸ್ಐಸಿ ಆಸ್ಪತ್ರೆಯಿಂದ ಉಚಿತ ರಕ್ತ ಪಡೆಯುವ ಅವಕಾಶ ಲಭಿಸುತ್ತದೆ.
ಸಂಪರ್ಕಿಸಿ:ಡಾ. ಗೌತಮ ಕರಿಕಲ್ – NSUI ಜಿಲ್ಲಾಧ್ಯಕ್ಷ, ಕಲಬುರಗಿ. ಮೊ.: 98453 40807