ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಆಳಂದ 44ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಹಿರಿಯ ರೈತರಿಂದ ಉದ್ಘಾಟನೆ

ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಆಳಂದ 44ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಹಿರಿಯ ರೈತರಿಂದ ಉದ್ಘಾಟನೆ
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ವಿಶ್ವರಾಧ್ಯ ಕಲ್ಯಾಣ ಮಂಟಪದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಆಳಂದ ಸನ್ 2024-25 ನೇ ಸಾಲಿನ 44ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಹಿರಿಯ ರೈತರಾದ ಶರಣು ಪಾಟೀಲ ಭೂಸನೂರ, ಅಣ್ಣಾರಾವ ಸಣ್ಣಮನಿ, ಮಹಾಂತಗೌಡ ಪಾಟೀಲ, ಮೈನೋದ್ದಿನ ಜವಳಿ, ಪುಂಡಲಿಕ ಗುತ್ತೇದಾರ ಇವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಕಬ್ಬು ಸರಬರಾಜು ಮಾಡಿದ ರೈತರಾದ ಅಶೋಕ ಗುತ್ತೇದಾರ, ಖಾಜಿ ಸೈಯದ್ ಖಾಲಿ, ಸಿದ್ದು ಅಮೃತಪ್ಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಆಳಂದ ಆಡಳಿತ ಮಂಡಳಿ ಅಧ್ಯಕ್ಷರಾದ ಗುರುಲಿಂಗಜAಗಮ ಎಸ್.ಪಾಟೀಲ (ಧಂಗಾಪೂರ), ಉಪಾಧ್ಯಕ್ಷರಾದ ಸಿದ್ರಾಮ ಎನ್.ಸಾಲಿಮನಿ, ಮಂಡಳಿಯ ನಿರ್ದೇಶಕರಾದ ಶಿವರಾಜ ಬಂಡೆಪ್ಪ ಮಾಹಾಗಾಂವ, ಹರ್ಷವರ್ಧನ ಜಿ. ಗುಗ್ಗಳ್ಳೆ, ನೀಲಕಂಠರಾವ ವಿ. ಪಾಟೀಲ, ಧರ್ಮರಾಜ ಬಿ. ಸಾಹು, ಚನ್ನಬಸಪ್ಪ ಡಿ. ಮಾಲಿ ಪಾಟೀಲ, ಪ್ರಕಾಶ ಟಿ. ಸಣಮನಿ, ರೇಣುಕಾ ಆರ್. ಹಾವನಳ್ಳಿ, ಶಿವರಾಜ ಬಿ.ಪಾಟೀಲ, ಶಾಂತೇಶ್ವರ ಎಸ್. ಪಾಟೀಲ, ಶಿವಪುತ್ರಪ್ಪ ಜಿ. ಕೊಟ್ಟರಕಿ, ಕಮಲಾಬಾಯಿ ಹ. ಸಕ್ಕರಗಾ, ಪ್ರಶಾಂತ ಬಿ. ಪಾಟೀಲ ಭೂಸನೂರ, ಶಿವರಾಜ ಬಿ. ಪಾಟೀಲ ಕೋರಳ್ಳಿ, ವ್ಯವಸ್ಥಾಪಕ ನಿರ್ದೇಶಕರಾದ ಸಂಜಯಕುಮಾರ ಕಪೂರ ಸೇರಿದಂತೆ ಇತರರು ಇದ್ದರು.