84 ವರ್ಷಗಳ ಹಿಂದಿನ ಫೋಟೊ ಶ್ರೀಮಠಕ್ಕೆ ಅರ್ಪಿಸಿದ ಶಿವಶರಣಪ್ಪ‌ ಸಜ್ಜನಶೆಟ್ಟಿ

84 ವರ್ಷಗಳ ಹಿಂದಿನ ಫೋಟೊ ಶ್ರೀಮಠಕ್ಕೆ ಅರ್ಪಿಸಿದ ಶಿವಶರಣಪ್ಪ‌ ಸಜ್ಜನಶೆಟ್ಟಿ

84 ವರ್ಷಗಳ ಹಿಂದಿನ ಫೋಟೊ ಶ್ರೀಮಠಕ್ಕೆ ಅರ್ಪಿಸಿದ ಶಿವಶರಣಪ್ಪ‌ ಸಜ್ಜನಶೆಟ್ಟಿ  

ಚಿಂಚೋಳಿ : 84 ವರ್ಷಗಳ ಹಿಂದೆ ಹಾರಕೂಡ ಸಂಸ್ಥಾನದ ಪೀಠಾಧಿಪತಿಗಳಾಗಿದ್ದ ಚನ್ನಬಸವ ಶಿವಯೋಗಿಗಳು 1941ರಲ್ಲಿ ಕೊಡ್ಲಿ ಗ್ರಾಮದ ಲಿಂ. ಸಿದ್ರಾಮಪ್ಪ ಕಮಲಾಬಾಯಿ ಸಜ್ಜನಶೆಟ್ಟಿ ಅವರ ಮದುವೆಗೆ ಕುದುರೆ ಮೇಲೆ ಕೂಡಿಸಿ ಗ್ರಾಮದಲ್ಲಿ ನಡೆಸಿದ ಮೆರವಣಿಗೆಯ ಫೋಟೊವನ್ನು ಭಕ್ತರಾದ ಭುವನೇಶ್ವರಿ ಶಿವಶರಣಪ್ಪ ಸಜ್ಜನಶೆಟ್ಟಿ ದಂಪತಿ ಗುರುವಾರ ಶ್ರೀಮಠದ ಚನ್ನವೀರ ಶಿವಾಚಾರ್ಯರಿಗೆ ಹಸ್ತಾಂತರಿಸಿದರು. 

ಅಜ್ಜನ‌ ಮದುವೆಗೆ ಬಂದ ಮಹಾ ಶಿವಯೋಗಿಗಳ ಫೋಟೊ ದೊಡ್ಡದಾಗಿ ಮುದ್ರಿಸಿ, ಅದಕ್ಕೆ ಆಕರ್ಷಕ ಫ್ರೇಮ ಹಾಕಿಸಿ, ಮೊಮ್ಮಗ ಪ್ರಶಾಂತ ಸಜ್ಜನಶೆಟ್ಟಿ ಕಳುಹಿಸಿಕೊಟ್ಟಿದನ್ನು ಗುರುವಾರ ಚಿಂಚೋಳಿ ಮತ್ತು ಹಾರಕೂಡ ಶ್ರೀ‌ಮಠದಲ್ಲಿ ಅಳವಡಿಸಲು ಶ್ರೀಮಠಕ್ಕೆ ದಂಪತಿಗಳು ಒಪ್ಪಿಸಿದರು.

ಈ ವೇಳೆ ಪತ್ರಕರ್ತ ಜಗನ್ನಾಥ ಶೇರಿಕಾರ, ವಿಲಾಸವತಿ‌ ನಾಗಪ್ಪ ಸಜ್ಜನ, ಮಲ್ಲಿಕಾರ್ಜುನ, ರೇವಣಸಿದ್ದಪ್ಪ ಹುಡಗಿ,ಭೀಮರಾವ್ ಚೇಂಗಟಿ, ರಮೇಶ ಪೆದ್ದಿ ಮೊದಲಾದವರು ಸಾಕ್ಷಿಯಾದ್ದರು.

  ಈ ಫೋಟೊ ಸುಮಾರು ಶತಮಾನದಷ್ಟು ಹಳೆಯದಾಗಿದ್ದು, ಅಂದು ಚನ್ನಬಸವ ಶಿವಯೋಗಿಗಳನ್ನು ಭಕ್ತರು ಸಾಕ್ಷಾತ ಭಗವಂತನ ಸ್ವರೂಪಿಯಾಗಿ‌ ಕಾಣುತ್ತಿದ್ದರು. ಶ್ರೀಗಳ ತುಲಾಭಾರ ಸೇವೆ ದಾಖಲೆ ಪ್ರಮಾಣದಲ್ಲಿ ಸಾಗುತ್ತಿರುವುದಕ್ಕೆ ಭಕ್ತರು ಶ್ರೀಗಳ‌ ಮತ್ತು ಮಠದ ಮೇಲೆ ಹೊಂದಿರುವ ಶ್ರದ್ದಾ ಭಕ್ತಿಗೆ ಪ್ರತೀಕವಾಗಿದೆ. ತ್ರಿವಿಧ ದಾಸೋಹಿಗಳಾಗಿ, ಭಕ್ತ ವತ್ಸಲರಾಗಿ, ಸಾಹಿತಿಗಳು, ಕಲಾವಿದರು, ಪೈಲ್ವಾನರು, ಕೃಷಿಕರು ಸೇರಿದಂತೆ ಸಮಾಜದ ಎಲ್ಲಾ ರಂಗಗಳಲ್ಲಿ ಶ್ರಮಿಸುತ್ತಿರುವ ಇಂದಿನ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ಸಮಾಜ ಮುಖಿ‌ ಭಕ್ತರಿಂದ ನಡೆದುದಾಡುವ ದೇವರೆಂಬ ಬಿರುದು ಪಡೆದಿದ್ದಾರೆ.