ಬೇಸಿಗೆ ಹಿನ್ನಲೆಯಲ್ಲಿ ಸರಕಾರಿ ಕಛೇರಿಗಳ ಸೇವೆಗಳ ಸಮಯ ಬದಲಾವಣೆ

ಬೇಸಿಗೆ ಹಿನ್ನಲೆಯಲ್ಲಿ ಸರಕಾರಿ ಕಛೇರಿಗಳ ಸೇವೆಗಳ ಸಮಯ ಬದಲಾವಣೆ

ಬೇಸಿಗೆ ಹಿನ್ನಲೆಯಲ್ಲಿ ಸರಕಾರಿ ಕಛೇರಿಗಳ ಸೇವೆಗಳ ಸಮಯ ಬದಲಾವಣೆ 

ಚಿಂಚೋಳಿ : ಏಪ್ರೀಲ್ ಮತ್ತು ಮೇ ಮಾಹೆಗಳಲ್ಲಿ ಅಧಿಕ ಬಿಸಿಲಿನ ತಾಪಮಾನ ಹೆಚ್ಚಳವಾಗಲಿರುವ ಕಾರಣದ ಹಿನ್ನಲೆಯಲ್ಲಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಸರಕಾರಿ ಕಚೇರಿಗಳ ವೇಳಾಪಟ್ಟಿಯ ಬದಲಾಗಿ ಏಪ್ರೀಲ್ ಮತ್ತು ಮೇ ತಿಂಗಳುಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನದ 1.30 ಗಂಟೆಯವರೆಗೆ ಬದಲಾಯಿಸಿ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ-ಸ್ವೀಮರ-ತಪಾಸಣೆ) ಅಧಿಕಾರಿ ವಿಮಲಾಕ್ಷಿ. ಬಿ ಅವರು ಆದೇಶಿಸಿದ್ದಾರೆ. ಅದರಂತೆ ಏಪ್ರೀಲ್ 3 ರಿಂದ ಮೇ ತಿಂಗಳವರೆಗೆ ತಾಲೂಕ ಪಂಚಾಯತ ಕಾರ್ಯಾಲಯದ ಸಿಬ್ಬಂದಿಗಳು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹನ್ನ 1.30 ಗಂಟೆಯವರೆಗೆ ಸಾರ್ವಜನಿಕ ಸೇವೆಗಾಗಿ ಕಾರ್ಯಾಲಯದಲ್ಲಿ ಲಭ್ಯವಾಗಿರುತ್ತಾರೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.