ಡಾ .ಪ್ರಣವಾನಂದ ಶ್ರೀಗಳ ಪಾದಯಾತ್ರೆ ವ್ಯಾಪಕ ಸಿದ್ಧತೆಗೆ ನಿರ್ಧಾರ: ಡಿಸೆಂಬರ್ 7 ಕ್ಕೆ ಬೆಂಗಳೂರಿನಲ್ಲಿ ಸಭೆ
ಡಾ .ಪ್ರಣವಾನಂದ ಶ್ರೀಗಳ ಪಾದಯಾತ್ರೆ ವ್ಯಾಪಕ ಸಿದ್ಧತೆಗೆ ನಿರ್ಧಾರ: ಡಿಸೆಂಬರ್ 7 ಕ್ಕೆ ಬೆಂಗಳೂರಿನಲ್ಲಿ ಸಭೆ
ಪಾದಯಾತ್ರೆ ಕೈಬಿಡುವ ಪ್ರಶ್ನೆಯೇ ಇಲ್ಲ: ಶ್ರೀಗಳ ಸ್ಪಷ್ಟನೆ
ಕಲಬುರಗಿ : ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಸಮಗ್ರ ಕಲ್ಯಾಣದ ದೃಷ್ಟಿಯಿಂದ 18 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ ಆರರಿಂದ ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆ ಯಶಸ್ವಿಗೆ ವ್ಯಾಪಕ ಸಿದ್ಧತೆ ನಡೆಯುತ್ತಿದ್ದು 12 ಜಿಲ್ಲೆಗಳಲ್ಲಿ ಈಗಾಗಲೇ ಪೂರ್ವ ತಯಾರಿ ಪೂರ್ಣಗೊಂಡಿದೆ.
ಕಲ್ಬುರ್ಗಿ ಹೋಟೆಲ್ ಹೆರಿಟೇಜ್ ಇನ್ ಸಭಾಂಗಣದಲ್ಲಿ ನವೆಂಬರ್ 20 ರಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಹಾಗೂ ಸಮಾಜದ ಹಿರಿಯ ಮುಖಂಡರಾದ ಅಶೋಕ ಗುತ್ತೇದಾರ್ ಬಡದಾಳ ದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ತಯಾರಿಯ ರೂಪುರೇಷೆ ಕೈಗೊಳ್ಳಲಾಗಿದೆ ಎಂದು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ತಿಳಿಸಿದರು.
ಈಗಾಗಲೇ ಬೆಂಗಳೂರು ಮೈಸೂರು ಹಾವೇರಿ, ಉತ್ತರ ಕನ್ನಡ, ರಾಯಚೂರು, ಶಿವಮೊಗ್ಗ,ಕಲಬುರಗಿ,
ವಿಜಯನಗರ, ಯಾದಗಿರಿ ಮುಂತಾದ ಒಟ್ಟು 12 ಜಿಲ್ಲೆಗಳಲ್ಲಿ ಪಾದಯಾತ್ರೆಯ ಪೂರ್ವಭಾವಿ ಸಭೆ ಪೂರ್ಣಗೊಂಡಿದೆ. ಜನವರಿ 6 ರಿಂದ ಫೆಬ್ರವರಿ 12 ರವರೆಗೆ ಕರದಾಳು ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ 700 ಕಿಲೋಮೀಟರ್ ಪಾದಯಾತ್ರೆ ನಡೆಯಲಿದ್ದು ಅಲ್ಲಿ ನಿರಶನ ಸತ್ಯಾಗ್ರಹ ಕೈಗೊಳ್ಳಲು ನಿಶ್ಚಯಿಸಲಾಗಿದೆ.ಈ ಬಗ್ಗೆ ಆಡಳಿತ ಪಕ್ಷದ ಶಾಸಕರು ಮತ್ತು ಪರಾಭವ ಹೊಂದಿದವರು ಮತ್ತು ಮುಖಂಡರ ಜೊತೆ ಚರ್ಚಿಸಲು ಸತೀಶ್ ಗುತ್ತೇದಾರ್ ಮತ್ತು ಬಾಲರಾಜ್ ಗುತ್ತೇದಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಡಿಸೆಂಬರ್ 7ರಂದು ಸಭೆ ನಡೆಸಲಾಗುವುದು.
ಪಾದಯಾತ್ರೆಯ ವೇಳೆ 15 ಕಡೆಗಳಲ್ಲಿ ಬಹಿರಂಗ ಸಭೆಗಳನ್ನು ಆಯೋಜನೆ ಮಾಡಲಾಗಿದೆ. ಕರದಾಳು ಶಕ್ತಿ ಪೀಠದಲ್ಲಿ ಜನವರಿ 6ರಂದು ಮಾಜಿ ಸಚಿವರು ಹಾಗೂ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಪಾದಯಾತ್ರೆ ಕಾರ್ಯಕ್ರಮ ಉದ್ಘಾಟಿಸಲಿರುವ ರು. ಕೇಂದ್ರ ಸಚಿವರಾದ ಶ್ರೀಪಾದ ಯಸ್ಸೋ ನಾಯಕ್ ಪಾದಯಾತ್ರೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಪ್ರತಿದಿನ 20 ಕಿ ಮೀ ಪಾದಯಾತ್ರೆ ಸಾಗಿ ವಾಸ್ತವ್ಯ ಹೂಡಲಾಗುತ್ತದೆ. ಮೂರು ಜಿಲ್ಲೆಗೆ ಒಬ್ಬರು ಉಸ್ತುವಾರಿ ವಹಿಸಲಿದ್ದು 20 ಮುಖ್ಯ ಸಂಚಾಲಕರನ್ನು ಈಗಾಗಲೇ ನೇಮಿಸಲಾಗಿದೆ.
ಪಾದಯಾತ್ರೆ ಕೈ ಬಿಡುವ ಪ್ರಶ್ನೆಯೇ ಇಲ್ಲ: ಡಾ ಪ್ರಣವಾನಂದ ಶ್ರೀ
ಜನವರಿ 6 ರಿಂದ ಪ್ರಾರಂಭವಾಗುವ ಪಾದಯಾತ್ರೆಯನ್ನು ಕೈ ಬಿಡುವಂತೆ ಹಲವು ನಾಯಕರು ಒತ್ತಾಯ ಮಾಡುತ್ತಿದ್ದು ಈ ಪಾದಯಾತ್ರೆ ಯಾವುದೇ ಪಕ್ಷ ಅಥವಾ ಪಂಗಡಗಳ ವಿರುದ್ಧವಲ್ಲ ಸಮುದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಬೇಡಿಕೆಗಳ ಈಡೇರಿಕೆಗಾಗಿ ಮಾಡಲಾಗುತ್ತಿದೆ. ಆದುದರಿಂದ ಯಾವುದೇ ಒತ್ತಡಕ್ಕು ಮಣಿಯದೆ ಆದ ಯಾತ್ರೆ ಕೈಗೊಳ್ಳಲು ಸಿದ್ಧತೆಗಳು ಮಾಡಿದ ಪ್ರಶ್ನೆಯೇ ಇಲ್ಲ ಎಂದು ಕರದಾಳು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀ ಸ್ಪಷನೆ ನೀಡಿದ್ದಾರೆ.
ಈಗಾಗಲೇ ಚಿತಾಪುರದ ಈಡಿಗ ಪ್ರಮುಖರನ್ನು ಸಚಿವ ಪ್ರಿಯಾಂಕ ಖರ್ಗೆಯವರು ಕರೆದು ಮೊದಲ ಸುತ್ತಿನ ಮಾತುಕತೆ ನಡೆಸಿದ್ದು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಇತರ ಅನೇಕ ನಾಯಕರು ಪಾದಯಾತ್ರೆ ಕೈ ಬಿಡಲು ಮನವಿ ಮಾಡಿದ್ದಾರೆ.ಆದರೆ ಕಳೆದ ಎರಡುವರೆ ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರವು ಸಮಾಜದ ಯಾವುದೇ ಬೇಡಿಕೆಗೆ ಈ ವರೆಗೆ ಸ್ಪಂದನೆ ನೀಡಲಿಲ್ಲ. ನಿಗಮಕ್ಕೆ ಹಣವನ್ನು ಬಿಡುಗಡೆ ಮಾಡದೆ ಕಾಲಹರಣ ಮಾಡಿದೆ. ನಿಗಮದ ಅಧ್ಯಕ್ಷರ ಘೋಷಣೆಯಾದರೂ ಅಧಿಕಾರ ಸ್ವೀಕರಿಸಲು ಇನ್ನೂ ಅವಕಾಶ ನೀಡಲಿಲ್ಲ. ಸಮಾಜದ ಮುಖಂಡರಾದ ಬಿ ಕೆ ಹರಿಪ್ರಸಾದ್, ಕೋಟ ಶ್ರೀನಿವಾಸ್ ಪೂಜಾರಿ,: ಸುನಿಲ್ ಕುಮಾರ್, ಮಧು ಬಂಗಾರಪ್ಪ, ಎಚ್ ಆರ್ ಶ್ರೀನಾಥ್, ಹರತಾಳು ಹಾಲಪ್ಪ ಮುಂತಾದವರನ್ನು ಕರೆಸಿ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ ಬೇಡಿಕೆಗಳಲ್ಲಿ ಒಂದಷ್ಟುನ್ನು ಶೀಘ್ರದಲ್ಲಿ ಈಡೇರಿಸಲು ಲಿಖಿತ ಭರವಸೆ ನೀಡಿದರೆ ಮಾತ್ರ ಮುಖಂಡರಲ್ಲಿ ಚರ್ಚಿಸಿ ಪಾದಯಾತ್ರೆ ಕೈ ಬಿಡುವ ಬಗ್ಗೆ ಮರುಪರಿಶೀಲನೆ ಮಾಡಲಾಗುವುದು ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಪೂರ್ವ ಸಮಾನ ಜನ ಸಭೆಯಲ್ಲಿ ಶಕ್ತಿಪೀಠದ ಕತ್ತಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಕಡೇಚೂರ್, ಜೆಡಿಎಸ್ ಎನ್ ಕಲಬುರಗಿ ಜಿಲ್ಲಾಧ್ಯಕ್ಷರಾದ ಬಾಲರಾಜ್ ಗುತ್ತೇದಾರ್, ಶಕ್ತಿಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ, ಸುರೇಶ್ ಗುತ್ತೇದಾರ್ ಮಟ್ಟೂರು, ಬಸಯ್ಯ ಗುತ್ತೇದಾರ್ ತೆಲ್ಲೂರ್, ರಮೇಶ್ ಗುತ್ತೇದಾರ್ ಮತ್ತಿತರರು ಭಾಗವಹಿಸಿದ್ದರು.
