ಚಿತ್ರಕಲಾ ಮಹಾವಿದ್ಯಾಲಯದ ಬೆಳಮಗಿ ದಂಪತಿಗಳ ಸೇವೆ ಸಮಾಜದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕೊಪ್ಪದ

ಚಿತ್ರಕಲಾ ಮಹಾವಿದ್ಯಾಲಯದ ಬೆಳಮಗಿ ದಂಪತಿಗಳ ಸೇವೆ ಸಮಾಜದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕೊಪ್ಪದ

ಚಿತ್ರಕಲಾ ಮಹಾವಿದ್ಯಾಲಯದ ಬೆಳಮಗಿ ದಂಪತಿಗಳ ಸೇವೆ ಸಮಾಜದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕೊಪ್ಪದ

ಕಲಬುರಗಿ ಫೆ 10: ನಗರದ ಕಾಳೇ ಲೇಔಟ್‌ನಲ್ಲ್ಲಿರುವ ದಿ ಆರ್ಟ ಇಂಟಿಗ್ರೇಷನ್ ಸೊಸಾಯಿಟಿ ದಿ ಆರ್ಟ ಇಂಟಿಗೇಶನ್ ಚಿತ್ರಕಲಾ ಮಹಾವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಕಲಾಶಿಬಿರದ ಹಂಪಿ ಭೂ ದೃಶ್ಯ ಕಲಾಕೃತಿಗಳ ಪ್ರದರ್ಶನ 2026 ಅಂಕುರ ಆರ್ಟ ಗ್ಯಾಲಯಲ್ಲಿ ಆಯೋಜಿಸಿಲಾಗಿದ್ದ ಮಂಗಳವಾರ ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಛೇರಿ ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಶಿವಾಂನದ ಕೊಪ್ಪದ ಅವರು ಪ್ರದರ್ಶನ ಸಸಿಗೆ ನೀರು ಹಾಕಿ ಉದ್ಘಾಟಿಸಿ ಭೂ ದೃಶ್ಯಗಳನ್ನು ವೀಕ್ಷಿಸಿ ಕಲಾಕೃತಿಗಳು ಉತ್ತಮವಾಗಿವೆ ಎಂದು ಬಣ್ಣಿಸಿತ್ತಾ ಈ ಮಹಾವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಮೂವರು ಉಪನ್ಯಾಸಕರಾಗಿದ್ದು ಹೆಮ್ಮೆ ವಿಷಯವಾಗಿದೆ. ಪ್ರಸುತ್ತ ರಾಜ್ಯದಲ್ಲಿ ಚಿತ್ರಕಲಾ ಮಹಾವಿದ್ಯಾಲಯಗಳು ಅಳಿವಿನ ಅಂಚಿನಲ್ಲಿವೆ ಆದರೂ ಸಂಸ್ಥೆಗಾಗಿ ಬೆಳಮಗಿ ದಂಪತಿಗಳು ಹಗಲು ರಾತ್ರಿ ಪರಿಶ್ರಮದಿಂದ ಇಷ್ಟು ಹೆಮ್ಮರವಾಗಿ ಬೆಳೆಯಲು ಕಷ್ಟ ನಷ್ಟ ಲೆಕ್ಕಿಸದೆ ಸಮಾಜದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಎಂದು ನುಡಿದರು.

ಚಿತ್ರಕಲಾ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ಶಾಂತಮಲ್ಲ ಶಿವಭೋ ಮಾತನಾಡುತ್ತಾ ಹಿಂದೆ ಈ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ನೆನಪಿಸಿಕೊಂಡು ಇಲ್ಲಿ ಕಲಿತ ವಿದ್ಯಾರ್ಥಿಗಳು ವಿಶೇಷ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮಯವಿಷಯವಾಗಿದೆ ಎಂದು ಹೇಳಿದರು.

ಕಲಾವಿದ, ಚಿತ್ರಕಲಾ ಶಿಕ್ಷಕ ದೌಲತರಾಯ ದೇಸಾಯಿ ಮಾತನಾಡುತ್ತಾ ಚಿತ್ರಕಲಾಮಹಾವಿದ್ಯಾಲಯ ಎಲ್ಲಾ ಮೂಲಭೂತ ಸೌಕರ್ಯ ಮತ್ತು ಉತ್ತಮ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಶಿಕ್ಷಣ ಉತ್ತಮವಾದ ಬದುಕು ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ದಿ ಆರ್ಟ ಇಂಟಿಗೇಶನ್ ಚಿತ್ರಕಲಾ ಮಹಾವಿದ್ಯಾಲ ಪ್ರಾಚಾರ್ಯ ಎಂ ಹೆಚ್. ಬೆಳಮಗಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನ ಎಂದರೆ ಬಂಗಾರದಂತೆ ಅದನ್ನು ವ್ಯರ್ಥಮಾಡದೆ ವಿದ್ಯಾರ್ಥಿಗಳು ತಮ್ಮ ಉನ್ನತಿಗಾಗಿ ಸತತ ಪ್ರಯತ್ನ ಪಡಬೇಕು ಎಂದು ಹೇಳಿದರು.

ಪ್ರದರ್ಶನ ಫೆ 14 ರವರೆಗೆ ಬೆಳಗ್ಗೆ 10:30 ರಿಂದ 4:30 ರವರೆಗೆ ಸಾರ್ವಜನಿಕರು, ಕಲಾಆಸಕ್ತರು ವೀಕ್ಷಿಸಬಹುದು. ಉಪನ್ಯಾಸಕರಾದ ಡಾ ಅಶೋಕ ಶೆಟಕಾರ,ಬಸವರಾಜ ಕಮಾಜಿ ನಿಂಗಪ್ಪ ಕೇರಿ ಸಿಬ್ಬಂದಿವರ್ಗದವರು, ಕಾವ್ಯಾ ಕುಲಕರ್ಣಿ,ಪವಿತ್ರಾ ಜೆ ಸ್ವಾಗತಗೀತೆಹಾಡಿದರು. ಮಲ್ಲಿಕಾರ್ಜುನ ಮುಗಳಿ ಸ್ವಾಗತಿಸಿದರು. ಬಿ ಎನ್ ಪಾಟೀಲ ನಿರೂಪಿಸಿದರು. ಗೌರಿ ಪಾಟೀಲ ವಂದಿಸಿದರು.

ಹಿರಿಯ ಚಿತ್ರಕಲಾವಿದ ವಿ ಬಿ ಬಿರಾದಾರ, ನಾರಾಯಣ ಎಂ ಜೋಶಿ, ಬಾಬುರಾವ ಎಚ್. ಶರಣು ಪಟ್ಟಣಶೆಟ್ಟಿ, ಡಾ ಪರಶುರಾಮ, ಜಲಜಾ ಕುಲಕರ್ಣಿ, ಕವಿತಾ ಕಟ್ಟೆ ಮುಂತಾದವರು ಉಪಸ್ಥಿತರಿದ್ದರು.