25ರಂದು ಮುಗುಳ್ನಗೆ ಮಂದಾರ ಪ್ರಶಸ್ತಿ ಹಾಗೂ ಗುರುವಂದನ ಸಮಾರಂಭ

25ರಂದು ಮುಗುಳ್ನಗೆ ಮಂದಾರ ಪ್ರಶಸ್ತಿ ಹಾಗೂ ಗುರುವಂದನ ಸಮಾರಂಭ

*ಆಯೋಗದ ಅಧ್ಯಕ್ಷೆ ನಾಗರತ್ನ ಚೌದರಿ ಅವರಿಗೆ 'ಮುಗುಳ್ನಗೆಯ ಮಂದಾರ" ಪ್ರಶಸ್ತಿ* 

*ಶ್ರೀಮ.ಘ.ಚ. ಅಭಿನವ ಸಿದ್ಧಲಿಂಗ ಶಿವಾಚಾರ್ಯರ ಗುರುವಂದನ ಕಾರ್ಯಕ್ರಮ*

*ಜನ್ಮದಿನವನ್ನೇ ಭಕ್ತರ ಆರೋಗ್ಯದ ದಿನವನ್ನಾಗಿ ರೂಪಿಸಿದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು*

ಕಲಬುರಗಿ : ಮಠಗಳು ಧರ್ಮದ ಉಗಮ ಸ್ಥಾನಗಳಾಗಿದ್ದು, ಸಮಾಜವು ಅವುಗಳ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದೆ. ಧರ್ಮ ಬೋಧನೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಮಾನವೀಯ ಮೌಲ್ಯಗಳಾದ ಪ್ರೀತಿ, ದಯೆ, ಅಂತಃಕರುಣೆಗಳನ್ನು ಬಿತ್ತುವ ಮೂಲಕ ಪಂಚದಾಸೋಹಗಳಾದ ಅನ್ನ, ಅರಿವು, ಅರಿವೆ ಹಾಗೂ ಔಷಧಗಳನ್ನು ನೀಡುತ್ತಾ ಭಕ್ತರಿಗೆ *“ಕಾಮಧೇನು–ಕಲ್ಪವೃಕ್ಷ”*ವಾಗಿ ಬೆಳಗುತ್ತಿರುವ ಮಠವೇ **ಸುಕ್ಷೇತ್ರ ಮುಗುಳುನಾಗಾವಿ ಶ್ರೀ ಕಟ್ಟಿಮನಿ ಸಂಸ್ಥಾನ ಹಿರೇಮಠ**ವಾಗಿದೆ.

ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಈ ಶ್ರೀಮಠವು ಅನೇಕ ತಪಸ್ವಿಗಳು, ಧರ್ಮಬೋಧಕರು ಹಾಗೂ ಆಯುರ್ವೇದ ತಜ್ಞರನ್ನು ಸಮಾಜಕ್ಕೆ ನೀಡಿದೆ. ಪ್ರಸ್ತುತ ಪೂಜ್ಯರಾದ **ಶ್ರೀಮ.ಘ.ಚ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು** ಸರಳತೆ, ಸಹಜತೆ ಮತ್ತು ಸರ್ವಧರ್ಮ ಸಮನ್ವಯದ ಚಿಂತನೆಯಿಂದ ಎಲ್ಲ ವರ್ಗದ ಜನರ ಅಚ್ಚುಮೆಚ್ಚಿನ ಸ್ವಾಮೀಜಿಗಳಾಗಿ ಗುರುತಿಸಿಕೊಂಡಿದ್ದಾರೆ.

**ಜನವರಿ 25ರಂದು ಪೂಜ್ಯರ 49ನೇ ಜನ್ಮದಿನ (ಗುರುವಂದನ ಕಾರ್ಯಕ್ರಮ)**ವನ್ನು ವೈಯಕ್ತಿಕ ಆಚರಣೆಯಾಗಿ ಅಲ್ಲದೆ, *ಭಕ್ತರ ಆರೋಗ್ಯದ ದಿನವನ್ನಾಗಿ ರೂಪಾಂತರಿಸಿರುವುದು ಅವರ ಮಾನವೀಯ ಕಾಳಜಿಯ ಸ್ಪಷ್ಟ ಸಾಕ್ಷಿಯಾಗಿದೆ. ಕಳೆದ ಸುಮಾರು 16 ವರ್ಷಗಳಿಂದ ಪ್ರತಿವರ್ಷವೂ ಉಚಿತ ಆರೋಗ್ಯ ತಪಾಸಣೆ, ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಶಸ್ತ್ರಚಿಕಿತ್ಸೆಗಳನ್ನು ಆಯೋಜಿಸುವ ಮೂಲಕ 150ಕ್ಕೂ ಅಧಿಕ ಜನರಿಗೆ ದೃಷ್ಟಿ ದಾನ ಮಾಡಿದ್ದಾರೆ. ಜೊತೆಗೆ ರಕ್ತದಾನ ಶಿಬಿರಗಳ ಮೂಲಕ ಅನೇಕ ಜೀವಗಳಿಗೆ ಸಂಜೀವಿನಿಯಾಗಿದ್ದಾರೆ.

ಇಷ್ಟಕ್ಕೆ ಮಾತ್ರ ಸೀಮಿತವಾಗದೆ, ಸಮಾಜದ ಪಿಡುಗುಗಳಾದ ದುಷ್ಚಟಗಳನ್ನು ತಮ್ಮ ಮೃದುವಾದ ಮಾತುಗಳ ಮೂಲಕ ಬಿಡಿಸಿ, ಹಾಳಾಗುತ್ತಿದ್ದ ನೂರಾರು ಕುಟುಂಬಗಳನ್ನು ರಕ್ಷಿಸಿರುವ ಶ್ರೇಯಸ್ಸು ಕೂಡ ಪೂಜ್ಯರಿಗೆ ಸಲ್ಲುತ್ತದೆ. ಸಮಾಜಸೇವೆಯ ಮೌಲ್ಯವನ್ನು ವಿವರಿಸುತ್ತಾ *“ಲಿಂಗಪೂಜೆಯಿಂದ ಒಂದು ದಿನ ಆನಂದವಾದರೆ, ಸಮಾಜಸೇವೆಯಿಂದ ಜೀವನವೇ ಆನಂದ”* ಎಂಬ ಸಂದೇಶವನ್ನು ಅವರು ಸದಾ ಸಾರುತ್ತಾರೆ. ಇದರ ಭಾಗವಾಗಿ ಶ್ರೀಮಠದ ಪ್ರತಿಷ್ಠಿತ ಪ್ರಶಸ್ತಿಯಾದ *“ಮುಗುಳ್ನಗೆಯ ಮಂದಾರ”** ಪ್ರಶಸ್ತಿಯನ್ನು ಪ್ರತಿವರ್ಷ ಸಮಾಜಸೇವೆಯಲ್ಲಿ ತೊಡಗಿರುವ ಸಾಧಕರಿಗೆ ಪ್ರದಾನ ಮಾಡಲಾಗುತ್ತಿದೆ.

ಈ ಎಲ್ಲ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲು ಇಂದು ಶ್ರೀಮಠದ ವತಿಯಿಂದ 

ದಿನಾಂಕ 25-01-2026 (ರವಿವಾರ)ರಂದು ಬೆಳಿಗ್ಗೆ

* ಹೆಬ್ಬಾಳ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

* ಎಸ್. ನಿಜಲಿಂಗಪ್ಪ ದಂತ ಮಹಾವಿದ್ಯಾಲಯ

* ಸುರಕ್ಷ ಬ್ಲಡ್ ಬ್ಯಾಂಕ್

ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ, ಉಚಿತ ನೇತ್ರ ತಪಾಸಣೆ, ನೇತ್ರ ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಅದೇ ದಿನ ಸಾಯಂಕಾಲ 7.45 ಗಂಟೆಗೆ, ಮಹಿಳಾ ಸಬಲೀಕರಣ, ಮಹಿಳೆಯರ ಸುರಕ್ಷತೆ, ಶಿಕ್ಷಣ ಹಾಗೂ ಹಕ್ಕುಗಳ ರಕ್ಷಣೆಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ  ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ, , ಶ್ರೀ ಕಟ್ಟಿಮನಿ ಸಂಸ್ಥಾನ ಹಿರೇಮಠದ ಪ್ರತಿಷ್ಠಿತ “ಮುಗುಳ್ನಗೆಯ ಮಂದಾರ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. (ಐದು ಗ್ರಾಂ ಚಿನ್ನ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.)

ಈ ಗೌರವ ಪ್ರದಾನ ಕಾರ್ಯಕ್ರಮವು ಪೂಜ್ಯ **ಶ್ರೀಮ.ಘ.ಚ. ಅಭಿನವ ಸಿದ್ಧಲಿಂಗ ಶಿವಾಚಾರ್ಯರ**ಹಸ್ತದಿಂದ,

ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ **ಡಾ. ದಾಕ್ಷಾಯಣಿ ಅವ್ವಾಜಿ**, ಆಗಮಿಸುವ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಹಾಗೂ ಸಮಸ್ತ ಸದ್ಭಕ್ತರ ಉಪಸ್ಥಿತಿಯಲ್ಲಿ ಸಕಲ ಗೌರವದೊಂದಿಗೆ ನೆರವೇರಲಿದೆ. 

ಶರಣರ ಬರುವಿಕೆಗೆ ಗುಡಿ ತೋರಣವ ಕಟ್ಟುವೆ” ಎಂಬ ವಚನದಂತೆ, ಈ ಮಹತ್ವದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀಮಠದ ವತಿಯಿಂದ ಕೋರಲಾಗಿದೆ

ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ರಮೇಶ್ ತಿಪನೂರ,ನಾಗಣಗೌಡ ಕಂಠಿ ,ನಾಮದೇವ ರಾಠೋಡ,ಶಿವಕುಮಾರ ಹಿರೆ ಗೌಡ,ನಾಗರಾಜ ಕಲ್ಲಾ,ಶ್ರೀಮತಿ ಜೋತಿ M ಮರಗೋಳ, ಶ್ರೀಮತಿ ಭಾಗಿರಥಿ ಗುನ್ನಾ ಪೂರ