ತಳವಾರ್ ಸಮುದಾಯದ ಬಂಧುಗಳಿಗೆ ಚಂದ್ರಕಾಂತ ತಳವಾರ್ ಮನವಿ

ತಳವಾರ್ ಸಮುದಾಯದ ಬಂಧುಗಳಿಗೆ ಚಂದ್ರಕಾಂತ ತಳವಾರ್ ಮನವಿ
ಸಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿಯನ್ನೇ ದಾಖಲಿಸಿ: ಜಿಲ್ಲಾಧ್ಯಕ್ಷರಿಂದ ಕರೆ
ಕಲಬುರಗಿ: ರಾಜ್ಯದಲ್ಲಿ ನಡೆಯಲಿರುವ 2025ರ ಸಾಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆಯ ಹಿನ್ನೆಲೆಯಲ್ಲಿ, ತಳವಾರ್ ಸಮುದಾಯದ ಪ್ರತಿಯೊಬ್ಬ ಸದಸ್ಯರೂ ತಮ್ಮ ಜಾತಿ ಹಾಗೂ ಕುಲಕಸುಬು ಸಂಬಂಧಿತ ಮಾಹಿತಿಯನ್ನು ಸರಿಯಾಗಿ, ಸ್ಪೆಲ್ಲಿಂಗ್ ತಪ್ಪು ಮಾಡದೆ ದಾಖಲಾಗುವಂತೆ ಕರ್ನಾಟಕ ರಾಜ್ಯ ತಳವಾರ್ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ತಳವಾರ್ ಮನವಿ ಮಾಡಿದ್ದಾರೆ.
ಅಧಿಕಾರಿಗಳು ನಿಮ್ಮ ಮನೆಗೆ ಸಮೀಕ್ಷೆಗೆ ಬಂದಾಗ ಕೆಳಗಿನ ಮಾಹಿತಿಯನ್ನು ನಿಖರವಾಗಿ ನೀಡುವುದು ಬಹುಮುಖ್ಯ:
* ಕಾಲಂ ಸಂಖ್ಯೆ 09: ಅಧಿಕಾರಿಗಳು ‘ಜಾತಿ ಏನು?’ ಎಂದು ಕೇಳಿದಾಗ "ತಳವಾರ್" ಎಂದು ಸ್ಪಷ್ಟವಾಗಿ ಹೇಳಿ. ಜೊತೆಗೆ ಕೋಡ್ ಸಂಖ್ಯೆ: C-38.13 ಅನ್ನು ಹೇಳುವುದು ಅಗತ್ಯ.
* ಕಾಲಂ ಸಂಖ್ಯೆ 10: 'ಜಾತಿ ಉಪಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದೀರಾ?' ಎಂದು ಕೇಳಿದಾಗ, **'ಅನ್ವಯಿಸುವುದಿಲ್ಲ'** ಎಂದು ತಿಳಿಸಿ.
* ಕಾಲಂ ಸಂಖ್ಯೆ 11: 'ಜಾತಿಗೆ ಸಮಾನಾರ್ಥದ ಇತರ ಜಾತಿಗಳು ಇದೆಯೇ?' ಎಂಬ ಪ್ರಶ್ನೆಗೆ 'ಇಲ್ಲ'ಎಂದು ಉತ್ತರಿಸಿ.
* ಕಾಲಂ ಸಂಖ್ಯೆ 12 : 'ನೀವು ಎಸ್.ಟಿ. ಪ್ರಮಾಣಪತ್ರ ಪಡೆದಿದ್ದೀರಾ?' ಎಂಬ ಪ್ರಶ್ನೆಗೆ 'ಹೌದು' ಎಂದು ಉತ್ತರಿಸಬೇಕು.
* ಕಾಲಂ ಸಂಖ್ಯೆ 30: 'ಕುಲಕಸುಬು ಏನು?' ಎಂಬ ಪ್ರಶ್ನೆಗೆ "64- ತಳವಾರ್" ಎಂದು ಸ್ಪಷ್ಟಪಡಿಸಿ.
ಶ್ರಿ ಚಂದ್ರಕಾಂತ ತಳವಾರ್ ಅವರು, ಈ ಮಾಹಿತಿಯು ಸರಿಯಾಗಿ ದಾಖಲಾಗದಿದ್ದಲ್ಲಿ ಭವಿಷ್ಯದಲ್ಲಿ ತಳವಾರ್ ಸಮುದಾಯಕ್ಕೆ ಆಗಬಹುದಾದ ನಷ್ಟಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಸಮುದಾಯದ ಪ್ರತಿಯೊಬ್ಬರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ತಿಳಿಸಿದ್ದಾರೆ.
-