ಪಿಕೆಪಿಎಸ್ ಗೆ ಅನೀಲ ನಾಗೊರಾವ ಅಧ್ಯಕ್ಷ

ಪಿಕೆಪಿಎಸ್ ಗೆ ಅನೀಲ ನಾಗೊರಾವ ಅಧ್ಯಕ್ಷ

ಪಿಕೆಪಿಎಸ್ ಗೆ ಅನೀಲ ನಾಗೊರಾವ ಅಧ್ಯಕ್ಷ

ಕಮಲನಗರ: ತಾಲೂಕಿನ ಹೊಳೆಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಕಚೇರಿಯಲ್ಲಿ ಸೋಮವಾರ ನಡೆದ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷ ,ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

 ಅಧ್ಯಕ್ಷರಾಗಿ ಅನೀಲ ನಾಗೊರಾವ ಶಿಂಧೆ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಗುರುಲಿಂಗಪ್ಪ ಬೆಣ್ಣೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

 ಚುನಾವಣಾಧಿಕಾರಿ ಎಂ.ಡಿ.ಫರಾಜ್ ಅವರು ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾದ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ನಡೆದುಕೊಳುತ್ತೇವೆ. ಪಿಕೆಪಿಎಸ ಸಂಘದಿಂದ ಯೋಜನೆಗಳನ್ನು ರೈತರಿಗೆ ತಲುಪಿಸುವಂತೆ ಪ್ರಯತ್ನ ಪಟ್ಟು ಕೆಲಸ ಮಾಡುತ್ತೇನೆ ಎಂದು ಎಲ್ಲರ ಸಹಾಯ ಸಹಕಾರ ಭರವಸೆ ಇರಬೇಕೆಂದು ಮಾತನಾಡಿದರು.

ಸೋಮವಾರ ಚುನಾವಣೆ ಅವಿರೋಧವಾಗಿ ಆಯ್ಕೆಯಾಗಿದ್ದು ಒಟ್ಟು 12 ನಿರ್ದೇಶಕರ ಬಲದ ಸಂಘದಲ್ಲಿ ನಿರ್ದೇಶಕರ ಆಯ್ಕೆ ಮಾಡಲಾಯಿತು. ಸಂಗಶೆಟ್ಟಿ ಮಾಣಿಕಪ್ಪ, ಮಾರುತಿ ಶಿವಾಜಿರಾವ್, ನಾರಾಯಣ ಪ್ರಕಾಶ, ರಾಮರಾವ್ ತಾನಾಜಿ, ,ಅಂಬಾಜಿ ದಶರಥ, ಪ್ರದೀಪ ದತ್ತಾಜಿ,ರೇಖಾ ರಾಜಕುಮಾರ್, ಉಜ್ವಲ ವೆಂಕಟ,

ಶಿವಾಜಿ ಯಾದವರಾವ, ಸಂತೋಷ ಅಡೆಪ್ಪ, (ನಿರ್ದೇಶಕರು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಗೋವಿಂದ ಮ.ಮಚಕುರೆ ಸಹಕಾರ ನೀಡಿದರು. ಜಗದೇವಿ ಕಾಶಿನಾಥ್, ಕಾವೇರಿ ಸಂತೋಷ್, ವೀರಭದ್ರ ಸ್ವಾಮಿ ಇನ್ನಿತರೂ ಸೇರಿ ರೈತರು ಹಿರಿಯರು ಉಪಸ್ಥಿತಿಯಲ್ಲಿದ್ದರು.