ತೋನಸನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣಗೊಳಿಸಿದ ಶಾಸಕರು
ತೋನಸನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣಗೊಳಿಸಿದ ಶಾಸಕರು
ನಾಗರಾಜ್ ದಂಡಾವತಿ ವರದಿ ಶಹಾಬಾದ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಮೂರ್ತಿ ಸ್ಥಾಪನೆ ಮಾಡಿದರೆ ಸಾಲದು ಅವರ ವಿಚಾರಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಿದರೆ ಮಾತ್ರ ಅಂಬೇಡ್ಕರ್ ವಾದಿಯಾಗಲು ಸಾಧ್ಯ ಮತ್ತು ಮೂರ್ತಿ ಸ್ಥಾಪನೆಯಿಂದ ಸ್ಪೂರ್ತಿ ಬರುತ್ತದೆ ಎಂದು ತಾಲ್ಲೂಕ ತಹಶೀಲ್ದಾರ ನೀಲಪ್ರಭಾ ಬಬಲಾದ ರವರು ಹೇಳಿದರು. ಅವರು ತಾಲ್ಲೂಕಿನ ತೋನಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮಾತನಾಡಿ, ದೇಶದಲ್ಲಿರುವ ಎಲ್ಲಾ ಜಾತಿ ಧರ್ಮಗಳಿಗೆ ತಲೆಯೆತ್ತಿ ನಿಲ್ಲುವಂತೆ ಮಾಡಿದವರು ಡಾ.ಅಂಬೇಡ್ಕರರು, ಅನೇಕ ದೇಶಗಳ ಸಂವಿಧಾನಗಳನ್ನು ಪರಾಮರ್ಶಿಸಿ ಭಾರತ ದೇಶಕ್ಕೆ ಬಹುದೊಡ್ಡ ಕೊಡುಗೆ ಅದುವೇ ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದೆ. ಬುದ್ಧ ಬಸವ ಅಂಬೇಡ್ಕರ್ ಅವರ ವಿಚಾರಧಾರೆಯಲ್ಲಿ ಸಮ ಸಮಾಜದ ನಿರ್ಮಾಣ ಕಲ್ಪಿಸಿಕೊಟ್ಟ ಭಾರತದ ಸಂವಿಧಾನದ ರಕ್ಷಣೆ ಮಾಡುವ ಕೆಲಸ ದೇಶದ ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರ ಮಾತನಾಡಿ, ಮನುಷ್ಯತ್ವ ಇಲ್ಲದ ಕಾಲದಲ್ಲಿ ಮನುಷ್ಯರ ಮನಸ್ಸಿನಲ್ಲಿ ಮಾನವೀಯ ಮೌಲ್ಯ ತುಂಬಿದ ಮಹಾನ್ ನಾಯಕ ಮತ್ತು ಈ ಭಾಗದ ಜನಪ್ರಿಯ ಶಾಸಕರಾದ ಬಸವರಾಜ್ ಮತ್ತಿಮಡು ಅವರು ತಮ್ಮ ಕ್ಷೇತ್ರದಲ್ಲಿ ಹಲವಾರು ಕಡೆ ಡಾ.ಅಂಬೇಡ್ಕರ ರವರ ಮೂರ್ತಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಿದರು.
ದಸಂಸ ರಾಜ್ಯ ಸಂ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ದೇಶದ ಏಳು ಧರ್ಮ, ಸಾವಿರಾರು ಜಾತಿಗಳನ್ನು ಆಧಾರವಾಗಿಟ್ಟುಕೊಂಡು ಆರ್ಥಿಕ ವಿಚಾರಗಳನ್ನ ವಿಮರ್ಶಿಸಿ ಬಲಿಷ್ಠವಾದ ಸಂವಿಧಾನ ರಚಿಸಿದ್ದಾರೆ. ಭಾರತದ ಸಂವಿಧಾನ ಕೇವಲ ದಲಿತರಿಗೆ ಮಾತ್ರ ಅಲ್ಲ, ಹಿಂದುಳಿದ ಎಲ್ಲಾ
ಜಾತಿ ಜನಾಂಗದವರಿಗೆ ಈ ಸಂವಿಧಾನದಲ್ಲಿ ಮೀಸಲಾತಿ ನೀಡಿದ್ದಾರೆ, ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡ ಮತದಾನದ ಹಕ್ಕನ್ನ ಕೊಟ್ಟಂತವರು ಡಾ.ಅಂಬೇಡ್ಕರ್, ಮೂರ್ತಿ ಕೂಡಿಸುವ ಉದ್ದೇಶ ಆ ಮೂರ್ತಿಯಿಂದ ದೇಶದ ಜನರು ಶಿಕ್ಷಿತರಾಗಬೇಕು ಎಂಬ ಅರಿವು ಮೂಡಿಸುತ್ತದೆ. ಒಂದು ವೇಳೆ ಡಾ.ಅಂಬೇಡ್ಕರ್ ಇರದಿದ್ದರೆ ಈ ದೇಶ ಶೂನ್ಯವಾಗುತ್ತಿತ್ತು ಎಂದು ಮಾರ್ಮಿಕವಾಗಿ ಹೇಳಿದರು.
ಆಣದೂರಿನ ಪೂಜ್ಯ ವರಜ್ಯೋತಿ ಬಂತೆಯೇ, ತೋಸನಹಳ್ಳಿ ಗ್ರಾಮದ ಅಲ್ಲಮಪ್ರಭು ಸಂಸ್ಥಾನದ ಪೂಜ್ಯರಾದ ಡಾ.ಮಲ್ಲಣ್ಣಪ್ಪ ಮಹಾಸ್ವಾಮಿಗಳು, ತಾಲೂಕ ತಹಶೀಲ್ದಾರ್ ನೀಲಪ್ರಭಾ ಬಬಲಾದ, ಜಿ.ಪಂ.ಮಾಜಿ ಸದಸ್ಯ ಶಿವಾನಂದ ಪಾಟೀಲ, ಬಸವರಾಜ್ ಬೆನ್ನೂರ,
ದಸಂಸ ರಾಜ್ಯ ಹಳ್ಳಿ, ದಿನೇಶ ದೊಡ್ಡಮನಿ, ವಕೀಲರಾದ ವಿದ್ಯಾಧರ ಹುಗ್ಗಿ ಮಾತನಾಡಿದರು. ರಾಜ್ಯ ಸಂ.ಸಂಚಾಲಕ ಮರಿಯಪ್ಪ
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಮುತ್ತಮ್ಮ ಮರತೂರು ಅವರು ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಕಾಡಾ ನಿಗಮದ ಅಧ್ಯಕ್ಷ ಡಾ.ಎಂಎ ರಶೀದ, ಪೌರಾಯುಕ್ತ ಡಾ.ಕೆ.ಗುರ್ಲಿಂಗಪ್ಪ, ತಾಪಂ ಇಒ ಮಲ್ಲಿನಾಥ್ ರಾವೂರ, ಸ.ಕ.ಇ. ಎಡಿ ಚೇತನ್ ಗುರಿಕಾರ, ಪಿ. ಐ ನಟರಾಜ, ಉಪಾಧ್ಯಕ್ಷೆ ಅಪ್ಲೋಜ ಬೇಗಂ, ಮಲ್ಲಪ್ಪ ಹೊಸಮನಿ, ಅಜೀತಕುಮಾರ ಪಾಟೀಲ, ಅಪ್ಪುಗೌಡ, ಶಿವಲಿಂಗಪ್ಪ ಗೋಳೆದ. ರಾಜಕುಮಾರ ಹುಗ್ಗಿ, ರಾಜು ಮೇಸ್ತಿ ಉಪಸ್ಥಿರಿದರು.
ಬೆಳಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಯನ್ನು ಮತ ಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ರವರು ಅನಾವರಣ ಗೊಳಿಸಿದರು.
ವೀರೇಶ್ ಗೋಳೇದ್ ಅವರನ್ನ ವಿಶೇಷವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಗ್ರಾ. ಪಂ. ಸದಸ್ಯರು, ಸಿಬ್ಬಂದಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.
ಪಿಡಿಒ ನಿಂಗಪ್ಪ ಕೆಂಭಾವಿ ಸ್ವಾಗತಿಸಿದರು, ಮಲ್ಲಣ್ಣ ಮಸ್ಕಿ ನಿರೂಪಿಸಿದರು, ಶ್ರೀಕಾಂತ್ ಹುಡುಗಿ ವಂದಿಸಿದರು.
