ವಿದ್ಯಾಧರ ಗುರೂಜಿ ಕೊಡುಗೆ ಸ್ಮರಣೀಯ : ಶಶೀಲ್ ನಮೋಶಿ

ವಿದ್ಯಾಧರ ಗುರೂಜಿ ಕೊಡುಗೆ ಸ್ಮರಣೀಯ : ಶಶೀಲ್ ನಮೋಶಿ

ವಿದ್ಯಾಧರ ಗುರೂಜಿ ಕೊಡುಗೆ ಸ್ಮರಣೀಯ : ಶಶೀಲ್ ನಮೋಶಿ 

ವಿದ್ಯಾಧರ ಗುರೂಜಿ ಅವರ 111ನೇ ಜಯಂತೋತ್ಸವ ಆಚರಣೆ

ಕಲಬುರಗಿ: ಲಾಹೋರ್‌ನಲ್ಲಿ ಹಿಂದಿ ಭಾಷೆಯ ಅಭ್ಯಾಸ ಮಾಡಿದ್ದ ವಿದ್ಯಾಧರ ಗುರೂಜಿ ಅವರು ಸಮಯಪ್ರಜ್ಞೆ, ಶಿಸ್ತು ಹಾಗೂ ಸಿಪಾಯಿಯಂತಹ ನಿಷ್ಠೆಯಿಂದ ಬದುಕಿದ ಮಹಾನ್ ವ್ಯಕ್ತಿಯಾಗಿದ್ದರು. ನೆಲ, ಜಲ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ಅವರ ಅಪಾರ ಅಭಿಮಾನ ಸಮಾಜಕ್ಕೆ ದಿಕ್ಕು ತೋರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.

ನಗರದ ಕರ್ನಾಟಕ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಆಯೋಜಿಸಿದ್ದ ಶತಾಯುಷಿ ವಿದ್ಯಾಧರ ಗುರೂಜಿ ಅವರ 111ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1962ರಲ್ಲಿ ಕೋಳೂರ ಮಲ್ಲಪ್ಪ ಅವರನ್ನು ಪರಾಭವ ಗೊಳಿಸಿದರು,

 ಧೈರ್ಯಶಾಲಿ ಹೋರಾಟಗಾರರಾಗಿದ್ದ ಗುರುಜಿಯವರು, 1996ರಲ್ಲಿ ಮೊದಲ ಬಾರಿಗೆ ಹೈದರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆಯನ್ನು ಆಚರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ಕಲಬುರಗಿ ಘಟಕದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಹೈದರಾಬಾದ್ ಕರ್ನಾಟಕವನ್ನು ಮುಕ್ತಗೊಳಿಸಲು ವಿದ್ಯಾಧರ ಗುರೂಜಿ ಅವರ ಕೊಡುಗೆ ಅಪಾರವಾಗಿದೆ. ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರರ ಸ್ಮಾರಕವನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.

ರೈತ ಮುಖಂಡ ದಯಾನಂದ ಅವರು ಮಾತನಾಡಿ, ವಿದ್ಯಾಧರ ಗುರೂಜಿ ಅವರ ಸಮಾಜಮುಖಿ ಚಿಂತನೆ, ಹೋರಾಟ ಮನೋಭಾವ ಮತ್ತು ತ್ಯಾಗಮಯ ಜೀವನ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರು. 

ಡಾ. ನಾಮದೇವ ಜಾಧವ್ ಅವರು ಉಪನ್ಯಾಸ ನೀಡಿದರು.

 ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ದಯಾನಂದ ಅಗಸರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗುರುಜಿ ಅವರು ಒಂದೇ ಜಾತಿಗೆ ಸೀಮಿತವಾಗದೆ ಕಲ್ಯಾಣ ಕರ್ನಾಟಕದ ಏಳಿಗೆಗಾಗಿ ಹಗಲಿರುಳೂ ಶ್ರಮಿಸಿದವರು ಎಂದು ಹೇಳಿದರು.

 ಸ್ವಾತಂತ್ರ ಹೋರಾಟಗಾರ ಶಿತಾರಾಮ ಚೌವ್ಹಾಣ , ಅಶೋಕ ಗುರೂಜಿ ಗೌರವ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಉಮೇಶ ಶೆಟ್ಟಿ ಅವರು ಸ್ವಾಗತ ಗೀತೆ ಹಾಡಿದರು. 

ಈ ಸಂದರ್ಭದಲ್ಲಿ ಅಪ್ಪಾರಾವ್ ಅಕ್ಕೋಣೆ, ಎಸ್.ಎಲ್. ಪಾಟೀಲ, ಶಿವಾನಂದ ಹಿರೇಮಠ, ಗಿರೀಶ್ ಗೌಡ ಇನಾಂದಾರ್, ಮಲ್ಲಿಕಾರ್ಜುನ ಕಲ್ಲಬೇನೂರ , ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ವಿಶ್ವನಾಥ ಪಾಟೀಲ ಗವನಳ್ಳಿ, ಬಸವರಾಜ ಪಾಟೀಲ ಕುಕನೂರ, ಶರಣಪ್ಪ ತಳವಾರ, ಉದಯಕುಮಾರ ಜೇವರ್ಗಿ,ಅಣವೀರ ಪಾಟೀಲ ಸೇರಿದಂತೆ ಉಪಸ್ಥಿತರಿದ್ದರು.

ವಿಜಯಕುಮಾರ್ ನಾಗನಹಳ್ಳಿ ಅವರು ಪ್ರಸಾದ ವ್ಯವಸ್ಥೆ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಧರ ಗುರೂಜಿ ಅವರ ಜೀವನ, ಸಾಧನೆ ಮತ್ತು ಹೈದರಾಬಾದ್ ಕರ್ನಾಟಕದ ಸಾಮಾಜಿಕ–ಸಾಂಸ್ಕೃತಿಕ ಅಭಿವೃದ್ಧಿಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು, ಸರ್ದಾರ್ ಶರಣಗೌಡ , ಗಂಗಾಧರ ನಮೋಶಿ, ಚಂದ್ರಶೇಖರ್ ಪಾಟೀಲಹಾಗೂ ಅಪ್ಪಾರಾವ ಪಾಟೀಲ ಮಹಾಗಾಂವ, ಚನ್ನಬಸಪ್ಪ ಕುಳಗೇರಿ, ಡಿ.ಬಿ ಕಲ್ಮಣಕರ್,  ವಿಶ್ವನಾಥ್ ರೆಡ್ಡಿ ಮುದ್ನಾಳ , ಸೇರಿದಂತೆ ಅನೇಕರನ್ನು ಸ್ಮರಿಸಿದರು .