ಅಧಿವೇಶನದಲ್ಲಿ ರಾಜ್ಯಪಾಲರ ಜೊತೆಗೆ ಕಾಂಗ್ರೆಸ್ ಸರಕಾರ ವರ್ತಿಸಿದ ರೀತಿ ಖಂಡನೀಯ: ಸಂತೋಷ ಗಡಂತಿ
ಅಧಿವೇಶನದಲ್ಲಿ ರಾಜ್ಯಪಾಲರ ಜೊತೆಗೆ ಕಾಂಗ್ರೆಸ್ ಸರಕಾರ ವರ್ತಿಸಿದ ರೀತಿ ಖಂಡನೀಯ: ಸಂತೋಷ ಗಡಂತಿ
ಚಿಂಚೋಳಿ: ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿರುವ ಸಂರ್ಭದಲ್ಲಿ ಕೇವಲ ಒಂದು ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ವಿಶೇಷ ಅಧಿವೇಶನ ಕರೆದು ಹಣ ವ್ಯರ್ಥ ಖರ್ಚು ಮಾಡುವ ಬದಲು ಅಭಿವೃದ್ಧಿಗೆ ಬಳಕೆ ಮಾಡಿದರೆ ಸರಕಾರದ ಕ್ರಮಕ್ಕೆ ಸ್ವಾಗತಿ ಸಲಾಗುತ್ತಿತ್ತು. ಸರಕಾರ ರಾಜ್ಯಪಾಲರ ಜೊತೆಗೆ ವರ್ತಿಸಿದ ರೀತಿ ಸರಿಯಲ್ಲ ಎಂದು ಕಾಂಗ್ರೆಸ್ ವರ್ತನೆಗೆ ಕಲಬುರಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ ಗಡಂತಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಹೀಗೆಂದು ಪ್ರಕಟಣೆ ಹೇಳಿಕೆ ನೀಡಿದ ಅವರು, ರಾಜ್ಯದಲ್ಲಿ ಸಂಪೂರ್ಣ ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆಗಳು ಹಾಳಾಗಿವೆ. ಕೆರೆ ಕಟ್ಟೆಗಳು ದುರಸ್ತಿಗೆ ಹಣ ನೀಡುತ್ತಿಲ್ಲ. ಗುತ್ತಿಗೆದಾರರ ಸಾವಿರಾರು ಕೋಟಿ ಬಿಲ್ಲುಗಳು ಬಾಕಿ ಇರಿಸಿಕೊಂಡಿದೆ. ಹೀಗಿರುವಾಗ ಒಂದು ಯೋಜನೆಯ ಕುರಿತಾಗಿ ಅಧಿವೇಶನ ಕರೆಯುವ ಅಗತ್ಯವಾದರು ಏನಿತ್ತು..? ರಾಜ್ಯಪಾಲರ ಜೊತೆಗೆ ನಡೆದುಕೊಂಡಿರುವ ರೀತಿ ಸರಿಯಲ್ಲ. ಸಂವಿಧಾನ ಮಂತ್ರ ಪಠಿಸುವ ಕಾಂಗ್ರೆಸ್ ಕಲಿತಿದ್ದಾರು ಏನು? ಪ್ರಶ್ನಿಸಿದ್ದಾರೆ.ಸರ್ಕಾರ ವ್ಯರ್ಥ ಹಣ ಖರ್ಚು ಮಾಡುವ ಬದಲು ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿ ಅನುದಾನ ನೀಡಲು ಮುಂದಾಗಿಲಿ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
