ಮಾಯಾವತಿ ಹುಟ್ಟು ಹಬ್ಬದ ಪ್ರಯುಕ್ತ : ಬೊಮ್ಮನಳ್ಳಿ ಬ್ರದರ್ಸ್ ವಾಲಿಬಾಲ್ ಟೂರ್ಲಮೇಂಟ್ ಆಯೋಜನೆ
ಬಹುಜನ ಪಾರ್ಟಿ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ಹುಟ್ಟು ಹಬ್ಬದ ಪ್ರಯುಕ್ತ : ಬೊಮ್ಮನಳ್ಳಿ ಬ್ರದರ್ಸ್ ವಾಲಿಬಾಲ್ ಟೂರ್ಲಮೇಂಟ್ ಆಯೋಜನೆ
ಪಂದ್ಯಾವಳಿಯಲ್ಲಿ ಭಾಗವಹಿಸಲು ಚೆನೈ, ಪುನೆ, ಮುಂಬೈ, ಹೈದ್ರಾಬಾದ್ ಮತ್ತು ಕಲಬುರಗಿ, ಬೀದರ, ಶಾಹಬಾದ ಸೇರಿ ಒಟ್ಟು 16 ತಂಡಗಳು ನೋಂದಣಿ
ಚಿಂಚೋಳಿ : ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದ ಪರಿಸರ ಆವರಣದಲ್ಲಿ ಗೌತಮ್ ಬೊಮ್ಮನಳ್ಳಿ ಬ್ರದರ್ಸ್ ಅವರ ವತಿಯಿಂದ ಬಹುಜನ ಪಾರ್ಟಿ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಯಿತು.
ಈ ಪಂದ್ಯಾವಳಿಯನ್ನು ಸಮಾಜದ ಹಿರಿಯ ಮುಖಂಡರಾದ ರಮೇಶ ಯಾಕಾಪೂರ ಮತ್ತು ಗೋಪಾಲರಾವ ಕಟ್ಟಿಮನಿ ಅವರು ಪಂದ್ಯಾವಳಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಕ್ರಿಯಾಶೀಲರಾಗಿ ದೇಹದ ಉತ್ತಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ಬದುಕಿನ ಜೀವನದಲ್ಲಿ ಕ್ರೀಡೆಗಳು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಚಿಂಚೋಳಿಯ ಯುವಕರು ವಾಲಿಬಾಲ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಇತಿಹಾಸವಿದೆ. ಕಳೆದ 70 ವರ್ಷದ ಹಿಂದೆ ವಾಲಿಬಾಲ್ ಪಂದ್ಯಗಳಲ್ಲಿ ಭಾಗವಹಿಸಿ ಗೆಳೆಯರ ಜೊತೆಗೆ ಆಟವಾಡಿರುವ ಬಾಲ್ಯ ಜೀವನದ ಬಗ್ಗೆ ಮತ್ತು ಜೊತೆ ಆಟಗಾರರ ಹಾಗೂ ಮಾರ್ಗದರ್ಶಕರನ್ನು ನೆನೆದರು.
ವಾಲಿಬಾಲ್ ಪಂದ್ಯಾವಳಿಗಳ ಆಯೋಜಕ ಗೌತಮ್ ಬೊಮ್ಮನಳ್ಳಿ ಮಾತನಾಡಿ, ಕಡು ಬಡತನದಲ್ಲಿ ಹುಟ್ಟಿ, ದೇಶದ ಅಭಿವೃದ್ಧಿಗೆ ಸ್ವಂತ ಪಕ್ಷವನ್ನು ಕಟ್ಟಿಕೊಂಡು ಉತ್ತರ ಪ್ರದೇಶ ರಾಜ್ಯದ 4 ಬಾರಿ ಮುಖ್ಯಮಂತ್ರಿಯಾಗಿದವರು. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶೆಯಂತೆ ಬದುಕಿ ಅಭಿವೃದ್ಧಿ ಕನಸು ಹೊಂದಿರುವ ಅಕ್ಕ ಮಾಯಾವತಿ ಅವರು ಸಮಾಜಕ್ಕೆ ಮತ್ತು ಯುವಕರ ಸ್ಪೂರ್ತಿಯಾಗಿದ್ದಾರೆ. ಈ ಹಿನ್ನಲೆ ಅವರ 70 ನೇ ಹುಟ್ಟು ಹಬ್ಬವನ್ನು ಆಚರಣೆ ಅಂಗವಾಗಿ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗಿದೆ. ಈ ಪಂದ್ಯವಾಳಿಗಳಲ್ಲಿ ಭಾಗವಹಿಸಲು ಚೆನೈ, ಪುನೆ, ಮುಂಬೈ, ಹೈದ್ರಾಬಾದ್ ಮತ್ತು ಕಲಬುರಗಿ, ಬೀದರ, ಶಾಹಬಾದ ಸೇರಿ ಒಟ್ಟು 16 ತಂಡಗಳು ನೋಂದಣೆ ಮಾಡಿಕೊಂಡಿವೆ. ಈ ಪಂದ್ಯಾವಳಿಗಳು ಹಗಲು ಮತ್ತು ರಾತ್ರಿ ನಡೆಯಲಿವೆ. ಇದೇ ವೇಳೆ ತಾಲೂಕಿನ ಹಳೆಯ ವಾಲಿಬಾಲ್ ಕ್ರೀಡಾಪಟುಗಳಿಗೆ ಗೌರವ ಸನ್ಮಾನ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ವಕೀಲ ಶ್ರೀಮಂತ ಕಟ್ಟಿಮನಿ, ಶರಣು ಪಾಟೀಲ್ ಮೋತಕಪಳ್ಳಿ, ಸೈಯದ್ ಹಾದಿ, ಕೆ.ಎಂ.ಬಾರಿ, ಹಿರಿಯ ಪತ್ರಕರ್ತ ಶಾಮರಾವ ಓಂಕಾರ್, ಜಗನ್ನಾಥ ಕಟ್ಟಿ, ರಾಹುಲ್ ಯಾಕಾಪೂರ, ಸುಭಾಷ ಸಿಳ್ಳಿನ್, ಸುರೇಶ ಕೊರವಿ, ನೀಲಕಂಠ ಸಿಳ್ಳಿನ್, ಜನಾರ್ಧನ್ ಪಾಟೀಲ್, ರಂಗಣ್ಣ ಪೊಲೀಸ್, ಶಾಮರಾವ ಮೋಘ, ಮೌಲಾನಾ ಪಟೇಲ್ ಸೇರಿದಂತೆ ಬೊಮ್ಮನಗಳಿ ಬದ್ರರ್ಸ್ ಅವರು ಉಪಸ್ಥಿರಿದರು.
