ದಕ್ಷಿಣ ಕನ್ನಡ ಸಂಘದ ಸಂಸ್ಥಾಪಕ ಸದಸ್ಯ ವೆಂಕಟೇಶ ಕೆದಿಲಾಯ ಇನ್ನಿಲ್ಲ

ದಕ್ಷಿಣ ಕನ್ನಡ ಸಂಘದ ಸಂಸ್ಥಾಪಕ ಸದಸ್ಯ ವೆಂಕಟೇಶ ಕೆದಿಲಾಯ ಇನ್ನಿಲ್ಲ

ದಕ್ಷಿಣ ಕನ್ನಡ ಸಂಘದ ಸಂಸ್ಥಾಪಕ ಸದಸ್ಯ ವೆಂಕಟೇಶ ಕೆದಿಲಾಯ ಇನ್ನಿಲ್ಲ

ಕಲಬುರಗಿ: ದಕ್ಷಿಣ ಕನ್ನಡ ಸಂಘ ಕಲಬುರಾಗಿ ಇದರ ಸಂಸ್ಥಾಪಕ ಸದಸ್ಯರು ಹಾಗೂ ಹಿರಿಯ ಹೋಟೆಲ್ ಬೇಕರಿ ಉದ್ಯಮಿಗಳಾದ ವೆಂಕಟೇಶ ಕೆದಿಲಾಯ ವಾಡಿ ಇವರು ಜ. 25ರಂದು ಹೈದರಾಬಾದಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. 

     ಇವರು ಮೂಲತಃ ಉಡುಪಿ ಜಿಲ್ಲೆಯ ಬಿದ್ಕಲ್ ಕಟ್ಟೆಯ ಹಾರ್ದಹಳ್ಳಿಯವರಾಗಿದ್ದು ಸುಮಾರು 55 ವರ್ಷಗಳ ಹಿಂದೆ ಉದ್ಯೋಗವನ್ನು ಅರಸಿಕೊಂಡು ಕಲಬುರಗಿಗೆ ಆಗಮಿಸಿ ಹೋಟೆಲ್ ಪ್ರಾರಂಭಿಸಿದ್ದರು.ನಂತರ ವಾಡಿಯಲ್ಲಿ ಸುಮಾರು 45 ವರ್ಷಗಳಿಂದ ಹೋಟೆಲ್ ಮತ್ತು ಬೇಕರಿ ಉದ್ಯಮ ನಡೆಸುತ್ತಿದ್ದರು. ದಕ್ಷಿಣ ಕನ್ನಡ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿ ಸಂಘದ ಉನ್ನತಿಗೆ ಸಲಹೆ ಮಾರ್ಗದರ್ಶನವನ್ನು ನೀಡಿ ಜಿಲ್ಲೆಯಲ್ಲಿ ಸಂಘವನ್ನು ಕಟ್ಟಿ ಬೆಳೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು 

    ವೆಂಕಟೇಶ್ ಕೆದಿಲಾಯ ಅವರು ಪತ್ನಿ ಜಯಲಕ್ಷ್ಮಿ ಕಕೆದಿಲಾಯ ಮಕ್ಕಳಾದ ಗಣೇಶ ಕೆದಿಲಾಯ, ಅಂಬರೀಶ ಕೆದಿಲಾಯ ಹಾಗೂ ಮಹೇಶ್ ಕೆದಿಲಾಯ ಮೂವರು ಗಂಡು ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

ಅಂತ್ಯಕ್ರಿಯೆ ಇಂದು

ವಾಡಿಯಲ್ಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಾಯಂಕಾಲ 5 ಗಂಟೆಗೆ ನೆರವೇರಲಿದೆ ಎಂದು ಅವರ ಕುಟುಂಬ ಮೂಲ ತಿಳಿಸಿದೆ. 

ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷ ಡಾ. ಸದಾನಂದ ಪೆರ್ಲ ತೀವ್ರ ಸಂತಾಪ

ದಕ್ಷಿಣ ಕನ್ನಡ ಸಂಘದ ಸಂಸ್ಥಾಪಕ ಸದಸ್ಯರು ಹಾಗೂ ಹಿರಿಯ ಮಾರ್ಗದರ್ಶಕರು ಆಗಿದ್ದ ವೆಂಕಟೇಶ್ ಕೆದಿಲಾಯರ ನಿಧನವು ಸಂಘಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ ಮತ್ತು ಅವರ ಅಗಲಿದ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ಕರುಣಿಸಲಿ ಎಂದು ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳ ಸಜ್ಜನಿಕೆಯ ಮತ್ತು ಉತ್ಸಾಹದ ವ್ಯಕ್ತಿತ್ವವನ್ನು ಹೊಂದಿ ಜನಪ್ರಿಯರಾಗಿದ್ದ ವೆಂಕಟೇಶ ಕೆದಿಲಾಯ ಅವರ ಅಗಲುವಿಕೆ ತುಂಬಲರಾದ ನಷ್ಟವಾಗಿದ್ದು ಅವರ ಕುಟುಂಬವರ್ಗಕ್ಕೂ ಹಾಗೂ ಬಂಧು ಮಿತ್ರರಿಗೆ ಮತ್ತು ಸಂಘದ ಸದಸ್ಯರಿಗೆ ಅಗಲುವಿಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮಲ್ಲು ನೀಡಲಿ ಎಂದು ಶೋಕ ಸಂದೇಶದಲ್ಲಿ ಡಾ.ಪೆರ್ಲ ತಿಳಿಸಿದ್ದಾರೆ.