ಕಲಬುರಗಿಯಲ್ಲಿ ಹರಳಯ್ಯ ಜ್ಯೋತಿ ಯಾತ್ರೆ: ಬಸವಭೂಮಿ ಬಸವಕಲ್ಯಾಣದವರೆಗೆ ಪವಿತ್ರ ಪಾದಯಾತ್ರೆ

ಕಲಬುರಗಿಯಲ್ಲಿ ಹರಳಯ್ಯ ಜ್ಯೋತಿ ಯಾತ್ರೆ: ಬಸವಭೂಮಿ ಬಸವಕಲ್ಯಾಣದವರೆಗೆ ಪವಿತ್ರ ಪಾದಯಾತ್ರೆ

ಕಲಬುರಗಿಯಲ್ಲಿ ಹರಳಯ್ಯ ಜ್ಯೋತಿ ಯಾತ್ರೆ: ಬಸವಭೂಮಿ ಬಸವಕಲ್ಯಾಣದವರೆಗೆ ಪವಿತ್ರ ಪಾದಯಾತ್ರೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಹಾಗೂ ಸಮಾಜದ ಮುಖಂಡರ ಸಹಭಾಗಿತ್ವದಲ್ಲಿ ಫೆಬ್ರವರಿ ೧೫ ರಂದು ಬೆಳಿಗ್ಗೆ ೧೧ ಗಂಟೆಗೆ ಸೇಡಂ ತಾಲೂಕಿನ ಬಿಜ್ಜನಳ್ಳಿ ಗ್ರಾಮದಿಂದ ಹರಳಯ್ಯ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಈ ಯಾತ್ರೆ ಮಾರ್ಚ್ ೦೧ ರವರೆಗೆ ವಿವಿಧ ಗ್ರಾಮಗಳ ಮೂಲಕ ಸಾಗುತ್ತ ಬಸವಭೂಮಿ ಬಸವಕಲ್ಯಾಣ ತಲುಪಲಿದೆ.

ಫೆಬ್ರವರಿ ೧೬ರಂದು ಟೇಂಗಳಿ, ೧೭ರಂದು ಕೊಡದೂರು, ೧೮ರಂದು ಭರತನೂರ, ೧೯ರಂದು ಕಾಳಗಿ, ೨೦ರಂದು ಕೋಡ್ಲಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಯಾತ್ರೆ ಸಂಚರಿಸಲಿದೆ. ಆಯಾ ಗ್ರಾಮದ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಮನವಿ ಮಾಡಿದ್ದಾರೆ.

ಶರಣೆ ಕಲ್ಯಾಣಮ್ಮ–ಹರಳಯ್ಯ ದಂಪತಿಗಳು ಬಸವಣ್ಣನವರಿಗೆ ಚಿಮ್ಮಾವು (ಪಾದರಕ್ಷೆ) ಅರ್ಪಿಸಿದ ಸ್ಮರಣಾರ್ಥವಾಗಿ ಹಾಗೂ ಬಸವಾದಿ ಶರಣರು ಸಮಾಜಕ್ಕಾಗಿ ಮಾಡಿದ ತ್ಯಾಗ–ಬಲಿದಾನಗಳನ್ನು ಸ್ಮರಿಸಿ ಅವರ ಸಂದೇಶಗಳನ್ನು ಮನೆ-ಮನೆಗೆ, ಮನ-ಮನಕ್ಕೆ ತಲುಪಿಸುವ ಉದ್ದೇಶದಿಂದ ಈ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾತ್ರೆಯ ಮಾರ್ಗದಲ್ಲಿ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಬೆಳಿಗ್ಗೆ ೧೧ ಗಂಟೆಗೆ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ, ವಚನ ಪಠಣ ನಡೆಯಲಿದ್ದು, ಸಂಜೆ ವೇಳೆ ಗ್ರಾಮಸ್ಥರಿಗೆ ಬಸವಾದಿ ಶರಣರ ತ್ಯಾಗ–ಬಲಿದಾನಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಯಾತ್ರೆಯ ನಿಮಿತ್ತ ಬಿಜ್ಜನಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅಂಡಗಿ ಪ್ರತಿಷ್ಠಾನದ ಪದಾಧಿಕಾರಿಗಳು, ಸುಮಾರು ೧೪ ತಲೆಮಾರಿನಿಂದ ಹರಳಯ್ಯನವರ ಚೆಮ್ಮಾವು ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತಿರುವ ಬಸವರಾಜ ಸುಲಭಾನೋರ ಪೂಜಾರಿ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಲ್ಲಿನಾಥ ದೇಶಮುಖ, ವಿನೋದಕುಮಾರ ಜೇನೆವರಿ, ಬಸವಂತರಾವ ಕೋಳಕೂರ, ವಿವೇಕಾನಂದ ಬುಳ್ಳಾ, ನಾಗೇಂದ್ರಪ್ಪ ಪಾಟೀಲ, ಬಸವರಾಜ ಬಿರಾದಾರ, ಬಸವರಾಜ ಯಕಮಾಯಿ, ಅಂಬರೇಶ, ರಾಜಶೇಖರ, ವೈಜನಾಥ ಕೋರವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.