ಪ್ರಣವಾನಂದ ಶ್ರೀಗಳ ಪಾದಯಾತ್ರೆ ಗಂಗಾವತಿಗೆ ಹದಿನಾರನೇ ದಿನಕ್ಕೆ ಪದಾರ್ಪಣೆ ಸರ್ಕಾರದ ಜಾಣ ಮೌನಕ್ಕೆ ಹೆಚ್ಚಿದ ಈಡಿಗರ ಆಕ್ರೋಶ

ಪ್ರಣವಾನಂದ ಶ್ರೀಗಳ ಪಾದಯಾತ್ರೆ ಗಂಗಾವತಿಗೆ ಹದಿನಾರನೇ ದಿನಕ್ಕೆ ಪದಾರ್ಪಣೆ  ಸರ್ಕಾರದ ಜಾಣ ಮೌನಕ್ಕೆ ಹೆಚ್ಚಿದ ಈಡಿಗರ ಆಕ್ರೋಶ

ಪ್ರಣವಾನಂದ ಶ್ರೀಗಳ ಪಾದಯಾತ್ರೆ ಗಂಗಾವತಿಗೆ ಹದಿನಾರನೇ ದಿನಕ್ಕೆ ಪದಾರ್ಪಣೆ

ಸರ್ಕಾರದ ಜಾಣ ಮೌನಕ್ಕೆ ಹೆಚ್ಚಿದ ಈಡಿಗರ ಆಕ್ರೋಶ

ಗಂಗಾವತಿ : ಡಾ. ಪ್ರಣವಾನಂದ ಶ್ರೀಗಳು ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ನ್ಯಾಯಯುತ ಬೇಡಿಕೆಗಳಿಗಾಗಿ ನಡೆಸುತ್ತಿರುವ 700 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆ ರಾಜ್ಯದ ಹಿಂದುಳಿದ ಖಾತೆಯ ಸಚಿವ ಹಾಗೂ ಕೊಪ್ಪಳದ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿಯವರ ತವರು ಜಿಲ್ಲೆಗೆ ಆಗಮಿಸಿದರೂ ಸೌಜನ್ಯಕ್ಕಾದರೂ ಭೇಟಿಯನ್ನು ಮಾಡದಿರುವುದು ಸಮುದಾಯದ ಜನರನ್ನು ಕಡೆಗಣಿಸಿದ್ದಕ್ಕೆ ಸಾಕ್ಷಿಯಾಗಿದೆ ಇದಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ ಆರ್ ಶ್ರೀನಾಥ್ ಆಕ್ರೋಶ ವ್ಯಕ್ತಪಡಿಸಿ ತೀವ್ರ ವಾಗ್ದಾಳಿ ನಡೆಸಿದರು.

    ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜ.6ರಂದು ಆರಂಭಗೊಂಡ ಸ್ವಾಮೀಜಿಗಳ ಪಾದಯಾತ್ರೆ 16 ದಿನಗಳು ಕಳೆದು ಜ 21ರಂದು ಕಾರಟಗಿಯ ಮೂಲಕ ಗಂಗಾವತಿ ಪಟ್ಟಣಕ್ಕೆ ಆಗಮಿಸಿ ಶ್ರೀ ನೀಲಕಂಠೇಶ್ವರ ದೇವಸ್ಥಾನದ 108 ಕುಂಭೋದ್ಭವ ವೇದಿಕೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ ರಾಜ್ಯದ ಬಲು ದೊಡ್ಡ ಅತಿ ಹಿಂದುಳಿದ ಸಮುದಾಯವು ಹೋರಾಟವನ್ನು ಪ್ರಾರಂಭಿಸಿ, ಕೊಪ್ಪಳಕ್ಕೆ ಆಗಮಿಸುವಷ್ಟರಲ್ಲಿ ಸಚಿವ ತಂಗಡಗಿಯವರು ಮುಖ್ಯಮಂತ್ರಿಗಳ ಗಮನಸೆಳೆದು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆಯನ್ನು ಹುಸಿ ಮಾಡಿದ್ದಾರೆ. ಸ್ವಾಮೀಜಿಯವರು ಪೀಠಕ್ಕಾಗಿ ಅಥವಾ ಮಠಕ್ಕಾಗಿ ಹೋರಾಟವನ್ನು ಮಾಡದೆ ಅತಿ ಹಿಂದುಳಿದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯೋಚಿತ ಬೇಡಿಕೆ ನೀಡುವಂತೆ ಒತ್ತಾಯಿಸಿ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿಯವರಂತೆ ಈಡಿಗ ಸಮುದಾಯಕ್ಕಾಗಿ ಡಾ. ಪ್ರಣವಾನಂದ ಶ್ರೀಗಳು ಈ ಹೋರಾಟ ಮಾಡುತ್ತಿದ್ದು ಸರಕಾರದ ಈ ಗಾಢ ಮೌನ ಶೋಭೆ ತರುವುದಿಲ್ಲ. ಕೂಡಲೆ ಮಧ್ಯಸ್ಥಿಕೆ ವಹಿಸಿ ಪಾದಯಾತ್ರೆಯನ್ನು ನಿಲ್ಲಿಸಲು ಸರಕಾರ ಪ್ರಯತ್ನಿಸಬೇಕು. ಇಲ್ಲವಾದರೆ ಮುಂದಿನ ಚುನಾವಣೆಗಳಲ್ಲಿ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. 

  ಡಾ ಪ್ರಣವಾನಂದ ಶ್ರೀಗಳು ಮಾತನಾಡಿ ರಾಜ್ಯದ ಅತಿ ಹಿಂದುಳಿದ ಸಮುದಾಯದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸಿ ನ್ಯಾಯ ಕಲ್ಪಿಸಬೇಕು ಅಹಿಂದ ನಾಯಕನಾಗಿ ಮುಖ್ಯಮಂತ್ರಿಗಳು ಅತಿ ಹಿಂದುಳಿದ ಸಮುದಾಯಗಳ ಬೇಡಿಕೆಗಳನ್ನು ಕಡೆಗಣಿಸುವುದು ಅಕ್ಷಮ್ಯ ಅಪರಾಧ ವಾಗಿದೆ. ಈಡಿಗ ಏಸಮುದಾಯದ 18 ಬೇಡಿಕೆಗಳನ್ನು ಒತ್ತಾಯಿಸಿ ಪಾದಯಾತ್ರೆ ನಡೆಯುತ್ತಿದ್ದು ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ, ಸಮುದಾಯವನ್ನು ಪ್ರತಿನಿಧಿಸುವವರ ಕ್ಷೇತ್ರಗಳಲ್ಲಿ ಪಾದಯಾತ್ರೆ ಸೇರಿದಂತೆ ಸಮಾಜ ಜಾಗೃತಿಯ ಹೋರಾಟವನ್ನು ರೂಪಿಸಲಾಗುವುದು. ಫೆ.12ರಂದು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಜನರು ಪಾಲ್ಗೊಳ್ಳುವ ಬೃಹತ್ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದರು. ಚಿತ್ರದುರ್ಗ ಚಲವಾದಿ ಪೀಠದ ಶ್ರೀ ಬಸವನಾಗಿ ದೇವಶರಣರು ಮಾತನಾಡಿ ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆಗೆ ಅತಿ ಹಿಂದುಳಿದ ಸುಮಾರು 45ಕ್ಕೂ ಹೆಚ್ಚು ಸ್ವಾಮೀಜಿಗಳ ಬೆಂಬಲವಿದೆ. ಬೇಡಿಕೆ ಈಡೇರಿಸಲು ಡಾ ಪ್ರಣವಾನಂದ ಶ್ರೀಗಳ ಜೊತೆ ಕೈಜೋಡಿಸುವುದಾಗಿ ಭರವಸೆ ನೀಡಿದರು.

  ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಶಿವರಾಮೇಗೌಡ, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ರವೀಂದ್ರನಾಥ್, ಡಾ.ಸದಾನಂದ ಪೆರ್ಲ ಮತ್ತಿತರರು ಮಾತನಾಡಿದರು. 

ಈ ಸಂದರ್ಭದಲ್ಲಿ ಕುಂಬಾರ ಗುಂಡಯ್ಯ ಸ್ವಾಮೀಜಿ ಒಕ್ಕಲಿಗ ಮುದ್ದಣ ಸ್ವಾಮೀಜಿ, ಸತೀಶ್ ವಿ ಗುತ್ತೇದಾರ್ ಮಹಾದೇವ ಗುತ್ತೇದಾರ್ ನಾರಾಯಣ ಗುತ್ತೇದಾರ್ ಬೆಳಗಾವಿ, ಮೌನೇಶ ದಡೇಸುಗೂರು, ಹಿರೇಗೌಡರ್, ಕಾಶಿ ವಿಶ್ವನಾಥ, ಚಂದ್ರಣ್ಣ ಪಟ್ಟಣಶೆಟ್ಟಿ, ರಾಜಪ್ಪ ಈಳಿಗೆರ್ , ರಾಧಾ ಉಮೇಶ್, ವನಿತಾ, ಸರ್ವೇಶ್ ಎಚ್ ಆರ್,ತಿಮ್ಮಪ್ಪ ಗಂಗಾವತಿ,ವೆಂಕಟೇಶ್ ಕಡೇಚೂರ್,ಪ್ರವೀಣ್ ಜತ್ತನ್,ಸುರೇಶ್ ಮತ್ತೂರು ಅಂಬಯ್ಯ ಇಬ್ರಾಹಿಂಪುರ,ರಾಜೇಶ್ ದತ್ತು ಗುತ್ತೇದಾರ್,ಸಂತೋಷ್ ಚೌಧರಿ ಮತ್ತಿತರರು ಇದ್ದರು.