ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ಮಧ್ಯದಲ್ಲಿ ನಾವು ಮಾಡಿರುವ ಸಾಧನೆ ಮುಖ್ಯ : ಶರಣಪ್ಪ ತಳವಾರ್

ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ಮಧ್ಯದಲ್ಲಿ ನಾವು ಮಾಡಿರುವ ಸಾಧನೆ ಮುಖ್ಯ : ಶರಣಪ್ಪ ತಳವಾರ್

ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ಮಧ್ಯದಲ್ಲಿ ನಾವು ಮಾಡಿರುವ ಸಾಧನೆ ಮುಖ್ಯ : ಶರಣಪ್ಪ ತಳವಾರ್

ಕಲಬುರಗಿ : ಮನುಷ್ಯನ ಜೀವನದಲ್ಲಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ನಡುವೆ ನಮ್ಮ ಬದುಕು ಹೇಗೆ ನಡೆಸಿದ್ದೇವೆ ಎಂಬುದು ಅತ್ಯಂತ ಮಹತ್ವಪೂರ್ಣವಾದುದು ಎಂದು ಕಲ್ಬುರ್ಗಿಯ ಕೃಷ್ಣ ಕಾಡ ಮಾಜಿ ಅಧ್ಯಕ್ಷರಾದ ಶರಣಪ್ಪ ತಳವಾರ್ ಹೇಳಿದರು.                                        ಅವರು ಸೋಮವಾರ ಗಂಗಾನಗರದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ಹಮ್ಮಿಕೊಂಡ ಶ್ರಾವಣ ಮಾಸದಂಗವಾಗಿ ಜರುಗುತ್ತಿರುವ ಸೋಲಾಪುರ ಶಿವಯೋಗಿ ಸಿದ್ದರಾಮೇಶ್ವರ್ ಪುರಾಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ನಾವು ಧರ್ಮವಂತರಾಗಿ ಬಾಳಬೇಕು, ನಮ್ಮ ಸೇವೆ ನಿಷ್ಠಾವಂತದಿಂದ ಮಾಡಿದಾಗ ಮಾತ್ರ ನಮ್ಮ ಮನೆತನಕ್ಕೆ ಉತ್ತಮ ಹೆಸರು ಬರುತ್ತದೆ, ಮಾತಾ ಮಾಣಿಕೇಶ್ವರಿ ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಬಾಳಿದಾಗ ಸಮಾಜಕ್ಕೆ ಮಾದರಿಯಾಗುತ್ತೇವೆಮಾತಾ ಮಾಣಿಕೇಶ್ವರಿ ಅವರು ಸರ್ವ ಜನಾಂಗದ ಜನರನ್ನು ಸಮಾನತೆಯಿಂದ ಕಂಡರು ಸದಾ ಸರ್ವರ ಒಳ್ಳೆಯದನ್ನೇ ಬಯಸಿದವರು ಅವರು ಕೇವಲ ನಮ್ಮ ಸಮಾಜಕ್ಕೆ ಮಾತ್ರ ಅಲ್ಲದೆ ಬೇರೆ ಜನಾಂಗದವರ ಒಳಿತನ್ನು ಬಯಸಿದ್ದಾರೆ ಎಂದರು. ಎರಡು ಬಾರಿ ನಿಗಮ ಮಂಡಳಿಯ ಅಧ್ಯಕ್ಷನಾಗಿದ್ದೇನೆ ಅದಕ್ಕೆ ಅಮ್ಮನವರ ಆಶೀರ್ವಾದವೇ ಕಾರಣ ಎಂದು ಹೇಳಿದರು .  

ಕಾರ್ಯಕ್ರಮ ಉದ್ಘಾಟಿಸಿ ದ ಕೋಲಿ ಸಮಾಜದ ಯುವ ಮುಖಂಡರಾದ ಜೈಪ್ರಕಾಶ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ ಪುರಾಣ ಪ್ರವಚನ ಕೇಳುವದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದರು, ನಮ್ಮ ಕುಟುಂಬ ರಾಜಕೀಯ ದಲ್ಲಿ ಬೆಳೆಯಬೇಕಾದರೆ ಗಂಗಾನಗರದ ಆಶೀರ್ವಾದವೆ ಪ್ರಮುಖ ಕಾರಣ, ೨೫ವರ್ಷ ದಿಂದ ಮಹಾನಗರ ಪಾಲಿಕೆ ಸದಸ್ಯರಾಗಿ , ಉಪ ಮಹಾ ಪೌರರಾಗಿ, ವಿಧಾನ ಪರಿಷತ ಸದಸ್ಯ ರಾಗಿರುವದು ಗಂಗಾನಗರದ ಆಶೀರ್ವಾದ ನಮ್ಮ ಕುಂಟುಂಬದ ಮೇಲೆ ಇದೆ ಎಂದು ಹೇಳಿದರು. ಹಿರಿಯ ವಕೀಲರಾದ ಸಿದ್ದಣ್ಣ ಸಂಗಾಣಿ, ಶರಣಬಸಪ್ಪ ಮೊರಕಿಂಡಿ, ಮಲ್ಲಮ್ಮ, ಫಿರೋಜಾಬಾದ,ಸರುಬಾಯಿ, ಸೂರ್ಯವಂಸಿ. ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಲಕೂಡದ ಶ್ರೀ ವಿರೇಶ ಶಾಸ್ತ್ರಿಗಳು, ಪುರಾಣವನ್ನು ಕೇಳುಗರ ಮನ ಮುಟ್ಟುವ ಹಾಗೆ ಹೇಳಿದರು ಬಾಬುರಾವ್ ಕೋಬಾಳ್,ಸಂಗೀತ ಸೇವೆ ನೀಡಿದರೆ ಮಹಾಂತೇಶ್ ಹರವಾಳ ತಬಲಾ ಸಾತ್ ನೀಡಿದರು.ಕಾರ್ಯಕ್ರಮದಲ್ಲಿ ಕೋಲಿ ಸಮಾಜದ ಮುಖಂಡರಾದ ಅಮೃತ ಎಚ್. ಡಿಗ್ಗಿ, ವಿಜಯಕುಮಾರ್ ಹದಗಲ್, ಅಶೋಕ್ ಬಿದನೂರ್, ಶ್ರೀಕಾಂತ್ ಆಲೂರ್, ಶರಣು ಎಸ್, ಕೌಲಗಿ, ಮಲ್ಲಿಕಾರ್ಜುನ ಕೂಡಿ, ಜಗದೇವಪ್ಪ ಹಳ್ಳಿ, ಮುಂತಾದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕ ಮಂಜುನಾಥ ಜಮಾದಾರ್ ಅವರನ್ನು ಸತ್ಸಂಗ ಸೇವಾ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು, ನಂತರ ಅಚ್ಚುಕಟ್ಟಾಗಿ ಹುಗ್ಗಿ ಅನ್ನ ಸಾರು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.