22 ರಂದು ಶ್ರೀ ರಾಮತೀರ್ಥ ಮಂದಿರ ದೀಪೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
22 ರಂದು ಶ್ರೀ ರಾಮತೀರ್ಥ ಮಂದಿರ ದೀಪೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಕಲಬುರಗಿ:ದಿನಾಂಕ 22/01/2026 ರಂದು ಹಿಂದೂ ಜನ ಜಾಗೃತಿ ಸೇವಾ ದಳ ಸಮಿತಿ (ರಿ) ವತಿಯಿಂದ ರಾಮತೀರ್ಥ ಶ್ರೀ ರಾಮತೀರ್ಥ ಮಂದಿರದ ದೀಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ದಿನಾಂಕ 20/01/2026 ರಂದು ಬೆಳಿಗ್ಗೆ 10.00 ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ,
ಮಾಹಿತಿಯಂತೆ, ಜನವರಿ 22 ರಂದು ಬೆಳಿಗ್ಗೆ 6.00 ಗಂಟೆಗೆ ರಾಮತೀರ್ಥ ಮಂದಿರದಲ್ಲಿ ಶ್ರೀರಾಮನಿಗೆ ಅಭಿಷೇಕ ನೆರವೇರಿಸಲಾಗುವುದು. ಮಧ್ಯಾಹ್ನ 1.00 ಗಂಟೆಗೆ ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ. ಸಾಯಂಕಾಲ 5.30 ಗಂಟೆಗೆ ಬಾಜಾ ಬಜಂತ್ರಿ ಹಾಗೂ ಡೊಳ್ಳು ವಾದ್ಯ ಮೇಳದೊಂದಿಗೆ ಶ್ರೀಗಳ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ ಶ್ರೀ ರಾಮತೀರ್ಥ ಮಂದಿರಕ್ಕೆ ತಲುಪಲಿದೆ.
ನಂತರ ಪೂಜ್ಯ ಮಠಾಧೀಶರ ಶುಭಾಶಿರ್ವಚನ, ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸಭೆಯ ನಂತರ ಪೂಜ್ಯ ರಿಂದ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ. ಈ ದೀಪೋತ್ಸವ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಪರಮ ಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಮಹಾರಾಜರು, ಶ್ರೀನಿವಾಸರ ಸರಡಗಿ, ಶರಣಯ್ಯ ಸ್ವಾಮಿ, ಬಂಗಾರ ಜಡೆ ನೀಲಕಂಠೇಶ್ವರ ಹಿರೆಮಠ ನೀಲೂರ, ಸುಭಾಷ ಬಿರಾದಾರ, ದಯಾನಂದ ಪಾಟೀಲ್, ಶಶಿಕಾಂತ ಆರ್. ದೀಕ್ಷಿತ, ಸಂಜು ಪಾಟೀಲ್, ಬಿ.ಡಿ.ಎಸ್. ಪಾಟೀಲ್, ಶರಣು ಮಹಾಗಾಂವ, ಪ್ರಭಾಕರ ಕಲಶೆಟ್ಟಿ, ನಾಗಣ್ಣಾ ಕೋರಳ್ಳಿ, ಯಶ್ವಂತರಾವ ಪಾಟೀಲ್, ಸಿ.ಸಿ. ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು ಎಂದು ತಿಳಿಸಲಾಯಿತು.
