ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ನಗರದ ದೊಡ್ಡಪ್ಪ ಅಪ್ಪ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಚರಿಸಿದ ಶಿಕ್ಷಕರ ದಿನಾಚರಣೆಯಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶ್ರೀದೇವಿ ಕಲ್ಯಾಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಧಿಸುವ ಛಲಬೇಕು ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದರು . ತಂದೆ ತಾಯಿಗಳನ್ನು ಗುರುಹಿರಿಯರನ್ನು ಗೌರವಿಸಬೇಕು . ಕಾಯಕದಲ್ಲಿ ನಿಷ್ಠೆ ಶ್ರದ್ಧೆ ಇರಬೇಕು ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಮಕೃಷ್ಣ ರೆಡ್ಡಿ ಅವರು ಮಾತನಾಡಿ ತಂದೆ ತಾಯಿಗಳು ಮತ್ತು ಗುರುಗಳು ವಿದ್ಯಾರ್ಥಿಗಳಿಗೆ ಒಳ್ಳೆಯದನ್ನು ಬಯಸುತ್ತಾರೆ .ಅವರಲ್ಲಿ ವಿದ್ಯಾರ್ಥಿಗಳು ನಂಬಿಕೆ ಇಡಬೇಕು .ಎಂಥಹುದೇ ಮಗನಾಗಿರಲಿ ಎಂತವುದೇ ವಿದ್ಯಾರ್ಥಿಯಾಗಿರಲಿ ತಂದೆ ತಾಯಿ ಮತ್ತು ಗುರುಗಳು ಮಾತ್ರ ಅವರನ್ನು ಒಳ್ಳೆಯದನ್ನೇ ಬಯಸುತ್ತಾರೆ . ವಿದ್ಯಾರ್ಥಿಗಳು ನಾಡು-ನುಡಿ ನೆಲ ಜಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸತ್ಕಾರ್ಯಗಳನ್ನು ಮಾಡಬೇಕು ಎಂದು ಕರೆ ನೀಡಿದರು .
ಕುಮಾರಿ ಪೂರ್ವಿ ಸೃಜನ ಅವರ ಪ್ರಾರ್ಥನ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರಾಚಾರ್ಯರಾದ ವಿನೋದ್ ಕುಮಾರ್ ಎಲ್ ಪತಂಗೆ ಅವರು ಸ್ವಾಗತಿಸಿದರು .ಉಪನ್ಯಾಸಕರಾದ ಶಿವರಾಜ್ ದಂಡೂತಿಯವರು ಅತಿಥಿಗಳನ್ನು ಪರಿಚಯಿಸಿದರು.
ಕುಮಾರಿ ಅಮೂಲ್ಯ , ಹರೀಶ್ ಅವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು .ಕುಮಾರಿ ಸಿಂಚನ ವಂದನಾರ್ಪಣೆ ಮಾಡಿದರು