ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ: ನಾಗೇಶ್ ಗದ್ದಿಗಿ ಕರೆ

ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ: ನಾಗೇಶ್ ಗದ್ದಿಗಿ ಕರೆ
ಗುರುಮಠಕಲ್: 70 ನೇ ಕರ್ನಾಟಕ ರಾಜ್ಯೋತ್ಸವನ್ನು ಗುರುಮಠಕಲ್ ತಾಲೂಕು ಕೇಂದ್ರದಲ್ಲಿ ಅದ್ದೂರಿಯಾಗಿ ಆಚರಿಸಲೂ ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಜಯ ಕರ್ನಾಟಕ ಸಂಘಟನೆ ಗುರುಮಠಕಲ್ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ತಿಳಿಸಿದ್ದಾರೆ.
ಮಂಗಳವಾರ ತಾಲ್ಲೂಕು ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದ ಎಲ್ಲಾ ಬಾಂಧವರಿಗೆ ಇದು ಸಡಗರ ಸಂಭ್ರಮದಿಂದ ಆಚರಿಸುವ ತಾಯಿನಾಡು ಹಬ್ಬ ಈ ಹಬ್ಬವನ್ನು ತಾವುಗಳು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿ ಎಂದು ಹೇಳಿದರು, ನಮ್ಮ ಗಡಿಭಾಗದಲ್ಲಿ ತೆಲುಗು,ಮರಾಠಿ, ತಮಿಳು ಸೇರಿದಂತೆ ಇನ್ನಿತರ ಭಾಷೆಗಳ ಪ್ರಭಾವ ಹೆಚ್ಚಾಗುತ್ತಿದೆ ಇದನ್ನು ಹೋಗಲಾಡಿಸಲು ನಮ್ಮ ಹೆಮ್ಮೆಯ ಕನ್ನಡ ಭಾಷೆಯ ಪದಬಳಕೆಯನ್ನೇ ಮಾಡಿ ಎಲ್ಲಾ ಭಾಷೆಗಳನ್ನು ಗೌರವಿಸಿ ಆದರೆ ಕನ್ನಡನ್ನು ಪ್ರೀತಿಸಿ, ಕನ್ನಡ ನಾಡು-ನುಡಿ, ನೆಲ-ಜಲ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ನಾವೆಲ್ಲರೂ ಮಾಡಬೇಕು ‘ನ. 1ರಂದು ಪಟ್ಟಣದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ವಿವಿಧ ಕಲಾ ತಂಡಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದಲ್ಲಿ ಭವ್ಯವಾದ ಮೆರವಣಿಗೆಯನ್ನು ನಡೆಸಲಾಗುವುದು. ಇನ್ನುಳಿದ ಕಾರ್ಯಗಳ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡು ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ತಾಲೂಕು ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಕಾಲವರ, ಹಿರಿಯ ಗೌರವ ಸಲಹೆಗಾರರಾದ ನವಾಜರೆಡ್ಡಿ ಪೊಲೀಸ್ ಪಾಟೀಲ್, ತಾ, ಪ್ರ, ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ತಾ, ಕಾರ್ಯದರ್ಶಿ ನರಸಿಂಹಲು ಗಂಗನೋಳ, ಉಪಾಧ್ಯಕ್ಷರಾದ ಕಾಶಪ್ಪ ದೊರೆ,ಎಸ್, ಪಿ ಮಹೇಶ್ ಗೌಡ,ಅವಿನಾಶ ಗೌಡ, ಸುರೇಶ್ ಚಿನ್ನರಾಥೋಡ್, ಭೀಮಶಪ್ಪತಲಾರಿ, ವೆಂಕಟೇಶ್,ಉದಯಕುಮಾರ ಕೊಂಕಲ, ರಾಮುಲು ಕೊಡುಗಂಟಿ, ಅಯಾಝ್ ಅಲಿ, ವಿಜಯ್, ಜಗದೀಶ್, ಆನಂದ್,ಮಲ್ಲಿಕಾರ್ಜುನ ಚೆಪೆಟ್ಲಾ,ಶರಣು, ಅಂಜಿ, ರವಿ ವಾರದ, ರವಿಶಂಕರ್ ಅಡಕೆ,ಅಂಜಪ್ಪ ಕಾಳೆಬೆಳಗುಂದಿ,ಶರಣಪ್ಪ ಹೊರಪೇಟೆ, ಜಗಪ್ಪ ನಕ್ಕ, ಬನ್ನು ಮಡುಗು, ಹನುಮೇಶ ಬೋಯಿನ್ ,ವೀರೇಶ್, ದೇವರಾಜ,ವೆಂಕಟಪ್ಪ, ಎಸ್,ರೆಡ್ಡಿ, ಗೌರೀಶ್,ಯಲ್ಲೂ ಪೂಜಾರಿ, ಸಿದ್ದಪ್ಪ ಮದ್ದೂರು, ಅನಿಲ್ ಮಡಿವಾಳ,ನಾಗೇಶ್ ಯಾದವ್,ಕೇಶವ್,ಸಿದ್ದಪ್ಪ, ಯಲ್ಲಪ್ಪ, ಬಗ್ಗಪ್ಪ, ಮಹೇಶ, ನವೀನ, ಅಯ್ಯಪ್ಪ, ಸಾಬಪ್ಪ, ಚಿಂಟು, ತಿಮ್ಮಪ್ಪ, ಚಾಂದ್ ಕಾಕಾಲವರ,ರಾಜಕುಮಾರ, ನರಸಪ್ಪ ಸೇರಿದಂತೆ ಇನ್ನೂ ಹಲವಾರು ಮುಖಂಡರು ಸಂಘಟನೆಯ ಪದಾಧಿಕಾರಿಗಳು ಮತ್ತು ಅಪಾರ ಪ್ರಮಾಣ ಕಾರ್ಯಕರ್ತರು ಭಾಗವಹಿಸಿದ್ದರು.