ಕ್ರೀಡೆಯಲ್ಲಿ ಗ್ರಾಮೀಣ ಪ್ರತಿಭೆ ಗುರುತಿಸಲು ಇಂತಹ ಕಾರ್ಯಕ್ರಮ ಅವಶ್ಯ-ಶ್ರೀಮತಿ ವಿಜಯಲಕ್ಷ್ಮಿ ಶಾಬಾದ್
ಕ್ರೀಡೆಯಲ್ಲಿ ಗ್ರಾಮೀಣ ಪ್ರತಿಭೆ ಗುರುತಿಸಲು ಇಂತಹ ಕಾರ್ಯಕ್ರಮ ಅವಶ್ಯ-ಶ್ರೀಮತಿ ವಿಜಯಲಕ್ಷ್ಮಿ ಶಾಬಾದ್
ಯಾದಗಿರಿ: ಜ 18 ಯುವಜನ ಕ್ರೀಡಾ ಇಲಾಖೆ ಭಾರತ ಸರ್ಕಾರ ಮೇರಾ ಯುವ ಭಾರತ್ ಕಲಬುರ್ಗಿ/ ಯಾದಗಿರಿ. ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಲ್ಬುರ್ಗಿ ಭೀಮಜ್ಯೋತಿ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಯಾದಗಿರಿ ಅಮರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ತಾಲೂಕ ಮಟ್ಟದ ಕ್ರೀಡಾಕೂಟವನ್ನು ಜನೇವರಿ 17 ಹಾಗೂ 18ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದ ಶ್ರೀಮತಿ ವಿಜಯಲಕ್ಷ್ಮಿ ಶಾಬಾದ್ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಯರಗೋಳ ಇವರು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಇಂತಹ ಸಂಘ ಸಂಸ್ಥೆಗಳ ಮುಖಾಂತರ ಕಾರ್ಯಕ್ರಮಗಳನ್ನು ಮಾಡುವದರಿಂದ ಗ್ರಾಮೀಣಮಟ್ಟದ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಲಿಂಗಪ್ಪ ಅಲಿಪುರ ಇವರು ಮಾತನಾಡಿ ನಮ್ಮ ಗ್ರಾಮದಲ್ಲಿ ಯುವಕ/ತಿಯರಿಗೆ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಸಂಘ ಸಂಸ್ಥೆಯವರು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ನ್ಯಾಯವಾದಿ ಧೂಳಪ್ಪ ದ್ಯಾಮನಕರ್ ರವರು ಮಾತನಾಡಿ ಸಂಸ್ಥೆಯು ವಿವಿಧ ಇಲಾಖೆಗಳ ಸಹಕಾರದಿಂದ ಗ್ರಾಮೀಣ ಯುವಜನರಿಗೆ ಕ್ರೀಡೆ, ಕಲೆ, ಸಾಂಸ್ಕೃತಿ, ಶಿಕ್ಷಣ, ಪರಿಸರ, ಯುವ ಮುಂದಾಳತ್ವ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಯಶ್ರೀ ದೇವಣ್ಣ ಎಸ್.ಡಿ.ಎಮ್.ಸಿ ಅಧ್ಯಕ್ಷರು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯರಗೋಳ ಶ್ರೀಮತಿ ಕಲ್ಪನಾ ಮುಖ್ಯಗುರುಗಳು. ಚನ್ನಬಸಪ್ಪ ಜೋಗಿ ಅಧ್ಯಕ್ಷರು ಎಸ್.ಡಿ.ಎಂ.ಸಿ ಸರ್ಕಾರಿ ಪ್ರೌಢಶಾಲೆ ಯರಗೋಳ ಶ್ರೀಮತಿ ಕವಿತಾ ಮುಖ್ಯ ಗುರುಗಳ ಪ್ರಿಯಾಂಕ ಪ್ರೌಢಶಾಲೆ ರಾಮಲಿಂಗಪ್ಪ ಇದ್ಲಿ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು, ನಾಗರೆಡ್ಡಿ ಬಾನರ್ ದೈಹಿಕ ಶಿಕ್ಷಕರು ಯರಗೋಳ ಶಿವಬಸಪ್ಪ ಸರ್ ದೈಹಿಕ ಶಿಕ್ಷಕರು, ವಾಲಿಬಾಲ್, ಕಬ್ಬಡ್ಡಿ, ಓಟದ ಸ್ಪರ್ದೆ, ಸೈಕ್ಲಿಂಗ್, ಹಗ್ಗದ ಆಟ, ಗುಂಪು ಆಟ, ಖುರ್ಚಿ ಆಟ, ವಿವಿಧ ಗ್ರಾಮೀಣ ಕ್ರೀಡೆಗಳನ್ನು ನಡೆಸಲಾಯಿತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಟ್ರೋಫಿ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು ಶ್ರೀಮತಿ ಮಾಲಾಶ್ರೀ ಬಿ. ಯರಗೋಳ ಪ್ರಾರ್ಥನೆ ಗೀತೆ ಹಾಡಿದರು ಶ್ರೀ ಭೀಮಾಶಂಕರ ಎಂ ಯರಗೋಳ ಕಾರ್ಯಕ್ರಮವನ್ನು ನಿರೂಪಿಸಿದರು. ಸೇವಾದಳದ ಶಿಕ್ಷಕರಾದ ಸೈಯದ್ ಖಮರುದ್ದೀನ್ ಕಾರ್ಯಕ್ರಮವನ್ನು ವಂದನಾರ್ಪಣೆ ಮಾಡುವ ಮುಖಾಂತರ ಮುಕ್ತಾಯಗೊಳಿಸಲಾಯಿತು. ಗ್ರಾಮದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದು ನಿಸರ್ಗ ಸಂಸ್ಥೆಯ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
