ವಚನ ದರ್ಶನ ಕೃತಿ ಲೋಕಾರ್ಪಣೆಗೆ ವಿರೋಧ: ರವಿಂದ್ರ ಶಾಬಾದಿ, ಆರ್ ಜಿ ಶೆಟಗಾರ, ಆರ್ ಕೆ ಹುಡುಗಿ, ಸುನಿಲ್ ಮಾನ್ಪಡೆ ಸೇರಿ ಹಲವರ ಬಂಧನ

ವಚನ ದರ್ಶನ ಕೃತಿ ಲೋಕಾರ್ಪಣೆಗೆ ವಿರೋಧ: ರವಿಂದ್ರ ಶಾಬಾದಿ, ಆರ್ ಜಿ ಶೆಟಗಾರ, ಆರ್ ಕೆ ಹುಡುಗಿ, ಸುನಿಲ್ ಮಾನ್ಪಡೆ ಸೇರಿ ಹಲವರ ಬಂಧನ

ಕಲಬುರಗಿ: 03 ನೇ ಆಗಸ್ಟ್,  

ಪ್ರಜ್ಞಾ ಪ್ರವಾಹ, ಶರಣಬಸವ ವಿಶ್ವದ್ಯಾಲಯ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ  

ಲಿಂ. ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ವಚನ ದರ್ಶನ ಕೃತಿ ಲೋಕಾರ್ಪಣೆ ಸಮಾರಂಭ ಪ್ರಾರಂಭವಾಗುವ ಮುನ್ನ ಸಭಾ ಭವನದೊಳಗೆ ನುಗ್ಗಲು ಪ್ರಯತ್ನಿಸಿದ ಲಿಂಗಾಯತ ಮಹಾಸಭಾದ ರಾಜ್ಯ ಸಂಚಾಲಕರಾದ ರವೀಂದ್ರ ಶಾಬಾದಿ, ಆರ್.ಜಿ. ಶೆಟಕಾರ, ಪ್ರಭುಲಿಂಗ ಮಹಾಗಾಂವಕರ, ಆರ್ ಕೆ ಹುಡುಗಿ, ಸುನಿಲ್ ಮಾನ್ಪಡೆ ಸೇರಿದಂತೆ ಹಲವರನ್ನು ತಡೆದು ಬಂಧಿಸಿದ್ದಾರೆ. 

ಇಂದು ಕಲಬುರಗಿ ನಗರದಲ್ಲಿ ಸಂಘ ಪರಿವಾರ ಪ್ರೇರಿತ ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಾಗೂ ಶರಣ ಚಳುವಳಿಯ ನೈಜತೆಯನ್ನು ತಿರುಚಿ ಅವರ ತತ್ವಾದರ್ಶ ಮತ್ತು ಚಳುವಳಿಯನ್ನು ಅಯೋಧ್ಯೆ ಪ್ರಕಾಶಿತ ಆರ್ ಎಸ್ ಎಸ್ ಪ್ರಕಟಿತ “ವಚನ ದರ್ಶನ,” ಕೃತಿ ವಿರೋಧಿಸಿ ಕಪ್ಪು ಬಟ್ಟೆಯನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು..

ಬಸವಣ್ಣನವರ ಭಾವಚಿತ್ರವನ್ನು ಋಷಿ - ಮುನಿಗಳಂತೆ ಚಿತ್ರಿಸಿದ್ದು , ಕೊರಳಲ್ಲಿ ತುಳಸಿ ಮಾಲೆ ಹಾಕಿರುವುದು, ಬಿಲ್ಲು- ಬಾಣಗಳನ್ನು ತೋರಿಸಿರುವುದು ಬಸವಣ್ಣನವರಿಗೆ ಹಾಗೂ ಅವರ ಬಸವ ತತ್ವ ಸಿದ್ಧಾಂತಕ್ಕೆ ಮಾಡಿದ ಅಪಚಾರ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ರವಿಂದ್ರ ಶಾಬಾದಿ, ಆರ್ ಜಿ ಶೆಟಗಾರ ಆರ್ ಕೆ ಹುಡುಗಿ, ಶಾಂತಪ್ಪ ಪಾಟೀಲ, ಪ್ರಭು ಖಾನಾಪುರೆ, ಮೀನಾಕ್ಷಿ ಬಾಳಿ, ಸುನೀಲ ಮಾನಪಡೆ, ಶರಣಗೌಡ ಪಾಟೀಲ, ಮಹಾಂತೇಶ್ ಕಲಬುರಗಿ, ಪ್ರಭುಲಿಂಗ ಮಾಹಗಾಂವಕರ್, ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬ್ರಹ್ಮಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.