ಬಸನಗೌಡ ಪಾಟೀಲ್ ಕಂಚಲಕವಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ
ಬಸನಗೌಡ ಪಾಟೀಲ್ ಕಂಚಲಕವಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ
ಶಹಪುರ : ತಾಲೂಕಿನ ಕಂಚಲಕವಿ ಗ್ರಾಮದ ಬಸನಗೌಡ ಪಾಟೀಲ್ ಅವರಿಗೆ ರಾಯಚೂರಿನ ಕಲಾಸಂಕುಲ ಸಂಸ್ಥೆ ವತಿಯಿಂದ ಕೊಡ ಮಾಡುವ 2026 ನೇ ಸಾಲಿನ "ಸಮಾಜ ಸೇವಾ ರತ್ನ" ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಮಾರುತಿ ಬಡಿಗೇರ ಪ್ರಕಟಣೆಗೆ ತಿಳಿಸಿದ್ದಾರೆ.
ರಾಯಚೂರಿನ ಪಂಡಿತ್ ಜಂಬಲ್ ದಿನ್ನಿ ರಂಗ ಮಂದಿರದಲ್ಲಿ ಇದೇ ಜನವರಿ 18 ರಂದು ಜರಗುವ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಜರುಗುವುದು.
ಬಸವನಗೌಡ ಪಾಟೀಲ್ ಕಂಚಲಕವಿಯವರ ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು.ಆಯ್ಕೆ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರೇಖಾ ಬಡಿಗೇರ್ ತಿಳಿಸಿದ್ದಾರೆ.
