ಕೊಲ್ಲೂರು ಶ್ರೀ ಸದ್ಗುರು ರಾಮಲಿಂಗೇಶ್ವರ 8ನೇ ಜಾತ್ರಾ ಮಹೋತ್ಸವ

ಕೊಲ್ಲೂರು ಶ್ರೀ ಸದ್ಗುರು ರಾಮಲಿಂಗೇಶ್ವರ 8ನೇ ಜಾತ್ರಾ ಮಹೋತ್ಸವ

ಕೊಲ್ಲೂರು ಶ್ರೀ ಸದ್ಗುರು ರಾಮಲಿಂಗೇಶ್ವರ 8ನೇ ಜಾತ್ರಾ ಮಹೋತ್ಸವ

ಕಲಬುರಗಿ : ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಕೊಲ್ಲೂರು ಗ್ರಾಮದ ಆರಾಧ್ಯ ದೈವ ದ್ವಾದಶ ಜ್ಯೋತಿರ್ಲಿಂಗ ಹಾಗೂ ಶ್ರೀರಾಮಚಂದ್ರನಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಸದ್ಗುರು ರಾಮಲಿಂಗೇಶ್ವರ 8ನೇ ಜಾತ್ರಾ ಮಹೋತ್ಸವ ಹಾಗೂ ಭವ್ಯ ರಥೋತ್ಸವ ಅಂಗವಾಗಿ "ಸೊಲ್ಲಾಪುರ ಶ್ರೀ ಸಿದ್ದರಾಮೇಶ್ವರ" ಪುರಾಣ ಪ್ರವಚನ ಕಾರ್ಯಕ್ರಮ ಪರಮಪೂಜ್ಯ ನಾಲವಾರದ ಶ್ರೀ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಷ. ಬ್ರ. ಡಾ. ಸಿದ್ಧ ತೋಟೇoದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶಾಖಾಪುರ ಶ್ರೀ ವಿಶ್ವರಾಧ್ಯ ತಪೋವನ ಮಠದ ಪರಮ ಪೂಜ್ಯ ಶ್ರೀ ಷ. ಬ್ರ. ಡಾ. ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಜರುಗಲಿದೆ 

    ಪ್ರವಚನಕಾರರಾದ ಶ್ರೀ ತೋಟಯ್ಯ ಶಾಸ್ತ್ರೀಗಳು ಕೊಲ್ಲೂರು ಅಬ್ಬೆತುಮಕೂರು ಇವರಿಂದ ಪ್ರತಿನಿತ್ಯ ರಾತ್ರಿ 8:00 ಗಂಟೆಯಿಂದ 10 ಗಂಟೆಯವರೆಗೆ ಪುರಾಣ ಪ್ರವಚನ ನಡೆಯುವುದು. ಸುಮಾರು 12/13 ದಿನಗಳ ಪರಿಯಂತರ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಶ್ರೀ ಸ್ವಾಮಿಯ ಉಚಾಯಿ ಉತ್ಸವ ಭವ್ಯ ರಥೋತ್ಸವ ಶ್ರೀರಾಮಲಿಂಗೇಶ್ವರ ಉದ್ಭವ ಲಿಂಗಕ್ಕೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಮಂಗಳಾರತಿ ಧರ್ಮ ಸಭೆ ಪುರಾಣಮಂಗಲ ದಾನಿಗಳಿಗೆ ಸನ್ಮಾನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಗಾಯಕರಾದ ಶ್ರೀ ಶಿವಾನಂದ ಗವಾಯಿಗಳು ಮಂದೇವಾಲ ತಬಲವಾದಕರು ಶ್ರೀ ರಮೇಶ ಕಟ್ಟಿಸಂಗಾವಿ ಸಂಗೀತ ಕಾರ್ಯಕ್ರಮ ನೀಡುವರು 

ಜೊತೆಗೆ ಮನರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ "ನಗೆ ಹಬ್ಬ ಜಾನಪದ ಝೆoಕಾರ" ಕಲಾವಿದರಾದ ಜ್ಯೂ. ವಿಷ್ಣುವರ್ಧನ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಮಂಗಳೂರು ಅವರ ತಂಡದಿಂದ ಶ್ರೀ ಗುಂಡಣ್ಣ ಡಿಗ್ಗಿ ಹರಸೂರ ಶ್ರೀ ರಾಜು ಹೆಬ್ಬಾಳ ಅವರಿಂದ ಜಾನಪದ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯುವುದು

 ರಥೋತ್ಸವ ನಂತರ "ದನಗಳ ಜಾತ್ರೆ" ಕೈಕುಸ್ತಿಗಳು ಮತ್ತು "ಡೋಣ ಕುಸ್ತಿಗಳು" ನಡೆಯುವವು ಎಂದು ಕೊಲ್ಲುರಿನ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಸಮಸ್ತ ಸದ್ಭಕ್ತ ಮಂಡಳಿ ತಿಳಿಸಿದೆ