26 ರಂದು ಎನ್‌ಪಿಎಸ್ ರದ್ದು ಪಡಿಸಲು ಧರ್ಮರಾಜ ಜವಳಿ, ನವನಾಥ ಶಿಂದೆ ಮನವಿ

26 ರಂದು ಎನ್‌ಪಿಎಸ್ ರದ್ದು ಪಡಿಸಲು ಧರ್ಮರಾಜ ಜವಳಿ,   ನವನಾಥ ಶಿಂದೆ ಮನವಿ

26 ರಂದು ಎನ್‌ಪಿಎಸ್ ರದ್ದು ಪಡಿಸಲು ಧರ್ಮರಾಜ ಜವಳಿ, ನವನಾಥ ಶಿಂದೆ ಮನವಿ

ಕಲಬುರಗಿ: ಎನ್‌ಪಿಎಸ್ ರದ್ದು ಪಡಿಸಿ ಒಪಿಎಸ್ ಜಾರಿಗೆ ತರುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ಎನ್ ಪಿ ಎಸ್ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಧರ್ಮರಾಜ ಜವಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವನಾಥ ಶಿಂದೆ ತಿಳಿಸಿದ್ದಾರೆ.

1-4-2006 ರ ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ನಿವೃತ್ತಿ ನಂತರ ಪಿಂಚಣ ಇರುವುದಿಲ್ಲ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಎನ್ ಪಿ ಎಸ್ ಮತ್ತು ಇತ್ತಿಚೆಗೆ ಯುಪಿಎಸ್ ಏಕೀಕೃತ ಪಿಂಚಣ ಯೋಜನೆ ರದ್ದು ಪಡಿಸಿ ಹಳೆಯ ಪಿಂಚಣ ಯೋಜನೆ ಒಪಿಎಸ್ ಜಾರಿಗೆ ತರುವಂತೆ ಇಡೀ ರಾಷ್ಟ್ರಾದ್ಯಂತ ತಾಲೂಕು ಹಂತದ ತಹಸಿಲ್ದಾರರಿಗೆ ಮತ್ತು ಜಿಲ್ಲಾ ಹಂತದಲ್ಲಿ ಜಿಲ್ಲಾ ಅಧಿಕಾರಿಗೆ ಸೇ. 26 ರಂದು ಮಧ್ಯಾಹ್ನ 1.30 ನಿಮಿಷಕ್ಕೆ

ಮನವಿಯನ್ನು ಸಲ್ಲಿಸಲಾಗುವುದು.ಎನ್ ಪಿ ಎಸ್ ನೌಕರರ ಮತ್ತು ಒಪಿಎಸ್ ನೌಕರರು ಹಾಗೂ ಇತರರ ನೌಕರ ಪದಾಧಿಕಾರಿಗಳು ಹಾಗೂ ನೌಕರರ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.