ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಸುತ್ತೋಲೆ ವಾಪಸ್ ಶಿಕ್ಷಣ ಸಚಿವರಿಗೆ ಅಭಿನಂದನೆ ವಿಧಾನ ಪರಿಷತ್ ಸದಸ್ಯ ಶ್ರೀ ಶಶೀಲ್ ಜಿ ನಮೋಶಿ
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಸುತ್ತೋಲೆ ವಾಪಸ್ ಶಿಕ್ಷಣ ಸಚಿವರಿಗೆ ಅಭಿನಂದನೆ* ವಿಧಾನ ಪರಿಷತ್ ಸದಸ್ಯ ಶ್ರೀ ಶಶೀಲ್ ಜಿ ನಮೋಶಿ
2025 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಯಾದೃಚ್ಛಿಕರಿಸುವ( Randamise) ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ದಿನಾಂಕ 01-10-2024 ಮತ್ತು 05-10-2024 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಗೆ ನಾನು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೆ ನಂತರ ತಕ್ಷಣ ದಿನಾಂಕ 02-10-2024 ರಂದೆ ಮಾನ್ಯ ಶಿಕ್ಷಣ ಸಚಿವರಿಗೆ ಪತ್ರ ಬರೆದು ಈ ಸುತ್ತೋಲೆಗಳೆನ್ನು ಹಿಂಪಡೆಯಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದೆ. ನಂತರ 08-10-2024 ಮಂಗಳವಾರ ಬೆಂಗಳೂರಿನಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ರವರನ್ನು ಖುದ್ದಾಗಿ ಭೇಟಿ ಮಾಡಿ ಈ ರೀತಿ ಸುತ್ತೋಲೆ ಹೋರಡಿಸಿದರೆ ವಿಧ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕಾಲೇಜುಗಳಿಗೆ ಆಗುವ ತೊಂದರೆಯನ್ನು ವಿವರಿಸಿ ಇದನ್ನು ತಕ್ಷಣ ವಾಪಸ್ ಪಡೆಯುವಂತೆ ಆಗ್ರಹಿಸಿದ್ದೆ. ಅಂದು ನನ್ನ ವಿವರಣೆಯನ್ನು ಸಮಾಧಾನದಿಂದ ಆಲಿಸಿದ ಶಿಕ್ಷಣ ಸಚಿವರು ಸುತ್ತೋಲೆ ಯಿಂದ ಆಗುವ ಸಮಸ್ಯೆಯನ್ನು ಅರಿತು ಈಗ ಆ ಸುತ್ತೋಲೆ ಹಿಂಪಡೆಯಲು ಮಂಡಳಿಗೆ ಆದೇಶಿಸಿದ್ದಾರೆ. ಅದರಂತೆ ಮಂಡಳಿ ಆದೇಶಿಸಿ ಈ ಹಿಂದೆ ನಡೆಯುವಂತೆ ಪ್ರಾಯೋಗಿಕ ಪರೀಕ್ಷೆಗೆ ನಡೆಯಲು ಕಾರಣಿ ಭೂತವಾಗಿರುವ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ನವರಿಗೆ ಅಭಿನಂದನೆಗಳು.