ಪಪಾಯ ಎಲೆ ಮುಟುರು ರೋಗ ಹತೋಟಿಗೆ ಸಲಹೆ

ಪಪಾಯ ಎಲೆ ಮುಟುರು ರೋಗ ಹತೋಟಿಗೆ ಸಲಹೆ

ಪಪಾಯ ಎಲೆ ಮುಟುರು ರೋಗ ಹತೋಟಿಗೆ ಸಲಹೆ 

ಪಪಾಯ ಹಣ್ಣು ದೇಹದ ಪೋಷಣೆಗೆ ವಿಟಮಿನ್ ಎ ಮತ್ತು ಸಿ ಜೀವಸತ್ವ ವುಳ್ಳ ಹಣ್ಣು. ಉತ್ತರ ಭಾರತದಲ್ಲಿ ಚಳಿಗಾಲ ದಲ್ಲಿ ಬಹು ಬೇಡಿಕೆ. ಸದ್ಯ ಧಾರಣೆಯು ಉತ್ತಮವಾಗಿದೆ. ಕಲ್ಬುರ್ಗಿ ಯಲ್ಲಿ ಬೆಳೆದ ಪಪಾಯ ಇಂದೂರ್, ಗೋವಾ, ದೆಹಲಿ, ಮುಂಬೈ, ಹೈದೆರಾಬಾದ್ ಭಾಗಕ್ಕೆ ರೈತರ ಹೊಲದಿಂದ ಟ್ರಕ್ ಮೂಲಕ ಮಾರುಕಟ್ಟೆ ಸೌಲಭ್ಯ ಲಭಿಸುತ್ತಿದೆ. ರೈತರಿಗೆ ಆದಾಯ ತರಬಲ್ಲ ಹಣ್ಣಿನ ಬೆಳೆ ಇದಾಗಿದ್ದು ಪ್ರಸ್ತುತ ದಿನವಿಡೀ ಒಣ ಹವೆ, ಕಡಿಮೆ ಅದ್ರತೆ ವಾತಾವರಣ ಪಪಾಯ ಹೂ ಉದುರಿವಿಕೆ, ವೈರಸ್ ನಂಜು ಎಲೆ ಮುದುಡಿ ರೋಗ ಹಾಗೂ ಬಿಳಿ ನೊಣ, ತ್ರಿಪ್ಸ್ ಹುಳ ಬಾದೆ ಹೆಚ್ಚು ಕಂಡು ಬರುತ್ತಿದೆ. ಈ ವರ್ಷ ಕಲಬುರ್ಗಿ ಜೆಲ್ಲೆಯಲ್ಲಿ ಮುಂಗಾರು ಉತ್ತಮ ಮಳೆ ಆಗಿದ್ದು ಸದ್ಯ ತೋಟಗಾರಿಕೆ ಬೆಳೆ ಪಪಾಯ ಬಹು ಭಾಗದಲ್ಲಿ ಕಟಾವು ಹಂತ ತಲುಪಿದೆ. ಎಲೆ ಮುದುಡಿ ರೋಗ ಪೀಡಿತ ಗಿಡ ಎಲೆ ಒರಟಾಗಿ, ಎಲೆ ದೇಟು ಡೊಂಕಾಗಿ ಬಾಗುತ್ತವೆ. ಕಾಯಿ ಗಾತ್ರ ಚಿಕ್ಕದಾಗಿ ಕಾಣುತ್ತವೆ. ಗಿಡಕ್ಕೆ 60 ಕಾಯಿ ಬರುವಲ್ಲಿ ಕೇವಲ 20 ರಿಂದ 35 ಅಂಕು ಡೊಂಕು ಕಾಯಿ ವೃದ್ಫಿಯಾಗಿ ರೈತರಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ರೈತರು ಕೃಷಿ ವಿಜ್ಜಾನ ಕೇಂದ್ರ ತಜ್ಜರ ಸಲಹೆ ಪಡೆದು ಸೂಕ್ತ ಸಿಂಪಡನ ವಿಧಾನ ಕೈಗೊಳ್ಳಬೇಕು ಎಂದು ಡೀನ್, ಕೃಷಿ ಕಾಲೇಜ್ ಹಾಗೂ ಕ್ಯಾಂಪಸ್ ಆವರಣ ಮುಖ್ಯಸ್ಥರದ ಡಾ. ಜಯಲಕ್ಷ್ಮಿ ಎಸ್. ಕೆ ತಿಳಿಸಿದ್ದಾರೆ. ವೈರಸ್ ರೋಗ ನಿಯಂತಣ್ಣಕ್ಕೆ ಬೇವಿನ ಎಣ್ಣೆ 3 ಮೀ ಲಿ ಅಥವಾ ಶೇಂಗಾ ಎಣ್ಣೆ 5 ಮೀ ಲಿ ಅಥವಾ ತಿಯೋಮಿತೋಕ್ಸಿಮ್ ಅರ್ಧ ಗ್ರಾಂ ಅಥವಾ ಆಸಿಫಟ್ ಒಂದು ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೂದಿ ರೋಗ ನಿರ್ವಹಣೆಗೆ ನೀರಿನಲ್ಲಿ ಕರಗುವ ಗಂದಕ ಮೂರು ಗ್ರಾಂ ಅಥವಾ ಕಾರ್ಬೇಡಜಿಮ್ 1 ಗ್ರಾo ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಸ್ಯ ರೋಗ ವಿಜ್ಜಾನಿ ಡಾ. ಜಹೀರ್ ಅಹಮದ್ ತಿಳಿಸಿದ್ದಾರೆ. ಪಪಾಯ ಉತ್ತಮ ಕಾಯಿ ರಚನೆ ಬೆಳವಣಿಗೆಗೆ ಬೋರನ್, ಮಗ್ನೆಸಿಯಂ ಜೊತೆಗೆ ಸಮಗ್ರ ಪೋಷಕ ಅಗತ್ಯ ನೀಡಬೇಕು ಎಂದು ತೋಟಗಾರಿಕೆ ವಿಜ್ಜಾನಿ ಡಾ. ಸನ್ಮತಿ ನಾಯಕ್ ಎ ಟಿ ಎಸ್ ತಿಳಿಸಿದರು. ಅರ್ಕ ಸೂರ್ಯ,ಟೈವನ ರೆಡ್ ಹಾಗೂ ಕೆ 15 ಪಪಾಯ ಬೇಡಿಕೆ ಹೆಚ್ಚು, ಹಸಿ ಪಪಾಯ ಸಿಪ್ಪೆಯ ಹಾಲು ಔಷದಿ ಗುಣ ಹೊಂದಿದು ಹಣ್ಣು ಸಂಸ್ಕಾರಣ ಕೇಂದ್ರ ಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಕಲ್ಬುರ್ಗಿ ಕೃಷಿ ವಿಜ್ಜಾನ ಕೇಂದ್ರ ಹಿರಿಯ ವಿಜ್ಜಾನಿ ಡಾ. ರಾಜು ತೆಗ್ಗಲ್ಲಿ ಹಾಗೂ ರದ್ದೇವಾಡಿ ಕೆ ವಿ ಕೆ ಮುಖ್ಯಸ್ಥರಾದ ಡಾ. ವಾಸುದೇವ ನಾಯಕ್ ತಿಳಿಸಿದರು. ಹನಿ ನೀರಾವರಿ, ರಸವಾರಿ, ಪ್ಲಾಸ್ಟಿಕ್ ಹೊದಿಕೆ ಬಳಸಿ, ಚಳಿಗಾಲದಲ್ಲಿ ಉತ್ತಮ ಪಪಾಯ ಕ್ಷೇತ್ರ ನಿರ್ವಹಣೆ, ಕಳೆ ಮುಕ್ತ ತೋಟ, ಮಣ್ಣು, ನೀರು ಪರೀಕ್ಷೆ ಮಾಡಿ ಬೆಳೆ ನಿರ್ವಹಣೆ ಅತ್ಯಗತ್ಯ ಎಂದು ಕೆ ವಿ ಕೆ ವಿಜ್ಜಾನಿ ಡಾ. ಶ್ರೀನಿವಾಸ್ ಹಾಗೂ ಡಾ. ಯೂಸುಫ್ ಅಲಿ ಸಲಹೆ ನೀಡಿದ್ದಾರೆ. ಬಿಸಿಲು ಹೆಚ್ಚಿದಂತೆ ಹನಿ ನೀರಾವರಿ ಅಂದರೆ ಡ್ರಿಪ್ ಮೂಲಕ ಸಕಾಲಕ್ಕೆ ನೀರು ಒದಗಿಸಬೇಕು.