ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿರಲಿ.

ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿರಲಿ.

ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿರಲಿ.

 ಶಹಾಪುರ : ಸಂಘ ಸಂಸ್ಥೆಗಳು ವೈಯಕ್ತಿಕ ಉದ್ದೇಶಗಳಿಗೆ ಸೀಮಿತವಾಗಿರದೆ,ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ ಎಂದು ಮೈಸೂರಿನ ಯಸ್ಸಿ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಿ ಇ ಓ ಸುಧೀರಕುಮಾರ್ ಪಿ.ಹೇಳಿದರು.ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಜೀವನ ಸಮೃದ್ಧಿ ಸೇವಾ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಬಡತನ,ನಿರುದ್ಯೋಗ,ಶಿಕ್ಷಣ, ಸಾಹಿತ್ಯ,ಕಲೆ ಇವುಗಳ ಮೇಲೆ ಬೆಳಕು ಚೆಲ್ಲಿ ಮತ್ತಷ್ಟು ಪ್ರಗತಿ ಪಥದತ್ತ ಸಾಗಲು ಸಹಕಾರಿಯಾಗಬೇಕು ಎಂದು ನುಡಿದರು. 

ಮುಖ್ಯ ಅತಿಥಿಗಳು ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆಂಚಪ್ಪ ನಗನೂರ ನೂತನ ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ ಸಹಕಾರಿ ಸಂಘಗಳ ಕಾರ್ಯ ವ್ಯಾಪ್ತಿ ಮತ್ತು ನೋಂದಣಿ ಕಾಯ್ದೆಗಳ ಕುರಿತು ಸವಿಸ್ತಾರವಾಗಿ ಮನ ಮುಟ್ಟುವ ಹಾಗೆ ನುಡಿದರು.ಸಂಪನ್ಮೂಲ ವ್ಯಕ್ತಿ ಬಸವರಾಜ ಶಿಣ್ಣೂರ ಮಾತನಾಡಿ ವ್ಯಕ್ತಿಯ ವಯಕ್ತಿಕ ಹಿಚ್ಛಾಶಕ್ತಿ ಬದಿಗೊತ್ತಿ,ಸಮಾಜದ ಒಳಿತಿನ ಉದ್ದೇಶಕ್ಕಾಗಿ ಸಂಘ ಸಂಸ್ಥೆಗಳು ಸಂಘಟಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಶಹಪುರದ ಬುದ್ದವಿಹಾರ ಸಾರಿ ಪುತ್ರ ದಮ್ಮಗಿರಿಯ ಭಂತೆ ಮೇತಪಾಲ್ ದಿವ್ಯ ಸಾನಿಧ್ಯ ವಹಿಸಿದ್ದರು,ಜೀವನ ಸಮೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಡಾ.ನೀಲಕಂಠಬಡಿಗೇರ,ಮಲ್ಲಿಕಾರ್ಜುನ ಪೂಜಾರಿ,ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ್ ಹೊಸಮನಿ,ಮೈಸೂರಿನ ಮಹಿಳಾ ಮತ್ತು ಮಕ್ಕಳ ಚಿಂತಕಿ ಜಯಲಕ್ಷ್ಮಿ, ಸಂಸ್ಥೆಯ ಕಾರ್ಯದರ್ಶಿ ಬಾಗಪ್ಪ ಇಸ್ಪುರ,ಹೊಸಬೆಳಕು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದರ್,ಸೇರಿದಂತೆ ಇತರರು ಉಪಸಿತರಿದ್ದರು.ಸಂತೋಷ್ ಜುನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಅನುಸೂಯಾ ಕರಡಕಲ್ ಸ್ವಾಗತಿಸಿದರು,ಮೀನಾಕ್ಷಿ ಹೊಸಮನಿ ನಿರೂಪಿಸಿದರು, ಯಲ್ಲಪ್ಪ ಬೊಮ್ಮನಹಳ್ಳಿ ವಂದಿಸಿದರು.