ಮಾರ್ಚ್ 6 ರಂದು ದೇವನಾoಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭ

ಮಾರ್ಚ್ 6 ರಂದು ದೇವನಾoಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭ

ಮಾರ್ಚ್ 6 ರಂದು ದೇವನಾoಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭ 

ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಡೆಯುವ ಗಾಯತ್ರಿ ಹಿರಿಯ ಪ್ರಾಥಮಿಕ ಹಾಗೂ ಇನಾಮದಾರ್ ಪ್ರೌಢಶಾಲೆಯ ಶಾಲೆಯ ವತಿಯಿಂದ ಹಮ್ಮಿಕೊಂಡ *ದೇವನಾoಪ್ರಿಯ ಪ್ರಶಸ್ತಿ* ಪ್ರಶಸ್ತಿ ಪ್ರಧಾನ ಸಮಾರಂಭ ನಂದೂರಿನ ಶಾಲಾ ಆವರಣದಲ್ಲಿ ದಿನಾಂಕ 6/3/2026 ರಂದು ಸಂಜೆ 6.30 ಕ್ಕೆ ನಡೆಯಲಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಾದಗಿರಿ ಏಕದಂಡಗಿ ಮಠದ ಶ್ರೀ ಸುರೇಂದ್ರನಾಥ ಮಹಾಸ್ವಾಮಿಗಳು ವಹಿಸಲಿದ್ದು, ಸಮಾಜ ಸೇವಕರಾದ

  ಶ್ರೀಮತಿ ಜಯಶ್ರೀ ಬಸವರಾಜ ಮತ್ತಿಮಡು ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮೋನಪ್ಪ ಇನಾಮದಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸೂರಬಾಯಿ ಶಾಂತಪ್ಪ ಪೂಜಾರಿ, ಡಾ. ವಾಸುದೇವ ಸೇಡಂ, ಶ್ರೀ ಶಾಂತಕುಮಾರ್ ಪಾಟೀಲ, ಶ್ರೀ ಬಸವರಾಜ ಹಂಪಿ, ಶ್ರೀ ಸುನಿಲಕುಮಾರ, ಶ್ರೀ ವೀರೇಂದ್ರ ಇನಾಮದಾರ, ಡಾ.ಶರಣಬಸಪ್ಪ ವಡ್ಡನಕೇರಿ ಹಲವರು ಸೇರಿದಂತೆ ಉಪಸ್ಥಿತರಿರಲಿದ್ದು 2026 ನೇ ಸಾಲಿನ ದೇವನಾಂಪ್ರಿಯ ಪ್ರಶಸ್ತಿಗೆ ಶ್ರೀ ಮಲ್ಲಿಕಾರ್ಜುನ ಪಾಲಾಮೂರ ಅವರ ಶರಣರು ಕಟ್ಟ ಬಯಸಿದ ಸಮಾಜ, ಶ್ರೀ ಬಸವರಾಜ ಐನೋಳಿಯವರ ಇಂಜಿನಿಯರಗಳು ಶಿಕ್ಷಕರಾದರೆ, ಶ್ರೀಮತಿ ರೂಪದೇವಿ ಬಂಗಾರವರ ಬಂಗಾರದ ಬಿಂದುಗಳು, ಜಾನಿಮಿಯ ವಿ.ಮೌಜಾನ್ ಅವರ ಆತ್ಮಾನಂದ ವಚನಾಮೃತ, ದುರ್ಗಪ್ಪ ಪೂಜಾರ ಅವರ ಚಿನ್ನ ಬಿತ್ತೇವು ನಾವು ಚಂದಿರನ ಅಂಗಳಕ್ಕೆ, ಎಸ್.ಎಸ್.ಮಾರನಾಳರವರ ಶಿವಪ್ಪ ಹೆಬ್ಬಾಳ ಕೊಡೆಕಲ್, ಶ್ರೀ ಪ್ರಮೋದ್ ಕರಣಂ ಅವರ ಹುಟ್ಟು ಸಾವುಗಳ ನಡುವೆ, ಸಂಗಮನಾಥ ಪಿ.ಸಜ್ಜನ್ ಅವರ ಜೇನುಗೂಡು ಕೃತಿಗಳು ಆಯ್ಕೆಯಾಗಿದ್ದು ಅಲ್ಲದೇ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಡಾ. ನೀಲಮ್ಮ ಎನ್. ಪಾಟೀಲ ಹಾಗೂ ಸಮಾಜ ಸೇವೆಗಾಗಿ ಶ್ರೀ ಮೋನಪ್ಪ ಬಡಿಗೇರ್ ಆಯ್ಕೆಯಾಗಿದ್ದು ಶುಕ್ರವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ವೀರೇಂದ್ರ ಇನಾಮದಾರ್ ಅವರು ತಿಳಿಸಿದ್ದಾರೆ.