ಎಸಿಪಿ ಶಿವನಗೌಡ ಸೇರಿದಂತೆ 10 ಜನರಿಗೆ ಬೆಸ್ಟ್ ಪೊಲೀಸ್ ಪ್ರಶಸ್ತಿ ಜ.20 ರಂದು ಪ್ರಶಸ್ತಿ ಪ್ರದಾನ ಸಮಾರಂಭ
ಎಸಿಪಿ ಶಿವನಗೌಡ ಸೇರಿದಂತೆ 10 ಜನರಿಗೆ ಬೆಸ್ಟ್ ಪೊಲೀಸ್ ಪ್ರಶಸ್ತಿ ,ಜ.20 ರಂದು ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ: ಜಮಾದಾರ್ ಕುಟುಂಬ ಪ್ರತಿಷ್ಠಾನದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಿವೃತ್ತ ಪೊಲೀಸ್ ಅಧಿಕಾರಿ ದಿ.ಮಲ್ಕಪ್ಪ ಜಮಾದಾರ್ ಅವರ ಎರಡನೇ ಸ್ಮರಣೋತ್ಸವದ ಅಂಗವಾಗಿ ನಗರ ವಲಯದ ಎಸಿಪಿ ಶಿವನಗೌಡ ಪಾಟೀಲ್ ಹಾಗೂ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಶಿವಲಿಂಗಪ್ಪ ಉಮ್ಮನಗೋಳ್ ಸೇರಿದಂತೆ ಒಟ್ಟು 10 ಜನರಿಗೆ ಬೆಸ್ಟ್ ಪೊಲೀಸ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ನಗರದ ಕನ್ನಡ ಭವನದಲ್ಲಿ ಜನವರಿ 20ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಂಚಾರಿ ಠಾಣೆಯ ಪಿಐ. ಭಾರತಿಬಾಯಿ ಧನ್ನಿ ಹಾಗೂ ಮಹಿಳಾ ಪೇದೆ ಸಂತೋಷಮ್ಮ ತಳವಾರ್, ಸಿಐಡಿ ಘಟಕದ ಏ ಎಸ್ ಐ ಚಂದ್ರಮಪ್ಪ ಕುಂಬಾರ್, ಸಿಐಡಿ ಅರಣ್ಯ ಘಟಕದ ಮುಖ್ಯ ಪೇದೆ ಷಣ್ಮುಖ ಪಂಡಿತ್ ಮಾಂಡುವೆ, ರಾಘವೇಂದ್ರ ನಗರ ಪೊಲೀಸ್ ಠಾಣೆಯ ಮುಖ್ಯಪೇದೆ ಮಲ್ಲನಗೌಡ ಜಿ ಮಾಲಿ ಪಾಟೀಲ್, ಡಿವೈಎಸ್ಪಿ ಆಫೀಸ್ ಕಚೇರಿಯ ಮುಖ್ಯ ಪೇದೆ ಮಶಾಕ್ ನದಾಫ್, ದೇವಲಗಣಗಾಪುರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸಂತೋಷ್ ಎಸ್ ನಾಯ್ಕೋಡಿ, ಹಾಗೂ ಮಾಶಾಳದ ಪೇದೆ ಗಡ್ಡೆಪ್ಪ ಕೋರಿ ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರಮೇಶ್ ಜಮಾದಾರ್ ಸಂಚಾಲಕರಾದ ಶರಣಗೌಡ ಪಾಟೀಲ್ ಮಾಶಾಲ್ ತಿಳಿಸಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾನಿಲಯದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಭುಲಿಂಗ ನೀಲೂರೆ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ಹನುಮಂತರಾವ್ ಬೈರಾಮಡಗಿ ಹಾಗೂ ರಾಜ್ಯ ಅಕಾರ್ಡೆಶನ್ ಕಮಿಟಿ ಸದಸ್ಯರಾದ ಗುರುರಾಜ್ ಕುಲಕರ್ಣಿ, ಗುಲ್ಬರ್ಗ ವಿಶ್ವವಿದ್ಯಾಲಯದ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಶೋಕ್ ದೊಡ್ಡಮನಿ ಹಾಗೂ ರಾಜ್ಯಮಟ್ಟದ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ಭಾಜನರಾಗಿರುವ ಈ ದಿನ ಡಾಟ್ ಕಾಂ. ವರದಿಗಾರ್ತಿ ಗೀತಾ ಹೊಸಮನಿ ಹಾಗೂ ಹೋಟೆಲ್ ಉದ್ಯಮಿ ಮಲ್ಲಿಕಾರ್ಜುನ್ ಬೀರನೂರ್ ಮತ್ತು ಪೊಲೀಸ್ ಕ್ರೀಡಾಕೂಟದಲ್ಲಿ ಅದ್ವೀತಿಯ ಸಾಧನೆ ಮಾಡಿದ ಡಿಎಆರ್ ಪೇದೆ ಭೀಮರಾವ್ ಜಾದವ್ ಅವರಿಗೆ ಗೌರವ ಸನ್ಮಾನ ಮಾಡಲಾಗುತ್ತಿದೆ. ಇದೇ ವೇಳೆಯಲ್ಲಿ ಮೆಟ್ರಿಕ್ ಹಾಗೂ ಪಿಯುಸಿಸ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೊಲೀಸ್ ಕುಟುಂಬದ ಮಕ್ಕಳಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಪ್ರಶಸ್ತಿ ಕಾರ್ಯಕ್ರಮವನ್ನು ಗುಲ್ಬರ್ಗ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಹೆಚ್ ಟಿ ಪೋತೆ ಉದ್ಘಾಟಿಸಿದವರು. ನಗರ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್. ಢಗೆ ಪ್ರಶಸ್ತಿ ವಿತರಣೆ ಮಾಡುವರು. ಈ ಸಮಾರಂಭದಲ್ಲಿ ಕಲ್ಬುರ್ಗಿ ನಗರದ ಮಹಾನಗರ ಪಾಲಿಕೆಯ ಕರ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನುಪಮಾ ರಮೇಶ್ ಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಡಾ. ಶಿವರಂಜನ್ ಸತ್ಯಂಪೇಟೆ, ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಅಕ್ಕಮಹಾದೇವಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ತೇಗಲತಿಪ್ಪಿ, ಯುವ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷರಾದ ಶಿವಕುಮಾರ್ ಹೊನಗುಂಟಿ, ಪತ್ರಕರ್ತ ಚಂದ್ರಶೇಖರ್ ಕವಲಗ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪತ್ರಕರ್ತ ಸೂರ್ಯಕಾಂತ್ ಜಮಾದಾರ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
