ಜ.25 ರಂದು ಅದ್ದೂರಿ ಹಿಂದೂ ಸಮ್ಮೇಳನಕ್ಕೆ ನಿರ್ಧಾರ
ಜ.25 ರಂದು ಅದ್ದೂರಿ ಹಿಂದೂ ಸಮ್ಮೇಳನಕ್ಕೆ ನಿರ್ಧಾರ
ಕಲಬುರಗಿ: ಹಿಂದೂ ಧರ್ಮದ ಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ ತಿಂಗಳ 25 ಭಾನುವಾರರಂದು ಅದ್ದೂರಿಯಾಗಿ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಓಂ ನಗರ ಶಾಖೆ ಹಿಂದೂ ಸಮ್ಮೇಳನ ಆಯೋಜನೆ ಸಮಿತಿ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ತಿಳಿಸಿದರು.
ಶುಕ್ರವಾರ ಸಂಜೆ ಜಯನಗರ ಶಿವ ಮಂದಿರದಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಸಮ್ಮೇಳನಕ್ಕೆ ದಿನಾಂಕ ಮತ್ತು ಸ್ಥಳ ನಿಗದಿಯಾಗಿದೆ.ಸಮ್ಮೇಳನದ ಭವ್ಯ ಮೆರವಣಿಗೆ, ಕಾರ್ಯಕ್ರಮ ಹಾಗೂ ಸಮ್ಮೇಳನಕ್ಕೆ ಬರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುವುದು.ಈ ಸಮ್ಮೇಳನದಲ್ಲಿ ಓಂ ನಗರ ಶಾಖೆಯ 25 ಕ್ಕೂ ಹೆಚ್ಚು ಬಡಾವಣೆಗಳ ಸುಮಾರು 4 ಸಾವಿರ ಜನರು ಸೇರುವ ನೀರೀಕ್ಷೆ ಇದೆ ಎಂದ ಅವರು ಈಗಾಗಲೇ ಮೆರವಣಿಗೆ, ವೇದಿಕೆ, ಪ್ರಚಾರ ಸಮಿತಿ ಹಾಗೂ ಊಟದ ವ್ಯವಸ್ಥೆ ಸಮಿತಿಗಳನ್ನು ರಚಿಸಲಾಗಿದೆ ಎಂದರು.ಕಾರ್ಮಕ್ರಮದಲ್ಲಿ ಹಲವು ಮಠಾಧೀಶರು, ಗಣ್ಯರು ಭಾಗವಹಿಸಲಿದ್ದಾರೆ.ಸಮ್ಮೇಳನದ ವಿವರ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದರು
ಜಯನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಕೆ.ಎಸ್.ವಾಲಿ, ರೇವಣಸಿದ್ದಪ್ಪ ಭೋಗಶೆಟ್ಪಿ, ಸಮಿತಿ ಉಪಾಧ್ಯಕ್ಷ ಸೂರ್ಯಕಾಂತ ಕೆ.ಬಿ, ಕಾಶಿನಾಥ ರಾಯಗೊಂಡ ಅವರು ಮಾತನಾಡಿದರು.ಸಮ್ಮೇಳನದ ಸಂಯೋಜಕ ರವಿಶರಣ ತೆಗ್ಗಿನಮಠ ಸ್ವಾಗತಿಸಿದರು.ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಬಸವರಾಜ ನಾಯ್ಕರ, ನಾಗೇಂದ್ರ ಆರ್,ಅನಿತಾ ಸುಬೇದಾರ,ಬಸವರಾಜ ಮಾಗಿ, ಸುನಿತಾ ಠಾಕೂರ್,ಬಂಡೆಪ್ಪ ಕೇಸೂರ, ಮನೋಹರ ಬಡಶೇಷಿ, ಗುರುಪಾದಪ್ಪ ಕಾಂತಾ, ವೀರಪ್ಪ ಹುಡುಗಿ, ಮಲ್ಲಯ್ಯ ಸ್ವಾಮಿ ಬೀದಿಮನಿ,ಅಮೀತ್ ಚಿಟಗುಪ್ಪಿ,ಶರಣು ಸೀಗಿ,ಗುಂಡಾಚಾರ ನರಿಬೋಳ ಹಾಗೂ ವಿವಿಧ ಬಡಾವಣೆಗಳ ಸಾರ್ವಜನಿಕರು, ಮಹಿಳೆಯರು ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು
