ಮೊಬೈಲ್ ಬಿಟ್ಟು ಪುಸ್ತಕ ಹಿಡಿ : ಮಡಿವಾಳಪ್ಪ ಬಾಗೋಡಿ

ಮೊಬೈಲ್ ಬಿಟ್ಟು ಪುಸ್ತಕ ಹಿಡಿ :  ಮಡಿವಾಳಪ್ಪ ಬಾಗೋಡಿ

ಮೊಬೈಲ್ ಬಿಟ್ಟು ಪುಸ್ತಕ ಹಿಡಿ : ಮಡಿವಾಳಪ್ಪ ಬಾಗೋಡಿ

ಚಿಂಚೋಳಿ : ಇಂದಿನ ವಿದ್ಯಾರ್ಥಿಗಳು ಮೊಬೈಲ್ ನೋಡುತ್ತಾ ಕಾಲ ಕಳೆಯದೆ ಪುಸ್ತಕ ಓದಿ ಜ್ಞಾನ ಸಂಪಾದಿಸಿಕೊಳ್ಳಬೇಕು. ಮೊಬೈಲ್ ಕೇವಲ ಸಾಂದರ್ಭಿಕ ವಿಷಯಗಳನ್ನು ಮಾತ್ರ ತಿಳಿಸಿಕೊಡುತ್ತದೆ. ಗ್ರಂಥಗಳು ಸಮಗ್ರವಾಗಿ ಜ್ಞಾನ ನೀಡುವ ಆಕರಗಳಾಗಿವೆ ಎಂದು ಮಿರಿಯಾಣ ಪೊಲೀಸ್ ಠಾಣೆಯ ಪಿಎಸ್ಐ ಮಡಿವಾಳಪ್ಪ ಬಾಗೋಡಿ ಹೇಳಿದರು .

ಅವರು ಶನಿವಾರ ಇಲ್ಲಿನ ಚಂದಾಪುರದ ಹಾರಕೂಡ ಶ್ರೀ ಚನ್ನಬಸವೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸ್ವಾಗತ ಸಮಾರಂಭ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶ್ರೀ ಹಾರಕೂಡ ಚೆನ್ನಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆಡಳಿತ ಅಧಿಕಾರಿ ಗೀತಾರಾಣಿ ಬಸವರಾಜ ಐನೋಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಗುರಿ ಇರಿಸಿಕೊಂಡು ಛಲದಿಂದ ಅಭ್ಯಾಸ ಮಾಡಬೇಕು. ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಹಾಗೂ ಸತೀಶ್ ಧವನ್ ಗಳಂತಹ ವಿಜ್ಞಾನಿಗಳ ಬದುಕಿನ ಘಟನೆಗಳು ಮಾರ್ಗದರ್ಶನ ನೀಡುತ್ತವೆ ಎಂದರು. 

ಕಾಲೇಜಿನ ಆಡಳಿತಾಧಿಕಾರಿ ನಾಗರಾಜ ಕಲ್ಬುರ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭದಲ್ಲಿ ಪ್ರಾಚಾರ್ಯ ಬಸವರಾಜ ಪಡಶೆಟ್ಟಿ, ರಾಜಶೇಖರ ಮುಸ್ತಾರಿ, ಚನ್ನಬಸಯ್ಯ ಮಠ, ನೀಲಮ್ಮ ಮೋದಿನ್ಪುರ, ಮಲ್ಲಪ್ಪ ಕಾರ್ಪೆಂಟರ್, ಸಂಗಮೇಶ ಕಣ್ಕಟ್ಟ, ವಿಶ್ವನಾಥ ಜುಲ್ಫಿ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿವಾನಿ ಐಶ್ವರ್ಯ ಸ್ವಾಗತಿಸಿದರು. ಆನಂದ್ ರೆಡ್ಡಿ ವಂದಿಸಿದರು. ಭುವನೇಶ್ವರಿ ಮತ್ತು ರಿಜ್ವಾನ ನಿರೂಪಿಸಿದರು.