ಭಾರತದ ಸಾಂಸ್ಕೃತಿ, ಸರ್ವ ಧರ್ಮದ ವಿಚಾರ, ಜಗತ್ತಿಗೆ ಸಾರಿದ ವಿವೇಕಾನಂದರು: ಪ್ರೊ. ಶಿವರಾಜ್ ಪಾಟೀಲ್ ಕುಲಾಲಿ
ಭಾರತದ ಸಾಂಸ್ಕೃತಿ, ಸರ್ವ ಧರ್ಮದ ವಿಚಾರ, ಜಗತ್ತಿಗೆ ಸಾರಿದ ವಿವೇಕಾನಂದರು: ಪ್ರೊ. ಶಿವರಾಜ್ ಪಾಟೀಲ್ ಕುಲಾಲಿ
ಕಲಬುರಗಿ: ಸ್ವಾಮಿ ವಿವೇಕಾನಂದರು ಭಾರತದಲ್ಲಿ ಜನ್ಮ ತಾಳಿದರೂ ಜಗತ್ತಿನಾದ್ಯಂತ ಪರ್ಯಟನೆ ಮಾಡಿ ಅಲ್ಲಿ ಭರತ ಭೂಮಿಯ ಸಂಸ್ಕೃತಿ, ಸಂಸ್ಕಾರ,ಆಚಾರ, ವಿಚಾರ ಮತ್ತು ಸರ್ವಧರ್ಮಗಳ ಸಾರವು ಒಂದೇ ಎಂದು ಸಾರಿ ಜಗತ್ಪ್ರಸಿದ್ಧ ವೀರ ಸನ್ಯಾಸಿ ಎನಿಸಿ ಕೊಂಡಿದ್ದು, ಅವರ ಆದರ್ಶ ಮತ್ತು ಬೋಧನೆಗಳು ಎಂದೆಂದಿಗೂ ಪ್ರಸ್ತುತ, ಅವುಗಳನ್ನು ಅಳವಡಿಸಿಕೊಂಡು ಇಂದಿನ ಯುವಕರು ಭವ್ಯ ಭಾರತದ ನಿರ್ಮಾಣ ಮಾಡಬೇಕು ಎಂದು ಲೋಕಸಭಾ ಮತ್ತು ರಾಜ್ಯ ಸಭಾ ಮಾಜಿ ಸದಸ್ಯರಾದ ಸನ್ಮಾನ್ಯ ಡಾ ಬಸವರಾಜ ಪಾಟೀಲ ಸೇಡಂ ಕರೆ ಕೊಟ್ಟರು.
ನಗರದ ಮಹಾಂತ ಜ್ಯೋತಿ ಪ್ರತಿಷ್ಠಾನ ಟ್ರಸ್ಟ್ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಹಸಿವು ಮುಕ್ತ ಕಲಬುರಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಸಿವು ಮುಕ್ತ ಕಲಬುರಗಿ ಕಾರ್ಯಕ್ರಮವು ನಿರಂತರವಾಗಿದ್ದು, ಅದರಂತಹ ಪುಣ್ಯದ ಕೆಲಸ ಇನ್ನೊಂದಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಅಪ್ಪಾರಾವ ಅಕ್ಕೋಣಿಯವರು ಸಹ ಅನ್ನದಾನವೇ ಅತಿ ಶ್ರೇಷ್ಠದಾನ ಎಂದು ತಿಳಿಸಿದರು.
ನಂತರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವಕ ಯುವತಿಯರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸುರೇಶ್ ಕಲಶೆಟ್ಟಿ ಜಿಲ್ಲಾ ಅಧ್ಯಕ್ಷರು, ವಿಜಯಕುಮಾರ್ ಬಿರಾದಾರ ಮಾಧ್ಯಮ ಕಾರ್ಯದರ್ಶಿ ಮತ್ತು ಬಸವರಾಜ ಎಸ್ ಎಂ, ಉಪಾಧ್ಯಕ್ಷರು, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ, ಪಾಂಡುರಂಗ ಕುಲಕರ್ಣಿ, ಎ ಎಸ್ ಐ, ಜಗದೀಪ ಗ್ರಾಪಂ ಅಧ್ಯಕ್ಷರು, ಶಾಮರಾವ್ ಪಾಟೀಲ್, ಜೀವ ವಿಮಾ ನಿಗಮ ಮತ್ತು ಅಂಚೆ ಇಲಾಖೆಯ ಅಧಿಕೃತ ಏಜೆಂಟರು, ಪ್ರಶಾಂತ್ ತಡಕಲೆ , ಮಿ. ಗ್ರಾಫಿಕ್ಸ್ ಮಾಲೀಕರು ಮತ್ತು ಪ್ರಿಂಟಿಂಗ್ ಡಿಸೈನರ್, ಶಾಂತಾ ವಾಲಿ, ಮಂಜುಳಾ ಡೊಳ್ಳೆ ಮತ್ತು ಪ್ರೀತಿ ಅಕ್ಕೋಣಿ ಯವರಿಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಡಾ ಎ ಎಸ್ ಭದ್ರಶೆಟ್ಟಿಯವರು, ಡಾ ಸಿದ್ದರಾಮಪ್ಪ ಮಾಲಿ ಪಾಟೀಲ್ ಧಂಗಾಪುರ, ಡಾ ಸುಭಾಷ್ ಕಮಲಾಪುರೆ, ಶ್ರೀ ರಾಜು ಕಾಕಡೆ, ಶ್ರೀಮತಿ ಮಹಾದೇವಿ ಪಾಟೀಲ್ ಆಲಗೂಡ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ ಶಿವರಾಜ್ ಪಾಟೀಲ್ ರು ನಿರೂಪಣೆ ಮಾಡಿದರು ಮತ್ತು ಅನುಷ್ಠಾನಾಧಿಕಾರಿ ಶ್ರೀ ಮತಿ ಪ್ರೀತಿ ಅಕ್ಕೋಣಿ ಯವರ ವಂದನಾರ್ಪಣೆ ಯೊಂದಿಗೆ ಸಮಾರಂಭ ಮುಕ್ತಾಯವಾಯಿತು, ನಂತರ ಆಶ್ರಯ ಕಾಲೋನಿಯ ಸುಮಾರು ೫೦ ಕುಟುಂಬ ಸದಸ್ಯರುಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.
