ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅವಹೇಳನ ಕಾರರನ್ನು ಬಂಧಿಸುವಂತೆ ಭಾರೀ ಜನಾಕ್ರೋಶ

ಶ್ರೀ ಕ್ಷೇತ್ರ ಧರ್ಮಸ್ಥಳ  ವಿರುದ್ಧ ಅವಹೇಳನ ಕಾರರನ್ನು ಬಂಧಿಸುವಂತೆ ಭಾರೀ ಜನಾಕ್ರೋಶ
ಶ್ರೀ ಕ್ಷೇತ್ರ ಧರ್ಮಸ್ಥಳ  ವಿರುದ್ಧ ಅವಹೇಳನ ಕಾರರನ್ನು ಬಂಧಿಸುವಂತೆ ಭಾರೀ ಜನಾಕ್ರೋಶ

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅವಹೇಳನ ಕಾರರನ್ನು ಬಂಧಿಸುವಂತೆ ಭಾರೀ ಜನಾಕ್ರೋಶ

ಸಾವಿರಾರು ಸಂಖ್ಯೆಯ ಧರ್ಮಸ್ಥಳ ಕ್ಷೇತ್ರ ಅಭಿಮಾನಿಗಳಿಂದ ಬೃಹತ್ ಪಾದಯಾತ್ರೆ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ.

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಹಾಗೂ ಡಾ. ವೀರೇಂದ್ರ ಹೆಗ್ಗ ಡೆಯವರ ಕುಟುಂಬದ22 ವಿರುದ್ಧ ಷಡ್ಯಂತರ ಮಾಡಿ ಅವಹೇಳನಕಾರಿಯಾಗಿ ಬಿಂಬಿಸಿ ಹಿಂದೂ ಧಾರ್ಮಿಕ ಕೇಂದ್ರದ ಮೇಲೆ ಪ್ರಹಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಕಲಬುರಗಿ ಯಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.

    ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ವತಿಯಿಂದ ಆಗಸ್ಟ್ 13ರಂದು ನಡೆದ ವ್ಯಾಪಕ ಪ್ರತಿಭಟನೆ ಹಾಗೂ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆದ ಪಾದಯಾತ್ರೆಯಲ್ಲಿ2 ಸರ್ವಧರ್ಮಗಳ 3,000 ಕ್ಕೂ ಹೆಚ್ಚು ಭಕ್ತಾಭಿಮಾನಿಗಳು ಪಾಲ್ಗೊಂಡು ಹಿಂದೂ ಧರ್ಮದ ಮೇಲೆ ನಡೆಸುವ ಅವಹೇಳನ ಮಾಡುವವರ ಹಾಗೂ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ದುಷ್ಟ ಶಕ್ತಿಗಳನ್ನು ಬಂಧಿಸಿ ನಕಲಿ ಯೂಟ್ಯೂಬರ್ ಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಏಕ ಕಂಠದಿಂದ ಒತ್ತಾಯಿಸಲಾಯಿತು. 22

    ಜಗತ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ರಾಜಕುಮಾರ ಪಾಟೀಲ್ ತೆಲ್ಕೂರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ನಿತಿನ್ ಗುತ್ತೇದಾರ್, ರವಿ ಬಿರಾದಾರ್, ದಿವ್ಯಾ ಹಾಗರಗಿ, ಶ್ರೀಮತಿ ಜಯಶ್ರೀ ಮತ್ತಿಮಡು ,ಡಾ. ಸದಾನಂದ ಪೆರ್ಲ, ನಾಗಲಿಂಗಯ್ಯ ಮಠಪತಿ, ರವಿ ಮದನ್ ಕರ್ , ಸಿದ್ರಾಮಯ್ಯ ಹಿರೇಮಠ, ಸುರೇಶ್ ತಂಗಾ, ಅನಿಲ್ ಕುಮಾರ್ ಡಾಂಗೆ, ಸಿ.ಎನ್ ಬಾಬಳಗಾಂವ, ಸೂರ್ಯಕಾಂತ ಅವರಾದ್ ಬಿ , ರವಿಕುಮಾರ್ ನೀಲೂರ, ಮಲ್ಲಿಕಾರ್ಜುನ ಸಾರವಾಡ, ಶೋಭಾ ಬಾಗೇವಾಡಿ, ಲಕ್ಷ್ಮಿಕಾಂತ ಸ್ವಾದಿ, ನರಸಿಂಹ ಮೆಂಡನ್, ಸಂತೋಷ್ ಪೂಜಾರಿ,ಪ್ರದೀಪ್ ಪೂಜಾರಿ ಸೇರಿದಂತೆ ಸರ್ವಧರ್ಮಿಯರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಮೆರವಣಿಗೆ ಮೂಲಕ ಘೋಷಣೆ ಕೂಗುತ್ತಾ ಪಾದಯಾತ್ರೆ ನಡೆಸಿದರು. 

    ಶ್ರೀ ಕ್ಷೇತ್ರ ಧರ್ಮಸ್ಥಳವು 800 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದ್ದು ಪ್ರತಿದಿನ ರಾಜ್ಯ ಹಾಗೂ ಹೊರ ರಾಜ್ಯ, ದೇಶ, ವಿದೇಶಗಳಿಂದ ಭಕ್ತರು ಆಗಮಿಸುತ್ತಿರುವ ಶ್ರದ್ಧಾ ಕೇಂದ್ರವಾಗಿದೆ. ಧಾರ್ಮಿಕವಾಗಿಯೂ ಸಾಮಾಜಿಕವಾಗಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಪುಣ್ಯಕ್ಷೇತ್ರವಾಗಿದ್ದು ಹಾಗೂ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಸಮಾಜೋ _ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿ ರಾಜ್ಯ ಸರಕಾರವು ನಡೆಸುವ ಅಭಿವೃದ್ಧಿ ಕಾರ್ಯಗಳಿಗಿಂತಲೂ ಹೆಚ್ಚು ಜನಪರ ಸೇವೆಯನ್ನು ನೀಡುತ್ತಿದ್ದಾರೆ.ಇವರ ವಿರುದ್ಧ ಗಿರೀಶ್ 

ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ ಟಿ, ಸಮೀರ್ ಎಂ.ಡಿ, ಅಜಯ್ ಅಂಚನ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವಾಚ್ಯವಾಗಿ ನಿಂದಿಸಿ ನಿಕೃಷ್ಟ ಮಟ್ಟದ ಶಬ್ದ ಬಳಕೆ ಮಾಡಿ ಮಾನಹಾನಿ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. 

    ಮುಸುಕುಧಾರಿ ನಕಲಿ ವ್ಯಕ್ತಿ 15 ಕಡೆಗಳಲ್ಲಿ ಶವ ಹೂತಿಟ್ಟಿರುವುದಾಗಿ ಸ್ಥಳಗಳನ್ನು ಗುರುತಿಸಿದರೂ ಎಸ್ಐ ಟಿಗೆ ಯಾವುದೇ ಕುರುಹು ಪತ್ತೆಯಾಗದೇ ಇರುವುದರಿಂದ ಆತನನ್ನು ಶೀಘ್ರ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ನಕಲಿ ಅನಾಮಿಕ ವ್ಯಕ್ತಿಯ ಮಾತನ್ನು ಕೇಳಿ ಗುಂಡಿ ಅಗೆಯುವ ಕೆಲಸವನ್ನು ಸರಕಾರ ಕೂಡಲೇ ನಿಲ್ಲಿಸಬೇಕು. ಎಸ್ಐಟಿ ವರದಿಯನ್ನು ಶೀಘ್ರ ಬಿಡುಗಡೆ ಮಾಡಿ ಕಪಟ ನಾಟಕಕ್ಕೆ ಇತಿಶ್ರೀ ಹಾಡಬೇಕಾಗಿದೆ. ಸೌಮ್ಯಲತಾ ಮತ್ತು ಸೌಜನ್ಯ ಕೊಲೆಯನ್ನು ಕೂಲಂಕಶವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಬಂಧಿಸುವುದಕ್ಕೆ ಸ್ವತಃ ಡಾ ಡಿ.ವೀರೇಂದ್ರ ಹೆಗ್ಗ ಡೆಯವರು ಮತ್ತು ಎಲ್ಲರೂ ಒತ್ತಾಯಿಸುತ್ತಿದ್ದು ಪಾರದರ್ಶಕವಾದ ತನಿಖೆಗೆ ಆಗ್ರಹ ಮಾಡುತ್ತಿದ್ದರೂ ಕೆಲವು ಸಮಾಜಘಾತಕ ಶಕ್ತಿಗಳ ಹುನ್ನಾರಕ್ಕೆ ಮಣಿದ ರಾಜ್ಯ ಸರಕಾರ ಗುಂಡಿ ತೋಡುವ ಪ್ರಕ್ರಿಯೆಯನ್ನು ಮುಂದುವರಿಸುತ್ತಿರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ಖಂಡನೆ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರನ್ನು ಕೂಡಲೇ ಬಂಧನಕ್ಕೆ ಒಳಪಡಿಸಿ ಕಲಬುರಗಿಯಲ್ಲೂ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್ ಉಮಾಕಾಂತ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಲಾಯಿತು. ನ್ಯಾಯಾಲಯ ಹಾಗೂ ಸಂಬಂಧಪಟ್ಟ ಇಲಾಖೆಯವರನ್ನು ಸಂಪರ್ಕಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಪೂಜ್ಯರ ಹಾಗೂ ಕ್ಷೇತ್ರದ ಗೌರವಕ್ಕೆ ಚ್ಯುತಿ ತಂದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಮೇಲೆ ವೃಥಾರೋಪ ಮಾಡಿ ಕ್ಷೇತ್ರಕ್ಕೆ ಕಳಂಕ ತರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಆಸಂಖ್ಯ ಭಕ್ತರ ಭಾವನೆಗಳಿಗೆ ಕೂಡಲೇ ಸರಕಾರ ಸ್ಪಂದಿಸಸಬೇಕು. 

_ ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ ಶಾಸಕರು

ಕಾಣದ ಕೈಗಳ ಪತ್ತೆ ಹಚ್ಚಿ

ನಕಲಿ ಭೀಮನನ್ನು ಒದ್ದು ಒಳಗೆ ಹಾಕಿ ಕಾನೂನು ರೀತಿಯಲ್ಲಿ ತನಿಖೆಗೊಳಪಡಿಸಿ ಮಂಪರು ಪರೀಕ್ಷೆ ನಡೆಸಬೇಕು. ಮಾತ್ರವಲ್ಲ ಅವನ ಬೆನ್ನ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಸಮಾಜಕ್ಕೆ ತಿಳಿಸುವ ದೊಡ್ಡ ಜವಾಬ್ದಾರಿ ಈ ಸರಕಾರದ ಮೇಲಿದೆ. ಧಾರ್ಮಿಕ ಕೇಂದ್ರಗಳ ಮೇಲೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಈ ರೀತಿಯ ಪ್ರಹಾರ ನಡೆಯುತ್ತಿದ್ದು ಕೂಡಲೇ ಇದನ್ನು ನಿಲ್ಲಿಸಬೇಕಲ್ಲದೇ ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಘಟನೆಗೆ ಮಂಗಳ ಹಾಡಬೇಕು. 

_ ರಾಜಕುಮಾರ್ ಪಾಟೀಲ ತೇಲ್ಕೂರ್,ಮಾಜಿ ಶಾಸಕರು ಸೇಡಂ.

ಉಗ್ರ ಹೋರಾಟಕ್ಕೂ ಸಿದ್ಧ

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಸಂಚಿನ ವಿರುದ್ಧ ಸರಕಾರ ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ. ಪವಿತ್ರ ಕ್ಷೇತ್ರವನ್ನು ಮಲಿನಗೊಳಿಸಲು ಯಾವತ್ತೂ ಬಿಡುವುದಿಲ್ಲ. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜೊತೆ ನಾಡಿನ ಸಮಸ್ತ ಜನತೆ ಇದೆ.

_ ನಿತಿನ್ ಗುತ್ತೇದಾರ್, ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಕಲಬುರಗಿ 

ಎಫ್ಐಆರ್ ದಾಖಲಿಸಿ

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಹೊರಿಸಿ ಅಪಮಾನ ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ಕೂಡಲೆ ಬಂಧಿಸಬೇಕು. ಕಲಬುರಗಿಯಲ್ಲಿ ಅವರ ವಿರುದ್ಧ ಎಫ್ ಐ ಆರ್ ದಾಖಲು ಆಗಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯ ಜನರನ್ನು ಜಮಾಯಿಸಿ ಹೋರಾಟದ ಕಣಕ್ಕೆ ಇಳಿಯಲಾಗುವುದು. 

 _ ದಿವ್ಯಾ ಹಾಗರಗಿ ಸಮಾಜ ಸೇವಕಿ

ಅಭಿವೃದ್ಧಿಯ ಸಾಧಕನಿಗೆ ಅಪಮಾನ ಸಲ್ಲದು

ಇಡೀ ರಾಜ್ಯದಲ್ಲಿ ರಾಜ್ಯ ಸರ್ಕಾರ ಮಾಡುವ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದನ್ನು ನೋಡಿ ಸಹಿಸಲಾಗದ ಮತ್ತು ಕ್ಷೇತ್ರದ ಅಪಾರ ಬೆಳವಣಿಗೆಯನ್ನು ನೋಡಲಾಗದೆ ಶ್ರೀ ಕ್ಷೇತ್ರಕ್ಕೆ ಮಸಿ ಬಳಿಯಲು ಪ್ರಯತ್ನಿಸಲಾಗುತ್ತಿದೆ

ಕಲಬುರಗಿ ಜಿಲ್ಲೆಯಲ್ಲಿ ಬರಗಾಲ ಬಂದಾಗ ನೆರವು ನೀಡಿದ ಹೆಗ್ಗಡೆಯವರು ಇತ್ತೀಚೆಗೆ ಈ ಭಾಗದ ಅಭಿವೃದ್ಧಿಗೆ ಶಿಕ್ಷಕರನ್ನು ಒದಗಿಸುವುದಲ್ಲದೆ ಪಿಂಚಣಿ ಸೌಲಭ್ಯ ವಿತರಣೆ, ಮನೆ ನಿರ್ಮಾಣ, ಕೆರೆಗಳ ಅಭಿವೃದ್ಧಿ ಮಾಡಿ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯು ತ್ತಿರುವುದನ್ನು ಸಹಿಸಲಾಗದ ದುಷ್ಟ ಶಕ್ತಿಗಳು ಶ್ರೀ ಕ್ಷೇತ್ರದ ವಿರುದ್ಧ ಅವಹೇಳನ ಮಾಡುತ್ತಿದ್ದು ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು. 

ರವಿ ಬಿರಾದಾರ್, ರಾಜ್ಯಾಧ್ಯಕ್ಷರು ವೀರಶೈವ ಯುವ ಸಮಾಜ ಕಲಬುರಗಿ