ಕಡಿಮೆ ಶಬ್ದಗಳಲ್ಲಿ ಹೆಚ್ಚಿನ ಅರ್ಥ ನೀಡುವವನೇ ಮಹಾಕವಿ : ಡಾ. ಬಂಧು ಸಿದ್ದೇಶ್ವರ
ಕಡಿಮೆ ಶಬ್ದಗಳಲ್ಲಿ ಹೆಚ್ಚಿನ ಅರ್ಥ ನೀಡುವವನೇ ಮಹಾಕವಿ : ಡಾ. ಬಂಧು ಸಿದ್ದೇಶ್ವರ
ಬಸವಕಲ್ಯಾಣ: ಯಾರು ಅತ್ಯಂತ ಕಡಿಮೆ ಶಬ್ದಗಳಲ್ಲಿ ಹೆಚ್ಚು ವಿಷಯವನ್ನು ಮನಮುಟ್ಟುವಂತೆ ತಿಳಿಸುವರೋ ಅವರೇ ನಿಜವಾದ ಮಹಾಕವಿ ಅಥವಾ ಲೇಖಕ ಎಂದು ನಿವೃತ್ತ ಉಪನ್ಯಾಸಕರಾದ ಡಾ. ಕೆ.ಎಸ್. ಬಂಧು ಸಿದ್ದೇಶ್ವರ ಅವರು ಅಭಿಪ್ರಾಯಪಟ್ಟರು.
ಅವರು ಶ್ರೀಸದ್ಗುರು ಯಲ್ಲಾಲಿಂಗೇಶ್ವರ ಆನಂದಾಶ್ರಮ ಸಸ್ತಾಪೂರದಲ್ಲಿ " ಪ್ರಥಮ ಶಿಕ್ಷಕ ಕವಿ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತಾ.
ಕಾವ್ಯವೆಂಬುದು ಕೇವಲ ಪದಗಳ ಜೋಡಣೆ ಅಲ್ಲ; ಅದು ಪ್ರತಿಭೆಯ ಬೀಜದಿಂದ ಮೂಡಿ ಬರುವ ಸೃಜನಶೀಲ ಅಭಿವ್ಯಕ್ತಿ ಎಂದು ಹೇಳಿದರು. ಇತಿಹಾಸದಲ್ಲಿ ಕವಿಗಳು ದಿವ್ಯ ಪುರುಷರಂತೆ ಸಮಾಜವನ್ನು ದಿಕ್ಕು ತೋರಿಸಿದವರಾಗಿದ್ದು, ಅವರ ಕಾವ್ಯ ಮಾನವ ಬದುಕಿಗೆ ಬೆಳಕು ನೀಡಿದೆ ಎಂದು ಹೇಳಿದರು.
ಎಲ್ಲಾ ಕವಿಗಳು ಇಂದಿನ ಸಮಾಜದಲ್ಲಿನ ಸಮಸ್ಯೆ ಸವಾಲುಗಳಿಗೆ ಪರಿಹಾರಾತ್ಮಕವಾದ ಕವಿತೆಗಳನ್ನು ಗಮನ ಸೆಳೆದ ಕವಿತೆಗಳು. ಆಶಯ ನುಡಿ ಯನ್ನು ಯುವ ಕವಿ ಡಾ.ಕೈಲಾಸ ಡೋಣಿ ಬಂಧು ಕವಿ.ಕವಿತೆ.ಕವನ ಸ್ವರೂಪ ಕುರಿತು ಮಾತನಾಡಿದರು.ಮಲ್ಲಿಕಾರ್ಜುನ ಕಾಡಾದಿ, ಪತ್ರಕರ್ತ ನಾಗಪ್ಪ ನಿಣ್ಣೆ, ನೌಕರರ ಸಂಘದ ಅಧ್ಯಕ್ಷ
ಸಂಜುಕುಮಾರ ನಡಕರ. ದೇವೇಂದ್ರ ಕಟ್ಟಿಮನಿ ಸಮ್ಮೇಳನದ ಅಧ್ಯಕ್ಷ ರಾದ ಶಿವರಾಜ ಮೇತ್ರೆ ದಂಪತಿ. ಸಂಯೋಜಕರಾದ ಡಾ.ಗವಿಸಿದ್ಧಪ್ಪ ಪಾಟೀಲ. ಡಾ.ಜಯದೇವಿ ಗಾಯಕವಾಡ. ಪೂಜ್ಯ ಮಹಾದೇವಿ ತಾಯಿ .ನಾಗಶೆಟ್ಟಿ ಗೌಡಪ್ಪ ಪಾಟೀಲ. ಇತರರು ವೇದಿಕೆಯ ಮೇಲಿದರು. ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಪೀರಪ್ಪ ಸಜ್ಜನ ಕಾರ್ಯಕ್ರಮ ನಿರೂಪಣೆಯ ಮಾಡಿದರೇ. ಡಾ.ರಾಜಕುಮಾರ ಮಾಳಗೆ ವಂದನಾರಪಣೆ ಮತ್ತು ಪೂಜ್ಯ ಮಹಾತಾಯಿಯವರ 61ನೇಹುಟ್ಟು ಹಬ್ಬದ ಆಚರಣೆಯ ಶುಭನುಡಿಯೊಂದಿಗೆ, ಜಾತ್ರೆಯಲ್ಲಿ ಸಕಲ ಸದ್ಭಕ್ತರು, ಮಾತಾಜಿರವರ ಜನುಮ ದಿನವನ್ನೂ ಆಚರಿಸಲಾಯಿತು. .
