ಆಧ್ಯಾತ್ಮ ಕ್ಷೇತ್ರದಲ್ಲಿ ನಾಲವಾರ ಶ್ರೀಮಠದ ಸೇವೆ ಅನುಪಮ: ವ್ಹಿ.ಸೋಮಣ್ಣ
ಡಾ.ಸಿದ್ಧತೋಟೇಂದ್ರ ಶ್ರೀಗಳ ಶ್ರಾವಣಪಾದಪೂಜೆ ಮುಕ್ತಾಯ.
ಆಧ್ಯಾತ್ಮ ಕ್ಷೇತ್ರದಲ್ಲಿ ನಾಲವಾರ ಶ್ರೀಮಠದ ಸೇವೆ ಅನುಪಮ: ವ್ಹಿ.ಸೋಮಣ್ಣ
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಲವಾರ ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಮೂಲಕ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಮಾಡುತ್ತಿರುವ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಅನುಪಮವಾದದ್ದು ಎಂದು ಕೇಂದ್ರ ರೈಲ್ವೇ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರಾವಣ ಮಾಸದ ಇಷ್ಟಲಿಂಗ ಸಹಿತ ಮಹಾಪಾದಪೂಜೆಯ ಸಮಾರೋಪ ಹಾಗೂ ಬೆನಕನ ಅಮಾವಾಸ್ಯೆಯ ಮಾಸಿಕ ಶಿವಾನುಭವ ಚಿಂತನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಡಿನ ಮಠಮಾನ್ಯಗಳ ಬಗ್ಗೆ ನನಗೆ ಅಪಾರ ಭಕ್ತಿ ಅಭಿಮಾನವಿದ್ದು, ಜಾತ್ಯಾತೀತವಾಗಿ ಅನ್ನ-ಅಕ್ಷರ-ಆಶ್ರಯ ನೀಡುವ ಮೂಲಕ ಮಠಗಳು ನಾಡನ್ನು ಉದ್ಧರಿಸುವ ಕೆಲಸ ಮಾಡುತ್ತಲಿವೆ.
ನಾಲವಾರ ಶ್ರೀಮಠ ಹಾಗೂ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಬಗ್ಗೆ ನಾನು ಬಹಳ ಕೇಳಿದ್ದು,ಅವರ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಗಳು ನಮ್ಮ ದೇಶದ ಆಧ್ಯಾತ್ಮಿಕ ಹಿರಿಮೆಯನ್ನು ಹೆಚ್ಚಿಸುತ್ತಿದೆ ಎಂದರು.ನಾಡಿನ ಹಿರಿಯ ಮಠಾಧೀಶರು,ಗಣ್ಯ ರಾಜಕೀಯ ಮುತ್ಸದ್ಧಿಗಳು,ವಿವಿಧ ರಂಗಗಳ ಗಣ್ಯಾತಿಗಣ್ಯರನ್ನು ತನ್ನೆಡೆಗೆ ಸೆಳೆದ ನಾಲವಾರ ಮಠದ ಶಕ್ತಿ ಅಪಾರವಾದದ್ದು ಎಂದರು.
ಗುರುಗಳ ವೈಭವದ ಮಹಾಪಾದಪೂಜೆಯಲ್ಲಿ ಭಾಗವಹಿಸಿ,ಅವರ ಆಶೀರ್ವಾದ ಪಡೆದು ನಾನು ಧನ್ಯನಾಗಿದ್ದು ಮತ್ತೆ ಮತ್ತೆ ಶ್ರೀಕ್ಷೇತ್ರಕ್ಕೆ ಆಗಮಿಸಿ ಪೂಜ್ಯರ ದರ್ಶನಾಶೀರ್ವಾದ ಪಡೆಯುವುದಾಗಿ ಹೇಳಿದರು.
ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ಆಶೀರ್ವಚನ ನೀಡಿದರು.
ನಾಡಿನ ಖ್ಯಾತ ಗಾಯಕರಾದ ಶ್ರೀ ಶರಣ ಕುಮಾರ್ ಜಾಲಹಳ್ಳಿ. ಸಂಗೀತಕ್ಕೆ ಚಂದ್ರಶೇಖರ್ ಗೋಗಿ, ಕುಮಾರ್ ಸಿದ್ದು ಅವರಾದಿ ಮುಂತಾದವರು ಸೇವೆ ಸಲ್ಲಿಸಿದರು
ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ,ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮೀನರೆಡ್ಡಿ ಯಾಳಗಿ,ಮಾಜಿ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್,ಗುರು ಕಾಮಾ,ಡಾ.ಸಿದ್ಧರಾಜರೆಡ್ಡಿ ಯಾದಗಿರಿ,ಲಿಂಗಾರೆಡ್ಡಿ ಭಾಸರೆಡ್ಡಿ,ವೀರಣ್ಣಗೌಡ ಪರಸರೆಡ್ಡಿ, ನಂದೀಶ್ ಪಾಟೀಲ್. ವಿರೂಪಾಕ್ಷಯ್ಯ ಸ್ವಾಮಿ. ಕಾರ್ಯದರ್ಶಿ ಶಿವರೆಡ್ಡಿ ಕುಲಕುಂದಿ. ಈರಣ್ಣ ಸಾವು ಇಂಗಳಗಿ. ಮಲ್ಲಿನಾಥ್ ಪಾಟೀಲ್ ಕಾಖಂಡಕಿ. ಮಹಾದೇವ ಗಂವ್ಹಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.