ಅರ್ಜುಣಗಿ: ಶ್ರೀ ಗುರು ಕುಮಾರೇಶ್ವರ ವಿರಕ್ತ ಮಠದಲ್ಲಿ 17ನೇ ಸ್ಮರಣೋತ್ಸವ ಜಾತ್ರೆ.

ಅರ್ಜುಣಗಿ: ಶ್ರೀ ಗುರು ಕುಮಾರೇಶ್ವರ ವಿರಕ್ತ ಮಠದಲ್ಲಿ 17ನೇ ಸ್ಮರಣೋತ್ಸವ ಜಾತ್ರೆ.

ಅರ್ಜುಣಗಿ: ಶ್ರೀ ಗುರು ಕುಮಾರೇಶ್ವರ ವಿರಕ್ತ ಮಠದಲ್ಲಿ 17ನೇ ಸ್ಮರಣೋತ್ಸವ ಜಾತ್ರೆ.

ಅಫಜಲಪೂರ: ತಾಲೂಕಿನ ಅರ್ಜುಣಗಿ ಗ್ರಾಮದ ಶ್ರೀ ಗುರು ಕುಮಾರೇಶ್ವರ ವಿರಕ್ತ ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ 17ನೇ ಸ್ಮರಣೋತ್ಸವವನ್ನು ದಿನಾಂಕ 17.01.2026 ರಿಂದ 23.01.2026ರವರೆಗೆ ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿದೆ.

ಸ್ಮರಣೋತ್ಸವದ ಅಂಗವಾಗಿ ಪ್ರತಿದಿನ ರಾತ್ರಿ 8:30ರಿಂದ 10:00 ಗಂಟೆಯವರೆಗೆ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಗಳು ಜರುಗಲಿವೆ.

ದಿನಾಂಕ 17.01.2026ರಂದು ಬೆಳಗ್ಗೆ 8:30 ಗಂಟೆಗೆ ಶ್ರೀ ಮ.ನಿ.ಪ್ರ. ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರಿಂದ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ.

ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸಪ್ಪ ಪಾಟೀಲ್ ಶಾಸ್ತ್ರಿಗಳು (ನಿಂಬಾಳ) ಅವರ ಅಮೃತವಾಣಿಯಿಂದ ಆಧ್ಯಾತ್ಮಿಕ ಪ್ರವಚನ ಸಾಗಿ ಬರಲಿದೆ. ಸಂಗೀತ ಸೇವೆಯನ್ನು ಶ್ರೀ ಬಸಲಿಂಗಯ್ಯ ಸ್ವಾಮಿ (ಅಂಕಲಿಗಿ) ಹಾಗೂ ತಬಲಾ ಸೇವೆಯನ್ನು ಶ್ರೀ ಸುಭಾಷ ತೇಲಿ (ಚೌಡಪೂರ) ಸಲ್ಲಿಸಲಿದ್ದಾರೆ.

ದಿನಾಂಕ 17ರಂದು ಸಿದ್ಧಾರೂಡ ಮಠ, ಯಳಸಂಗಿ ಪೂಜ್ಯರಾದ ಪೂಜ್ಯಶ್ರೀ ಪರಮಾನಂದ ಮಹಾಸ್ವಾಮಿಗಳಿಂದ ಆಶೀರ್ವಚನ ದೊರೆಯಲಿದೆ.

ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಶ್ರೀ ಅರುಣಕುಮಾರ ಎಂ. ಪಾಟೀಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮತಿನ್ ಪಟೇಲ್ ಹಾಗೂ ಸಿದ್ಧಾರ್ಥ್ ಬಸರಿಗಿಡ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಸ್.ಎಸ್. ಪಾಟೀಲ್ (ಸಿಂಧನೂರು), ಶಿವಾನಂದ ಗಾಡಿ ಸಾಹುಕಾರ್, ಶಿವಾನಂದ ಚಂದಣ್ಣ, ಮಲ್ಲಿಕಾರ್ಜುನ ಉಲ್ಲಾಸ ಹುಡುಗಿ, ಗುರುರಾಜ್ ನಂದರಗಿ, ರಾಜಶೇಖರ್ ಕಲಶೆಟ್ಟಿ, ವಿದ್ಯಾಧರ ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾರಿಕಾ ಶರಣಗೌಡ ಬಿರಾದಾರ, ಸದಸ್ಯರಾದ ಶೌಕತ್ ಅಲಿ ಮೂಸಸಾಬ ಮಡ್ಡಿ, ಶ್ರೀಮತಿ ಸಂತೋಷಿ, ಸುಶೀಲ್ ಕುಮಾರ್ ನವಲಗಿರಿ, ಶ್ರೀಮತಿ ಕಮಲಾಬಾಯಿ ಯಲ್ಲಪ್ಪ ವಾಡೇಕರ್, ಪಿಡಿಓ ಶ್ರೀ ಪ್ರಶಾಂತ್ ನಂದಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಭೀಮರಾಯ ಜಮಾದಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅನೇಕ ಸದ್ಭಕ್ತರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ಮರಣೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಗುರು ಕುಮಾರೇಶ್ವರ ವಿರಕ್ತ ಮಠ, ಅರ್ಜುಣಗಿ ಗ್ರಾಮದ ಸಮಸ್ತ ಮಂಡಳಿಯವರು ಮನವಿ ಮಾಡಿದ್ದಾರೆ.

-