ಕಾರ್ಮಿಕ ಮತ್ತು ಗ್ರಂಥಾಲಯ ಅಧಿಕಾರಿಗಳನ್ನು ಸೂಕ್ತ ಕ್ರಮ ಕೈಗೋಳದಿದ್ದರೆ ಕಾರ್ಮಿಕರ ಕಚೇರಿ ಎದುರುಗಡೆ ವಿನೂತನ ಪ್ರತಿಭಟನೆ

ಕಾರ್ಮಿಕ ಮತ್ತು ಗ್ರಂಥಾಲಯ ಅಧಿಕಾರಿಗಳನ್ನು ಸೂಕ್ತ ಕ್ರಮ ಕೈಗೋಳದಿದ್ದರೆ ಕಾರ್ಮಿಕರ ಕಚೇರಿ ಎದುರುಗಡೆ ವಿನೂತನ ಪ್ರತಿಭಟನೆ
ಕಲಬುರಗಿ: 2015-16ನೇ ಸಾಲಿನಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಪಾವತಿ ಮಾಡದ ಕಾರಣಕ್ಕೆ ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಛೇರಿಯನ್ನು ಜಪ್ತಿ ಮಾಡಿರುವ ಅಧಿಕಾರಿಗಳನ್ನು ಸೂಕ್ತ ಕ್ರಮ ಕೈಗೋಳಬೇಕೆಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂದಿಪ ಭರಣಿ ನೇತೃತ್ವದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
2015-16ನೇ ಸಾಲಿನ ಜಿಲ್ಲಾ ಕೇಂದ್ರ ಗ್ರಂಥಾಲಯ ಕಲಬುರಗಿ ಕಛೇರಿಯ ಗ್ರಂಥಾಲಯ ಮೇಲ್ವಿಚಾರಕರ ಕನಿಷ್ಠ ವೇತನ ಪಾವತಿ ಮಾಡದೆ ಇರುವುದಕ್ಕೆ ಮಾನ್ಯ ಕಾರ್ಮಿಕ ನ್ಯಾಯಲಯವು ಕಲಬುರಗಿಯ ಜಿಲ್ಲಾ ಕೇಂದ್ರ ಗ್ರಂಥಾಲಯ ಕಛೇರಿಯನ್ನು ಜಪ್ತಿ ಮಾಡಲಾಗಿದ್ದು, ಜಪ್ತಿ ಆದ ಪಿಠೋಪಕರಣ/ಸಾಮಾಗ್ರಿಗಳ ಪಟ್ಟಿ ಒದಗಿಸುವುದು. ಹಾಗೂ ಸಾಮಾನುಗಳ ವಿಲೇವಾರಿ ಕುರಿತಂತೆ ವಿವರಗಳನ್ನು ಸಲ್ಲಿಸಲು ಕೋರಲಾಗಿತ್ತು. ಉಲ್ಲೇಖ ಪತ್ರ 2ರಲ್ಲಿ ಉಪನಿರ್ದೇಶಕರು ಪ್ರಭಾರ, ಜಿಲ್ಲಾ ಕೇಂದ್ರ ಗ್ರಂಥಾಲಯ ಕಲಬುರಗಿರವರು ಕೇಳಿರುವ ಮಾಹಿತಿಗೆ ಜಪ್ತಿ ಆದ ಪೀಠೋಪಕರಣ/ಸಾಮಾಗ್ರಿಗಳನ್ನು ವಿಲೇವಾರಿ ಕುರಿತಂತೆ ಟೆಂಡರ ಪ್ರಕ್ರಿಯೆ ಕೈಗೊಂಡಿರುವುದಿಲ್ಲವೆAದು ತಿಳಿಸಿರುತ್ತಾರೆ.
ಸದರಿ ಪ್ರಕರಣದಲ್ಲಿ ಅಧಿಕಾರಿಗಳು ಮಾನ್ಯ ನ್ಯಾಯಲಯದಿಂದ ಜಪ್ತಿಯಾದ ಪೀಠೋಪಕರಣ/ಸಾಮಾಗ್ರಿಗಳನ್ನು ಯಾವುದೇ ಟೆಂಡರ್ ಪ್ರಕ್ರಿಯೆಯನ್ನು ತೆಗೆದುಕೊಳ್ಳದೆ ಮಾರಾಟ ಮಾಡಿ ಸುಮಾರು 10 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದು ಸರ್ಕಾರಕ್ಕೆ ವಿಲೇವಾರಿಯಾದ ಹಣವನ್ನು ಪಾವತಿಸದೆ ಸರ್ಕಾರಕ್ಕೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬAದಿರುತ್ತದೆ. ಸರ್ಕಾರದ ಆಸ್ತಿಯನ್ನು ಹಾಳು ಮಾಡಿರುವುದಲ್ಲದೇ ಸರ್ಕಾರದ ಹಣವನ್ನು ದುರುಪಯೋಗ ಮಾಡಿ ಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬಂದಿರುತ್ತದೆ.
ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಲು ಅನುಮತಿ ನೀಡಿದವರು ಯಾರು? ಮೇಲಾಧಿಕಾರಿಗಳ ಗಮನಕ್ಕೆ ತರದೆ ಶ್ರೀ ಆಜಯಕುಮಾರ ಉಪ-ನಿರ್ದೇಶಕರು ಜಿಲ್ಲಾ ಕೇಂದ್ರ ಗ್ರಂಥಾಲಯ ಕಲಬುರಗಿರವರು ಲಕ್ಷಾಂತರ ರೂಪಾಯಿ ಸರ್ಕಾರದ ಪೀಠೋಪಕರಣ/ಸಾಮಾಗ್ರಿಗಳನ್ನು ಸರ್ಕಾರದ ನಿಯಮಗಳನ್ನು ಉಲಂಘನೆ ಮಾಡಿ ಕಾನೂನು ಭಾಹಿರವಾಗಿ ಆನಧಿಕೃತವಾಗಿ ಮಾರಾಟ ಮಾಡಿಕೊಂಡು ಅದರ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ.
ಆದ್ದರಿAದ ಮಾನ್ಯರಾದ ತಾವುಗಳು ಈ ಅಧಿಕಾರಿಯ ಮೇಲೆ ಕಾನೂನಿನ ಮೂಲಕ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ಮಾಡಿದ ನಷ್ಟದ ಹಣವನ್ನು ಈ ಅಧಿಕಾರಿಯವರಿಂದ ವಸೂಲಿ ಮಾಡಬೇಕು ಮತ್ತು ಈ ಕೂಡಲೇ ಇವರನ್ನು ಅಮಾನತ್ತು ಮಾಡದಿದ್ದರೆ ನಗರದ ಕಾರ್ಮಿಕರ ಕಚೇರಿ ಎದುರುಗಡೆ ವಿನೂತನ ಪ್ರತಿಭಟನೆ ಹಮ್ಮಿಕೋಲ್ಳಾಗಿದೆ ಎಂದು ಭರಣಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.