ಸ್ವರ ಸಾಮ್ರಾಟ ಪ್ರಶಸ್ತಿಗೆ ಭಾಜನರಾದ ಕಲಾವಿದ ಬಾಬುರಾವ್ ಕೋಬಾಳ್

ಸ್ವರ ಸಾಮ್ರಾಟ ಪ್ರಶಸ್ತಿಗೆ ಭಾಜನರಾದ ಕಲಾವಿದ ಬಾಬುರಾವ್ ಕೋಬಾಳ್

ಸ್ವರ ಸಾಮ್ರಾಟ ಪ್ರಶಸ್ತಿಗೆ ಭಾಜನರಾದ ಕಲಾವಿದ ಬಾಬುರಾವ್ ಕೋಬಾಳ್

ವರದಿ: ಶಹಾಬಾದ್:ಶ್ರೀ ತೊನಸನಹಳ್ಳಿ ಪೀಠದಲ್ಲಿ ನಡೆಯುತ್ತಿರುವ ಶ್ರೀ ಅಲ್ಲಮಪ್ರಭು ಹಾಗೂ ಶ್ರೀ ಸುಲ್ತಾನ್ ಅಹ್ಮದ್ ಶಾವಲಿ ಜಾತ್ರಾ ಮಹೋತ್ಸವದ ಅಂಗವಾಗಿ, ದಿನಾಂಕ 07-04-2025 ರಂದು ಪ್ರಸಿದ್ಧ ಸಂಗೀತ ಕಲಾವಿದ ಶ್ರೀ ಬಾಬುರಾವ್ ಕೋಬಾಳ್ ಅವರಿಗೆ “2025ನೇ ಸಾಲಿನ ಸ್ವರ ಸಾಮ್ರಾಟ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಈ ಪುಣ್ಯ ಸಂದರ್ಭದಲ್ಲಿ ಸದ್ಗುರು ಶ್ರೀ ಮಲ್ಲಣ್ಣಪ್ಪ ಮಹಾರಾಜರು ಅವರ ಮಾರ್ಗದರ್ಶನದಲ್ಲಿ ನಡೆದ ಸಮಾರಂಭವು ಭಕ್ತಿಯಿಂದ ಕೂಡಿತ್ತು. ಮಠಾಧೀಶರು, ರಾಜಕೀಯ ನಾಯಕರು, ಕಲಾ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಶ್ರೀ ಬಾಬುರಾವ್ ಕೋಬಾಳ್ ಅವರು ದೀರ್ಘಕಾಲದಿಂದ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಪರೂಪದ ಸೇವೆ ಮತ್ತು ಪ್ರತಿಭೆಯನ್ನು ಗುರುತಿಸಿ, ಶ್ರೀ ಪೀಠವು ಅವರಿಗೆ ಈ ಗೌರವ ನೀಡಿದೆ.